Auto-Taxi ಚಾಲಕರಿಗೆ 5 ಸಾವಿರ ರೂ. ಹಾಗೂ ಬಡವರಿಗೆ 2 ತಿಂಗಳ ಉಚಿತ ಪಡಿತರ ನೀಡಲು ಮುಂದಾಗಿದೆ ಈ ಸರ್ಕಾರ

Financial Help To Auto-Taxi Drivers -ಕರೋನಾ ಸಾಂಕ್ರಾಮಿಕ ಕಾಲದಲ್ಲಿ ಸಾರ್ವಜನಿಕರಿಗೆ ಪರಿಹಾರ ನೀಡಲು ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ದೊಡ್ಡ ನಿರ್ಧಾರ ಕೈಗೊಂಡಿದೆ. ಈ ಕರೋನಾ ಬಿಕ್ಕಟ್ಟಿನಲ್ಲಿ ಸಾಮಾನ್ಯ ಜನರಿಗೆ ಸಹಾಯ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

Written by - Nitin Tabib | Last Updated : May 4, 2021, 01:51 PM IST
  • ದೆಹಲಿಯ 72 ಲಕ್ಷ ಪಡಿತರ ಚೀಟಿಧಾರಕರಿಗೆ 2 ತಿಂಗಳು ಉಚಿತ ಪಡಿತರ .
  • ಆಟೋ-ಟ್ಯಾಕ್ಸಿ ಚಾಲಕರಿಗೆ ಪ್ರತ್ಯೇಕ 5 ಸಾವಿರ ಸಹಾಯ ಧನ.
  • ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್ ಅವರಿಂದ ಘೋಷಣೆ.
Auto-Taxi ಚಾಲಕರಿಗೆ 5 ಸಾವಿರ ರೂ. ಹಾಗೂ ಬಡವರಿಗೆ 2 ತಿಂಗಳ ಉಚಿತ ಪಡಿತರ ನೀಡಲು ಮುಂದಾಗಿದೆ ಈ ಸರ್ಕಾರ title=
Delhi CM Arvind Kejriwal (File Photo)

ನವದೆಹಲಿ: Financial Help To Auto-Taxi Drivers - ಕರೋನಾ ಸಾಂಕ್ರಾಮಿಕದಲ್ಲಿ (Corona Pandemic) ಸಾರ್ವಜನಿಕರಿಗೆ ಪರಿಹಾರ ನೀಡಲು ದೆಹಲಿಯ ಅರವಿಂದ್ ಕೇಜ್ರಿವಾಲ್  (Arvind Kejriwal) ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ದೆಹಲಿಯಲ್ಲಿ 72 ಮಿಲಿಯನ್ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಪಡಿತರ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.

ಮುಂದಿನ ಎರಡು ತಿಂಗಳ ಅವಧಿಗೆ ಉಚಿತ ಪಡಿತರ (Free Ration)
ಮುಂದಿನ 2 ತಿಂಗಳ ಅವಧಿಯವರೆಗೆ ಮನರಿಗೆ  ಉಚಿತ ಪಡಿತರವನ್ನು ನೀಡಲಾಗುವುದು ಎಂದು ಸಿಎಂ ಕೇಜ್ರಿವಾಲ್ (CM Arvind Kejriwal) ಹೇಳಿದ್ದಾರೆ.  ಆದರೆ, ಮುಂದಿನ ಎರಡು ತಿಂಗಳುಗಳವರೆಗೆ ಲಾಕ್‌ಡೌನ್ ವಿಸ್ತರಣೆಯಾಗಲಿದೆ ಎಂಬುದು ಇದರ  ಅರ್ಥವಲ್ಲ. ಈ ಘೋಷಣೆ ಮಾಡಲಾಗುತ್ತಿರುವುದು ಬಡವರ ವ್ಯಾಪಾರ ಸ್ಥಗಿತಗೊಂಡಿದ್ದರಿಂದ ಮಾತ್ರ. ಈ ಸಾಂಕ್ರಾಮಿಕ ಸಮಯದಲ್ಲಿ ಅವರಿಗೆ ಸರ್ಕಾರದಿಂದ ಸ್ವಲ್ಪ ಸಹಾಯ ಮತ್ತು ನೆಮ್ಮದಿ ಒದಗಿಸುವುದು ಇದರ ಉದ್ದೇಶ ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಅವರು ದೆಹಲಿಯಲ್ಲಿ ಲಾಕ್ ಡೌನ್ (Lockdown) ಘೋಷಣೆ ಅನಿವಾರ್ಯವಾಗಿತ್ತು. ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಆದರೆ, ಲಾಕ್ ಡೌನ್ ಕಾರಣ ಅದರಲ್ಲೂ ವಿಶೇಷವಾಗಿ ಬಡವರಿಗೆ ಭಾರಿ ಸಂಕಟ ಎದುರಾಗುತ್ತದೆ. ದಿನಗೂಲಿ ಕಾರ್ಮಿಕರ ಮುಂದೆ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂದು 72 ಲಕ್ಷ ಪಡಿತರ ಚಿಟಿ ಹೊಂದಿದವರಿಗೆ ಮುಂದಿನ ಎರಡು ತಿಂಗಳುಗಳ ಕಾಲ ಉಚಿತ ಪಡಿತರ ನೀಡಲಾಗುವುದು. ಜೊತೆಗೆ ಆಟೋ ಹಾಗೂ ಟ್ಯಾಕ್ಸಿ (Financial Help To Auto-Taxi Drivers)ಚಾಲಕರಿಗೆ ಪ್ರತ್ಯೇಕ 5-5 ಸಾವಿರ ರೂ. ಸಹಾಯ ಧನ ನೀಡಲಾಗುವುದು. ಕಳೆದ ಬಾರಿಯ ಲಾಕ್ ಡೌನ್ ಅವಧಿಯಲ್ಲಿಯೂ ಕೂಡ ದೆಹಲಿ ಸರ್ಕಾರ 1 ಲಕ್ಷ 56 ಸಾವಿರ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ನೆರವು ಒದಗಿಸಿತ್ತು ಎಂದು ಹೇಳಿದ್ದಾರೆ. 

