ಗೋವಿನ ಸೆಗಣಿ ಮೊಬೈಲ್ ವಿಕರಣವನ್ನು ಕಡಿಮೆ ಮಾಡುತ್ತದೆ ಎಂದ ಕೇಂದ್ರ ಸರ್ಕಾರದ ಸಂಸ್ಥೆ ..!

ರಾಷ್ಟ್ರೀಯ ಕಾಮಧೇನು ಆಯೋಗದ (ಆರ್‌ಕೆಎ) ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಅವರು ಗೋವಿನ ಸಗಣಿಗಳಿಂದ ತಯಾರಿಸಿದ ಚಿಪ್ ನ್ನು ಅನಾವರಣಗೊಳಿಸಿದರು ಮತ್ತು ಇದು ಮೊಬೈಲ್ ಹ್ಯಾಂಡ್‌ಸೆಟ್‌ಗಳಿಂದ ವಿಕಿರಣವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ರಕ್ಷಣೆಯಾಗಿದೆ ಎಂದು ಹೇಳಿದ್ದಾರೆ.

Last Updated : Oct 13, 2020, 06:23 PM IST
ಗೋವಿನ ಸೆಗಣಿ ಮೊಬೈಲ್ ವಿಕರಣವನ್ನು ಕಡಿಮೆ ಮಾಡುತ್ತದೆ ಎಂದ ಕೇಂದ್ರ ಸರ್ಕಾರದ ಸಂಸ್ಥೆ ..! title=
Photo Courtesy: ANI

ನವದೆಹಲಿ: ರಾಷ್ಟ್ರೀಯ ಕಾಮಧೇನು ಆಯೋಗದ (ಆರ್‌ಕೆಎ) ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಅವರು ಗೋವಿನ ಸಗಣಿಗಳಿಂದ ತಯಾರಿಸಿದ ಚಿಪ್ ನ್ನು ಅನಾವರಣಗೊಳಿಸಿದರು ಮತ್ತು ಇದು ಮೊಬೈಲ್ ಹ್ಯಾಂಡ್‌ಸೆಟ್‌ಗಳಿಂದ ವಿಕಿರಣವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ರಕ್ಷಣೆಯಾಗಿದೆ ಎಂದು ಹೇಳಿದ್ದಾರೆ.

ಹಸುವಿನ ಉತ್ಪನ್ನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ರಾಷ್ಟ್ರವ್ಯಾಪಿ ಅಭಿಯಾನ 'ಕಾಮಧೇನು ದೀಪಾವಳಿ ಅಭಿಯಾನ್' ಕ್ಕೆ ಚಾಲನೆ ನೀಡಿ ಮಾತನಾಡಿದ ವಲ್ಲಭಭಾಯ್ ಕಥಿರಿಯಾ: "ಹಸು ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ, ಇದು ವಿಕಿರಣ ವಿರೋಧಿಯಾಗಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ...ಇದು ವಿಕಿರಣ ಚಿಪ್ ಆಗಿದ್ದು, ವಿಕಿರಣವನ್ನು ಕಡಿಮೆ ಮಾಡಲು ಮೊಬೈಲ್ ಫೋನ್‌ಗಳಲ್ಲಿ ಬಳಸಬಹುದು ಎಂದು ಹೇಳಿದರು.

ಇದನ್ನು ಓದಿ: Video:ಪತಂಜಲಿಗಾಗಿ ಹಾಲು ಕರೆದ ರಾಮದೇವ್!

ಗೌಸತ್ವ ಕವಚ್ ಹೆಸರಿನ 'ಚಿಪ್' ಅನ್ನು ರಾಜ್‌ಕೋಟ್ ಮೂಲದ ಶ್ರೀಜಿ ಗೌಶಾಲಾ ತಯಾರಿಸಿದ್ದಾರೆ. 2019 ರಲ್ಲಿ ಸ್ಥಾಪನೆಯಾದ ಆರ್‌ಕೆಎ ಹಸುಗಳ ಸಂರಕ್ಷಣೆ, ರಕ್ಷಣೆ ಮತ್ತು ಅಭಿವೃದ್ಧಿ ಮತ್ತು ಅವುಗಳ ಸಂತತಿಯನ್ನು ಗುರಿಯಾಗಿರಿಸಿಕೊಂಡಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವ್ಯಾಪ್ತಿಗೆ ಬರುವ ಆಯೋಗ್ ಹಬ್ಬದ ಸಮಯದಲ್ಲಿ ಗೋವು ಆಧಾರಿತ ಉತ್ಪನ್ನಗಳನ್ನು ಬಳಸುವುದನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.

ಈ ದೀಪಾವಳಿಯಲ್ಲಿ ಚೀನಾ ನಿರ್ಮಿತ ದಿಯಾಗಳನ್ನು ಬಳಸುವುದನ್ನು ತಪ್ಪಿಸಬೇಕೆಂದು ವಲ್ಲಭಭಾಯ್ ಕಥಿರಿಯಾ ಜನರು ಮನವಿ ಮಾಡಿದರು, ಆರ್ಕೆಎ ಪ್ರಾರಂಭಿಸಿದ ಅಭಿಯಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ '' ಮೇಕ್ ಇನ್ ಇಂಡಿಯಾ '' ಪರಿಕಲ್ಪನೆ ಮತ್ತು ಸ್ವದೇಶಿ ಆಂದೋಲನವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

Trending News