Corona Pandemic: 70 ಜಿಲ್ಲೆಗಳಲ್ಲಿ 70 ಜಿಲ್ಲೆಗಳಲ್ಲಿ ಕರೋನಾ ರೋಗಿಗಳಲ್ಲಿ 150% ಹೆಚ್ಚಳ

ಮಾರ್ಚ್ 1 ರಂದು ಹೊಸದಾಗಿ 7,741 ಸೋಂಕು ಪ್ರಕರಣಗಳು ಕಂಡುಬಂದವು. ಮಾರ್ಚ್ 15 ರ ಹೊತ್ತಿಗೆ ಈ ಸಂಖ್ಯೆ ಸರಾಸರಿ 13,527 ಕ್ಕೆ ಏರಿತು. ಮಾರ್ಚ್ 1 ರಂದು ಸೋಂಕಿನ ಪ್ರಮಾಣವು ಶೇಕಡಾ 11 ರಷ್ಟಿತ್ತು, ಇದು ಮಾರ್ಚ್ 15 ರ ವೇಳೆಗೆ 16 ಪ್ರತಿಶತಕ್ಕೆ ಏರಿತು.  

Written by - Yashaswini V | Last Updated : Mar 18, 2021, 08:50 AM IST
  • ಒಟ್ಟು 70 ಜಿಲ್ಲೆಗಳಲ್ಲಿ ಗರಿಷ್ಠ ಪ್ರಕರಣಗಳು
  • 16 ರಾಜ್ಯಗಳ ಸುಮಾರು 70 ಜಿಲ್ಲೆಗಳಲ್ಲಿ ಮಾರ್ಚ್ 1 ರಿಂದ ಮಾರ್ಚ್ 15 ರವರೆಗೆ ಕೋವಿಡ್ -19 ರೋಗಿಗಳ ಸಂಖ್ಯೆ 150 ರಷ್ಟು ಹೆಚ್ಚಳ
  • ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಜೇಶ್ ಭೂಷಣ್
Corona Pandemic: 70 ಜಿಲ್ಲೆಗಳಲ್ಲಿ 70 ಜಿಲ್ಲೆಗಳಲ್ಲಿ ಕರೋನಾ ರೋಗಿಗಳಲ್ಲಿ 150% ಹೆಚ್ಚಳ title=
Image courtesy: PTI

ನವದೆಹಲಿ : ಮಾರ್ಚ್ 1 ರಿಂದ ಮಾರ್ಚ್ 15 ರ ನಡುವೆ 16 ರಾಜ್ಯಗಳ ಒಟ್ಟು 70 ಜಿಲ್ಲೆಗಳಲ್ಲಿ ಕೋವಿಡ್ -19 (Covid 19) ರೋಗಿಗಳ ಸಂಖ್ಯೆ 150 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಈ ಜಿಲ್ಲೆಗಳಲ್ಲಿ ಹೆಚ್ಚಿನವು ಪಶ್ಚಿಮ ಮತ್ತು ಉತ್ತರ ಭಾರತದ ಜಿಲ್ಲೆಗಳಾಗಿವೆ ಎಂದು ತಿಳಿಸಿದ್ದಾರೆ. 

ಒಟ್ಟು 70 ಜಿಲ್ಲೆಗಳಲ್ಲಿ ಗರಿಷ್ಠ ಪ್ರಕರಣಗಳು :
16 ರಾಜ್ಯಗಳ ಸುಮಾರು 70 ಜಿಲ್ಲೆಗಳಲ್ಲಿ ಮಾರ್ಚ್ 1 ರಿಂದ ಮಾರ್ಚ್ 15 ರವರೆಗೆ, ಕೋವಿಡ್ -19 (Covid 19) ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆಯಲ್ಲಿ 150 ಪ್ರತಿಶತದಷ್ಟು ಹೆಚ್ಚಳವಾಗಿದೆ ಮತ್ತು 17 ರಾಜ್ಯಗಳ 55 ಜಿಲ್ಲೆಗಳು 100-150 ರಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಅವರು ಹೇಳಿದರು. ಈ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಅಭಿಯಾನವನ್ನು ತ್ವರಿತಗೊಳಿಸಲು ಮತ್ತು ಎಲ್ಲಾ ಫಲಾನುಭವಿಗಳಿಗೆ ಲಸಿಕೆ ನೀಡುವಂತೆ ಕೇಳಿದ್ದೇವೆ ಎಂದು ಭೂಷಣ್ ಮಾಹಿತಿ ನೀಡಿದರು.