ಇದನ್ನೂ ಓದಿ- BREAKING: ಕೊರೋನಾ ಹೆಚ್ಚಳ ಹಿನ್ನೆಲೆ IPL 2021 ರದ್ದುಗೊಳಿಸಿದ ಬಿಸಿಸಿಐ!

ಕೊರೊನಾ ಎರಡನೇ ಅಲೆ ತುಂಬಾ ಅಪಾಯಕಾರಿಯಾಗಿದೆ
ಈ ವೇಳೆ ಕೊರೊನಾ ವೈರಸ್ ನ ಎರಡನೇ ಅಲೆ ಭಾರಿ ಅಪಾಯಕಾರಿಯಾಗಿದೆ. ಹೀಗಾಗಿ ಪರಸ್ಪರ ಸಹಾಯ ಮಾಡಿ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಉಚಿತವಲ್ಲ. ಕಾಯಿಲೆಗೆ ಗುರಿಯಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು, ಬೆಡ್ ಸಿಗದೇ ಇರುವ ಸಂದರ್ಭದಲ್ಲಿ ಅವರಿಗಾಗಿ ವ್ಯವಸ್ಥೆ ಮಾಡಲು, ಆಕ್ಸಿಜನ್ ದೊರಕಿಸಿಕೊಳಲು ಸಹಾಯ ಮಾಡಿ. ಪರಿಸ್ಥಿತಿಯಲ್ಲಿ ಸುಧಾರಣೆಯಾದ ಬಳಿಕ ಆದಷ್ಟು ಬೇಗ ಲಾಕ್ ಡೌನ್ ತೆರೆವುಗೊಳಿಸುವ ಪ್ರಯತ್ನ ತಮ್ಮ ಸರ್ಕಾರದ್ದಾಗಿರಲಿದೆ.

ಇದನ್ನೂ ಓದಿ- Yash Raj Films: 30 ಸಾವಿರ ಸಿನಿ ಕಾರ್ಮಿಕರ ಉಚಿತ ವ್ಯಾಕ್ಸಿನೇಷನ್ ಜವಾಬ್ದಾರಿ ಹೊತ್ತ YRF

ದೆಹಲಿಯಲ್ಲಿ ಲಾಕ್ ಡೌನ್
ಎಲ್ಲಕ್ಕಿಂತ ಮೊದಲು ಏಪ್ರಿಲ್ 19 ರಂದು ದೆಹಲಿಯಲ್ಲಿ ಆರು ದಿನಗಳ ಲಾಕ್ ಡೌನ್(Lockdown) ಘೋಷಿಸಲಾಗಿತ್ತು ಮತ್ತು ಇದು ಏಪ್ರಿಲ್ 25 ರವರೆಗೆ ಜಾರಿಯಲ್ಲಿತ್ತು. ಬಳಿಕ ಈ ಲಾಕ್ ಡೌನ್ ಅನ್ನು ಅವರು ಮೇ 3 ರವರೆಗೆ ವಿಸ್ತರಿಸಿದ್ದರು. ಆನಂತರ ಮೇ 1 ರಂದು ಪುನಃ ಲಾಕ್ ಡೌನ್ ಅನ್ನು ಒಂದು ವಾರದ ಕಾಲ ವಿಸ್ತರಿಸಲಾಗಿದೆ.

ಇದನ್ನೂ ಓದಿ- Coronavirus : ಇದೆಂಥಾ ಕಲಿಗಾಲ..! ಸ್ಮಶಾನದ ಮುಂದೆಯೂ ಹೌಸ್ ಫುಲ್ ಬೋರ್ಡ್ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News