ಲಕ್ನೋ: ಉತ್ತರ ಪ್ರದೇಶದಲ್ಲಿ ಹೊಸ ಕೋವಿಡ್ -19 (Covid 19) ಪ್ರಕರಣಗಳು ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ -19 ರ ನಿಯಂತ್ರಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಇಂದಿನಿಂದ ಇನ್ನೂ ಕೆಲವು ವಿನಾಯಿತಿ ನೀಡುತ್ತಿದ್ದು ಸೋಮವಾರದಿಂದ ಸಿನೆಮಾ ಹಾಲ್ಗಳು (Cinema Hall), ಮಲ್ಟಿಪ್ಲೆಕ್ಸ್ಗಳು, ಜಿಮ್ಗಳು ಮತ್ತು ಕ್ರೀಡಾಂಗಣಗಳನ್ನು ಮತ್ತೆ ತೆರೆಯಲು ಅನುಮತಿ ನೀಡಿದೆ. ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಅನ್ಲಾಕ್ ಪ್ರಕ್ರಿಯೆಗೆ ಹೊಸ ಮಾರ್ಗಸೂಚಿ ಬಿಡುಗಡೆ:
ರಾಜ್ಯದಲ್ಲಿ ಇಂದಿನಿಂದ ಅನ್ಲಾಕ್ (Unlock) ಪ್ರಕ್ರಿಯೆಯಡಿಯಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿ ಭಾನುವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಕೋವಿಡ್ ಪ್ರೋಟೋಕಾಲ್ (Covid Protocol) ಪ್ರಕಾರ ಸಿನೆಮಾ ಹಾಲ್ಗಳು, ಮಲ್ಟಿಪ್ಲೆಕ್ಸ್ ಸಿನೆಮಾ ಹಾಲ್ಗಳು, ಜಿಮ್ಗಳು ಮತ್ತು ಕ್ರೀಡಾ ಕ್ರೀಡಾಂಗಣಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೋಮ್ ಅವ್ನಿಶ್ ಕುಮಾರ್ ಅವಸ್ಥಿ ತಿಳಿಸಿದ್ದಾರೆ.
ಇದನ್ನೂ ಓದಿ- ಕರೋನಾ ಸಂಖ್ಯೆಯಲ್ಲಿ ಗಣನೀಯ ಇಳಿಮುಖ..!ಅನ್ ಲಾಕ್ ನತ್ತ ಭಾರತ
ರಾಜ್ಯದಲ್ಲಿ ನಿಷೇಧಿತ ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಭಾಗಗಳಲ್ಲಿ ಸಿನೆಮಾ ಹಾಲ್ಗಳು, ಮಲ್ಟಿಪ್ಲೆಕ್ಸ್ ಸಿನೆಮಾ ಹಾಲ್ಗಳು (Cinema Hall), ಜಿಮ್ಗಳು ಮತ್ತು ಕ್ರೀಡಾಂಗಣಗಳನ್ನು ಸೋಮವಾರದಿಂದ ವಾರಕ್ಕೆ ಐದು ದಿನಗಳವರೆಗೆ (ಸೋಮವಾರದಿಂದ ಶುಕ್ರವಾರದವರೆಗೆ) ಕೋವಿಡ್ ಪ್ರೋಟೋಕಾಲ್ಗೆ ಅನುಸಾರವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವುದು ಅವಶ್ಯಕ:
ರಾಜ್ಯದಲ್ಲಿ ಕರೋನಾ (Coronavirus) ಸಾಂಕ್ರಾಮಿಕದಿಂದ ಸಿನೆಮಾ, ಮಲ್ಟಿಪ್ಲೆಕ್ಸ್ಗಳು, ಜಿಮ್ಗಳು ಮತ್ತು ಕ್ರೀಡಾಂಗಣಗಳು ಮುಚ್ಚಲ್ಪಟ್ಟಿದ್ದರಿಂದ ನಿರ್ವಾಹಕರ ವ್ಯವಹಾರದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇದೀಗ ಸರ್ಕಾರದ ಈ ನಿರ್ಧಾರವು ಸಿನಿಮಾ ಮಾಲೀಕರು ಮತ್ತು ಸಿನಿಮಾ ಪ್ರಿಯರಿಗೆ ಸಮಾಧಾನಕರ ಸುದ್ದಿಯಾಗಿದೆ. ಆದರೆ ಈ ವಿನಾಯಿತಿ ವಾರದಲ್ಲಿ 5 ದಿನಗಳವರೆಗೆ ಇರುತ್ತದೆ ಮತ್ತು ಸಾಪ್ತಾಹಿಕ ಮುಚ್ಚುವಿಕೆಯು ಶನಿವಾರ ಮತ್ತು ಭಾನುವಾರದಂದು ಮುಂದುವರಿಯುತ್ತದೆ. ಆದರೆ ಈ ಸಂದರ್ಭದಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವುದು ಸಹ ಬಹಳ ಮುಖ್ಯ, ಈ ನಿಟ್ಟಿನಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ- Lockdown Unlock Update: ಕೋವಿಡ್ ನಿರ್ವಹಣೆಗಾಗಿ 5 ಹಂತದ ತಂತ್ರದತ್ತ ಗಮನ ಹರಿಸಿ- ರಾಜ್ಯಗಳಿಗೆ ಕೇಂದ್ರದ ಸೂಚನೆ
ಮುಂದಿನ ಆದೇಶದವರೆಗೆ ಈ ಸೇವೆಗಳು ಬಂದ್:
ಅದಾಗ್ಯೂ, ಸರ್ಕಾರದ ಮುಂದಿನ ಆದೇಶದವರೆಗೆ ಈಜುಕೊಳಗಳು ಮೊದಲಿನಂತೆ ಮುಚ್ಚಲ್ಪಡುತ್ತವೆ. ಮದುವೆ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಒಂದು ಸಮಯದಲ್ಲಿ ಗರಿಷ್ಠ 50 ಜನರನ್ನು ಒಟ್ಟುಗೂಡಿಸುವ ಬಗ್ಗೆ ವಿನಾಯಿತಿ ಇರುತ್ತದೆ. ಅದಾಗ್ಯೂ ರಾಜಕೀಯ ಮತ್ತು ಸಾಮಾಜಿಕ ಸಭೆಗಳು ಮತ್ತು ಕೂಟಗಳನ್ನು ಮೊದಲಿನಂತೆ ನಿಷೇಧಿಸಲಾಗುವುದು ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.