ಇದನ್ನೂ ಓದಿ - ಕರೋನಾ ನಿಯಂತ್ರಣಕ್ಕೆ ಗಮನ ಕೊಡುವಂತೆ ಸಿಎಂಗೆ ಪ್ರಧಾನಿ ಸೂಚನೆ

ಮಹಾರಾಷ್ಟ್ರ ಒಂದರಲ್ಲೇ 60 ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ :
ರಾಜ್ಯಗಳಲ್ಲಿ ಕೊರೊನಾವೈರಸ್ ಪ್ರಕರಣಗಳ ಹೆಚ್ಚಳ ಕುರಿತು ಮಾಹಿತಿ ನೀಡಿದ ಅವರು, ' ಕರೋನಾ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ರೋಗಿಗಳಲ್ಲಿ 60 ಪ್ರತಿಶತದಷ್ಟು ರೋಗಿಗಳು ಮಹಾರಾಷ್ಟ್ರ (Maharashtra) ದಲ್ಲಿದ್ದಾರೆ ಮತ್ತು ಸಾಂಕ್ರಾಮಿಕ ರೋಗದಿಂದ ಇತ್ತೀಚಿನ ಸಾವುಗಳಲ್ಲಿ 45 ಪ್ರತಿಶತವು ಮಹಾರಾಷ್ಟ್ರದಿಂದ ಬಂದಿದೆ' ಎಂದು ಹೇಳಿದರು. 

'ಮಾರ್ಚ್ 1 ರಂದು 7,741 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಮಾರ್ಚ್ 15 ರ ಹೊತ್ತಿಗೆ ಈ ಸಂಖ್ಯೆ ಸರಾಸರಿ 13,527 ಕ್ಕೆ ಏರಿತು. ಮಾರ್ಚ್ 1 ರಂದು ಸೋಂಕಿನ ಪ್ರಮಾಣವು ಶೇಕಡಾ 11 ರಷ್ಟಿತ್ತು, ಇದು ಮಾರ್ಚ್ 15 ರ ವೇಳೆಗೆ 16 ಪ್ರತಿಶತಕ್ಕೆ ಏರಿತು ಎಂದವರು ಕರೋನಾವೈರಸ್ ಏರಿಕೆಯ ಅಂಕಿ-ಅಂಶಗಳನ್ನು ಒದಗಿಸಿದರು.

ಇದನ್ನೂ ಓದಿ - Corona Return: ಎಲ್ಲೆಲ್ಲಿ ರಾತ್ರಿ ಕರ್ಫ್ಯೂ ಜಾರಿ? ಈ ಸ್ಥಳಗಳಿಗೆ ಹೋಗುವ ಮೊದಲು ತಿಳಿದುಕೊಳ್ಳಿ

ಮಹಾರಾಷ್ಟ್ರ ಸರ್ಕಾರ ತನಿಖಾ ದರವನ್ನು ಹೆಚ್ಚಿಸುತ್ತದೆ:
ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಜೇಶ್ ಭೂಷಣ್, ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ತನಿಖೆಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದು ಹೇಳಿದರು. "ಆದ್ದರಿಂದ, ರಾಜ್ಯಗಳಿಗೆ, ವಿಶೇಷವಾಗಿ ಮಹಾರಾಷ್ಟ್ರಕ್ಕೆ ನಮ್ಮ ಸಲಹೆ ತನಿಖೆಯ ದರವನ್ನು ಹೆಚ್ಚಿಸುವುದು, ವಿಶೇಷವಾಗಿ ಆರ್ಟಿ ಪಿಸಿಆರ್ ದರವನ್ನು ಹೆಚ್ಚಿಸುವುದು" ಎಂದು ಅವರು ಸಲಹೆ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News