Lockdown Unlock Update: ಕೋವಿಡ್ ನಿರ್ವಹಣೆಗಾಗಿ 5 ಹಂತದ ತಂತ್ರದತ್ತ ಗಮನ ಹರಿಸಿ- ರಾಜ್ಯಗಳಿಗೆ ಕೇಂದ್ರದ ಸೂಚನೆ

Lockdown Unlock Update: ಪರಿಣಾಮಕಾರಿ COVID-19 ನಿರ್ವಹಣೆಗೆ ಐದು ಹಂತದ ಕಾರ್ಯತಂತ್ರವನ್ನು ಕೇಂದ್ರೀಕರಿಸುವಂತೆ ಕೇಂದ್ರ ಸರ್ಕಾರ ಮಂಗಳವಾರ ರಾಜ್ಯಗಳಿಗೆ ಸೂಚನೆ ನೀಡಿದೆ.

Written by - Yashaswini V | Last Updated : Jun 30, 2021, 08:45 AM IST
  • ಕರೋನಾವೈರಸ್‌ನ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಆಗುತ್ತಿದ್ದಂತೆ ಅನೇಕ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿವೆ
  • ನಿರ್ಬಂಧಗಳನ್ನು ಸರಾಗಗೊಳಿಸುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಯೋಜಿಸಬೇಕು
  • ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಸಲಹೆಯಂತೆ ರಾಜ್ಯಗಳು ಉದ್ದೇಶಿತ ಕ್ರಮ ಕೈಗೊಳ್ಳಬೇಕು- ಕೇಂದ್ರ ಗೃಹ ಕಾರ್ಯದರ್ಶಿ
Lockdown Unlock Update: ಕೋವಿಡ್ ನಿರ್ವಹಣೆಗಾಗಿ 5 ಹಂತದ ತಂತ್ರದತ್ತ ಗಮನ ಹರಿಸಿ- ರಾಜ್ಯಗಳಿಗೆ ಕೇಂದ್ರದ ಸೂಚನೆ title=
ಪರಿಣಾಮಕಾರಿ ಕೋವಿಡ್-19 ನಿರ್ವಹಣೆಗೆ 5-ಹಂತದ ಕಾರ್ಯತಂತ್ರದತ್ತ ಗಮನ ಹರಿಸಿ

Lockdown Unlock Update:  ಪರಿಣಾಮಕಾರಿ ಕೋವಿಡ್-19 (COVID-19) ನಿರ್ವಹಣೆಗೆ 5-ಹಂತದ ಕಾರ್ಯತಂತ್ರವನ್ನು ಕೇಂದ್ರೀಕರಿಸುವಂತೆ ಕೇಂದ್ರ ಸರ್ಕಾರ ಮಂಗಳವಾರ ರಾಜ್ಯಗಳಿಗೆ ಕರೆ ನೀಡಿದೆ. ಇದರೊಂದಿಗೆ, ನಿರ್ಬಂಧಗಳನ್ನು ಸರಾಗಗೊಳಿಸುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ನಿರ್ಧರಿಸಬೇಕು ಎಂದು ಕೇಂದ್ರವು ರಾಜ್ಯಗಳಿಗೆ ಸೂಚಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಜುಲೈ ತಿಂಗಳಿಗೆ COVID-19 ನಿರ್ವಹಣೆ ಕುರಿತು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತಗಳಿಗೆ ಸಲಹೆ ನೀಡಿದ್ದು ಪ್ರತಿ 10 ಲಕ್ಷ ಜನಸಂಖ್ಯೆಗೆ ಕರೋನಾವೈರಸ್ ಸಕ್ರಿಯವಾಗಿರುವ ಜಿಲ್ಲೆಗಳನ್ನು ರಾಜ್ಯಗಳು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದಿದ್ದಾರೆ.

ಕರೋನಾವೈರಸ್‌ನ (Coronavirus) ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಆಗುತ್ತಿದ್ದಂತೆ ಅನೇಕ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿವೆ. ನಿರ್ಬಂಧಗಳನ್ನು ಸರಾಗಗೊಳಿಸುವ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಯೋಜಿಸಬೇಕು ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಸಲಹೆಯಂತೆ ರಾಜ್ಯಗಳು ಉದ್ದೇಶಿತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ (Ajay Bhalla) ಹೇಳಿದರು.

