ವಿಶಾಖಪಟ್ಟಣ : ಲಡಾಕ್, ಎಲ್ ಎಸಿ (LAC) ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಯುದ್ದಕ್ಕೆ ಕಾಲ್ಕೆರೆಯುತ್ತಿರುವಂತೆಯೇ, ಬಂಗಾಳ ಕೊಲ್ಲಿಯಲ್ಲಿ (Bay of Bengal) ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ಸಮರ ನೌಕೆಗಳು ಯುದ್ದಾಭ್ಯಾಸದಲ್ಲಿ ತೊಡಗಿವೆ. ಏಷ್ಯಾದ ನ್ಯಾಟೋ (NATO) ಪಡೆ ಎಂದೇ ಕರೆಯಲಾಗುವ ಕ್ವಾಡ್ (Quad) ದೇಶಗಳ (ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ) ನೌಕಾ ಪಡೆಗಳ ಸಮರಾಭ್ಯಾಸ ಚೀನಾಗೆ ತಣ್ಣಗೆ ನಡುಕ ಸೃಷ್ಟಿಸಿದೆ.
ಮಲಬಾರ್ ಡ್ರಿಲ್ (Malabar exercise)ಎಂದೇ ಕರೆಯಲಾಗುವ ಈ ಯುದ್ಧಾಭ್ಯಾಸ ಮಂಗಳವಾರ ಆರಂಭವಾಗಿದ್ದು, ಗುರುವಾರ ತನಕ ಮುಂದುವರಿಯಲಿದೆ. ಇದರ ಎರಡನೇ ಚರಣ ನವೆಂಬರ್ 17ರಿಂದ 20ರ ತನಕ ಅರಬ್ಬೀ ಸಮುದ್ರದಲ್ಲಿ ನಡೆಯಲಿದೆ.
ಕಡಲ ಶಕ್ತಿಯನ್ನು ಹೆಚ್ಚಿಸಲು ಭಾರತದ ದೊಡ್ಡ ಹೆಜ್ಜೆ, ಚೀನಾಕ್ಕೆ ಹೆಚ್ಚಿದ ಆತಂಕ
ನಾಲ್ಕೂ ದೇಶಗಳ ಸಮರ ನೌಕೆಗಳ ನಡುವಣ ಸಂಯೋಜಿತ ಕಾರ್ಯಾಚರಣೆ ಈ ಸಮರಾಭ್ಯಾಸದ ಮುಖ್ಯ ಉದ್ದೇಶವಾಗಿದೆ. ತುಂಬಾ ಕ್ಲಿಷ್ಟ ನೌಕಾಭ್ಯಾಸ, ಜಲಂತಾರ್ಗಾಮಿ ವಿನಾಶಕ ಕೌಶಲ್ಯ, ಯುದ್ಧ ವಿಮಾನ ವಿನಾಶಕ ಕಾರ್ಯಾಚರಣೆ, ಕ್ರಾಸ್ ಡೆಕ್ ಫ್ಲೈಯಿಂಗ್, ಶಸ್ತ್ರಾಭ್ಯಾಸ ಇವು ಮಲಬಾರ್ ಡ್ರಿಲ್ ನ ಇನ್ನಿತರ ಉದ್ದೇಶಗಳಾಗಿವೆ.
ಹಿಮಾಲಯದ ನೆರಳಲ್ಲಿ ಡ್ರ್ಯಾಗನ್ ಸಮರವ್ಯೂಹ, ಅರುಣಾಚಲದ ಗಡಿ ಸಮೀಪದಲ್ಲೇ ಓಡಲಿದೆ ಚೀನಾ ರೈಲು
13 ವರ್ಷಗಳ ನಂತರ ಆಸ್ಟ್ರೇಲಿಯಾ ಈ ಯುದ್ಧಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಇಲ್ಲಿಯವರೆಗೆ ಆಸ್ಟ್ರೇಲಿಯಾ ಈ ಡ್ರಿಲ್ ನಲ್ಲಿ ಸೇರಿರಲಿಲ್ಲ. ಚೀನಾದೊಂದಿಗಿನ ಸಂಬಂಧ ವೃದ್ಧಿಗೆ ಆಸ್ಟ್ರೇಲಿಯಾ ಮೊದಲ ಆದ್ಯತೆ ನೀಡಿತ್ತು. ಆದರೆ, ಇಂಡೋ ಪೆಸಿಫಿಕ್ (Indo-Pacific) ಸಾಗರದಲ್ಲಿ ಚೀನಾ ಆಕ್ರಮಕ ಧೋರಣೆ ಹೆಚ್ಚಿದಂತೆ, ಆಸ್ಟ್ರೇಲಿಯಾ ತನ್ನ ನಿಲುವು ಬದಲಿಸಿದೆ. ಕ್ವಾಡ್ ಸಮರಾಭ್ಯಾಸಕ್ಕೆ ಸೇರಿಕೊಂಡಿದೆ.
ಇಂಡೋಪೆಸಿಫಿಕ್ ಸಾಗರದಲ್ಲಿ ಚೀನಾ ವಿರುದ್ಧ ಚಕ್ರವ್ಯೂಹವನ್ನೇ ಸೃಷ್ಟಿಸಿವೆ ಭಾರತ, ಅಮೆರಿಕ, ಜಪಾನ್ ಅಸ್ಟ್ರೇಲಿಯಾ. ಇಂಡೋ ಪೆಸಿಫಿಕ್ ಸಾಗರದಲ್ಲಿ ಚೀನಾ ಚಟುವಟಿಕೆ ಹೆಚ್ಚಿದಂತೆ, ಜಾಗರೂಕವಾದ ಈ ನಾಲ್ಕೂ ದೇಶಗಳು ಸಾಗರ ವಲಯದಲ್ಲಿ ತಮ್ಮದೇ ಮೇಲುಗೈಗೆ ಸಮರ ತಂತ್ರ ರೂಪಿಸಿವೆ. ಚೀನಾ ಶೇ. 80ರಷ್ಟು ವಾಣಿಜ್ಯ ಚಟುವಟಿಕೆಗಳು ಈ ಮಾರ್ಗದಲ್ಲೇ ನಡೆಯುತ್ತದೆ. ಇಲ್ಲಿ ಮಲಕಾ ಜಲಸಂಧಿಯು ಸಮರ ತಂತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ದೇಶಗಳಿಗೂ ಮುಖ್ಯವಾಗಿದೆ. ಹಾಗಾಗಿ ಯುದ್ದ ಆರಂಭಿಸಿದರೆ, ವಿನಾಶ ನಿಶ್ಚಿತ ಎಂಬ ಸಂದೇಶವನ್ನು ಮಲಬಾರ್ ಡ್ರಿಲ್ ಚೀನಾಕ್ಕೆ ರವಾನಿಸಿದೆ. ಮಲಬಾರ್ ಡ್ರಿಲ್ ಗೆ ಚೀನಾ ಪ್ರತಿಕ್ರಿಯಿಸಿದ್ದು, ಈ ಸಮರಾಭ್ಯಾಸ ಪ್ರಾಂತೀಯ ಶಾಂತಿಗೆ ಪೂರಕವಾಗಲಿ ಎಂದು ಹೇಳಿದೆ.