ಇದನ್ನೂ ಓದಿ - Corona Vaccine New Guidelines: ಗರ್ಭಿಣಿಯರಿಗೆ ಕರೋನ ಲಸಿಕೆ ಸುರಕ್ಷಿತವಾಗಿದೆಯೇ? ಇಲ್ಲಿದೆ ಹೊಸ ಮಾರ್ಗಸೂಚಿ

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಜಿಲ್ಲೆಗಳನ್ನು ಆಡಳಿತಾತ್ಮಕ ಘಟಕಗಳಾಗಿ ತೆಗೆದುಕೊಳ್ಳುವ ಮೂಲಕ ನಿಯಮಿತವಾಗಿ ಕರೋನಾವೈರಸ್ (Coronavirus) ಪ್ರಕರಣಗಳ ಸಕಾರಾತ್ಮಕತೆ ಮತ್ತು ಹಾಸಿಗೆಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.  ಧಾರಕ ಕ್ರಮಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಮತ್ತು ಆರೋಗ್ಯ ಮೂಲಸೌಕರ್ಯಗಳ ನವೀಕರಣಗಳ ಬಗ್ಗೆ ಒತ್ತು ನೀಡುವುದು ಅವಶ್ಯಕ ಎಂದು ಇದರಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಸೋಂಕು ಪ್ರಮಾಣ ಹೊಂದಿರುವ ಜಿಲ್ಲೆಗಳಿಗೆ ನಿರ್ಬಂಧ ಹೇರುವುದನ್ನು ರಾಜ್ಯಗಳು ಪರಿಗಣಿಸಬಹುದು. 'ಕೋವಿಡ್ -19 (Covid 19) ರ ಪರಿಣಾಮಕಾರಿ ನಿರ್ವಹಣೆಗಾಗಿ, ಐದು ಹಂತದ ಕಾರ್ಯತಂತ್ರಕ್ಕೆ ನಿರಂತರ ಗಮನ ನೀಡಬೇಕು. ಅಂದರೆ ಪರೀಕ್ಷೆ-ಸೋಂಕು-ಪತ್ತೆ-ಚಿಕಿತ್ಸೆ-ವ್ಯಾಕ್ಸಿನೇಷನ್ ಮತ್ತು ಕೋವಿಡ್-ಸೂಕ್ತವಾದ ನಡವಳಿಕೆಯನ್ನು ಅನುಸರಿಸುವುದು' ಬಹಳ ಮುಖ್ಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ -  Covishield Vaccine Updates: ಎರಡು ಪ್ರಮಾಣಗಳ ನಡುವಿನ ಅಂತರ 10 ತಿಂಗಳು ಇದ್ದರೆ ಮತ್ತಷ್ಟು ಉತ್ತಮ ಎಂದ ಅಧ್ಯಯನ

ಗೃಹ ಸಚಿವಾಲಯದ (Health Ministry) ಹಿಂದಿನ ಆದೇಶಗಳು ಮತ್ತು ಸಲಹೆಗಳಲ್ಲಿ ಒತ್ತಿಹೇಳಿದಂತೆ, ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗುವುದನ್ನು ತಪ್ಪಿಸಲು ಕರೋನಾ ಸೂಕ್ತವಾದ ನಡವಳಿಕೆಯನ್ನು ಅನುಸರಿಸುವುದು ಮುಖ್ಯ ಎಂದು ಭಲ್ಲಾ ಹೇಳಿದರು. ನಿರ್ಬಂಧಗಳನ್ನು ಸರಾಗಗೊಳಿಸುವಾಗ, COVID-19 ಸೂಕ್ತವಾದ ನಡವಳಿಕೆಯನ್ನು ಅನುಸರಿಸುವಲ್ಲಿ ಯಾವುದೇ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಗೃಹ ಕಾರ್ಯದರ್ಶಿ ತಿಳಿಸಿದರು.

'ಆದ್ದರಿಂದ, ಆರೋಗ್ಯ ಸಚಿವಾಲಯವು ಕೋವಿಡ್ -19 ರ ನಿರ್ವಹಣೆಗಾಗಿ ಜೂನ್ 28 ರ ಪತ್ರದಲ್ಲಿ ಉಲ್ಲೇಖಿಸಿರುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲೆಗಳಿಗೆ ಮತ್ತು ಇತರ ಎಲ್ಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುವಂತೆ ನಾನು ವಿನಂತಿಸುತ್ತೇನೆ' ಎಂದು ಭಲ್ಲಾ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News