ಲಂಡನ್: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕರೋನಾ ಲಸಿಕೆ ದೊಡ್ಡ ಭರವಸೆಯಾಗಿದೆ. ಅನೇಕ ದೇಶಗಳಲ್ಲಿ ವ್ಯಾಕ್ಸಿನೇಷನ್ ನಡೆಯುತ್ತಿದೆ, ಆದರೆ ಲಸಿಕೆ ಬಗ್ಗೆ ಕೇಳಿಬರುತ್ತಿರುವ ಇಂತಹ ಸುದ್ದಿಗಳು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕುತ್ತವೆ. ಐರ್ಲೆಂಡ್‌ನಲ್ಲೂ ಇದೇ ರೀತಿಯ ಪ್ರಕರಣಗಳು ಬಂದಿದೆ. ವಾಸ್ತವವಾಗಿ ಕರೋನಾ ವ್ಯಾಕ್ಸಿನೇಷನ್ ನಂತರ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳ ಬಗ್ಗೆ ದೂರು ಸ್ವೀಕರಿಸಲಾಗಿದೆ. ಈ ಹಿನ್ನಲೆಯಲ್ಲಿ ಅಸ್ಟ್ರಾಜೆನಿಕ ಲಸಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ವಯಸ್ಕರಲ್ಲಿ ಈ ಸಮಸ್ಯೆ:
ಕರೋನಾ ವ್ಯಾಕ್ಸಿನೇಷನ್ (Corona Vaccination) ನಂತರ ನಾರ್ವೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ವರದಿಗಳ ನಂತರ ಐರ್ಲೆಂಡ್‌ನ ಆರೋಗ್ಯ ಅಧಿಕಾರಿಗಳು 'ಅಸ್ಟ್ರಾಜೆನೆಕಾ' (AstraZeneca) ಲಸಿಕೆ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ. 'ಅಸ್ಟ್ರಾಜೆನೆಕಾ' ಲಸಿಕೆ ಹಾಕಿದ ನಂತರ ನಾರ್ವೆಯ ವೈದ್ಯಕೀಯ ಸಂಸ್ಥೆ ವಯಸ್ಕರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ನಂತರ ಅದರ ಬಳಕೆಯನ್ನು ನಿಲ್ಲಿಸಲಾಗಿದೆ ಎಂದು ಐರ್ಲೆಂಡ್‌ನ ಉಪ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರೊನಾನ್ ಗ್ಲಿನ್ ಹೇಳಿದ್ದಾರೆ.
ಇದನ್ನೂ ಓದಿ - ಮಹಿಳೆಯರೇ ಗಮನಿಸಿ! Corona Vaccine ನಿಮ್ಮ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರಲು ಕಾರಣ ಏನು ಗೊತ್ತೇ?
ಅಸ್ಟ್ರಾಜೆನೆಕಾ ಹೇಳಿದ್ದೇನು?
ಲಸಿಕೆ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಪ್ರಕರಣಗಳ ನಡುವಿನ ಸಂಬಂಧ ಏನು ಎಂಬುದು ಸ್ಪಷ್ಟವಾಗಿಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧ ಹೇರಲಾಗಿದೆ ಎಂದು ಡಾ. ರೊನಾನ್ ಗ್ಲಿನ್ ಹೇಳಿದರು. ಬ್ರಿಟಿಷ್-ಸ್ವೀಡಿಷ್ ಕಂಪನಿ 'ಅಸ್ಟ್ರಾಜೆನೆಕಾ' (Astrazeneca) ಭಾನುವಾರ ಒಂದು ಹೇಳಿಕೆಯಲ್ಲಿ, "ಸ್ಪಷ್ಟ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ತನ್ನ ಕೋವಿಡ್ -19 ಲಸಿಕೆ ಬಳಸಲು ಸುರಕ್ಷಿತವಾಗಿದೆ ಎಂದು ಭರವಸೆ ನೀಡಲು ಬಯಸಿದೆ" ಎಂದು ಹೇಳಿದರು. ಜನರ ಸುರಕ್ಷತೆ ಯಾವಾಗಲೂ ನಮ್ಮ ಆದ್ಯತೆಯಾಗಿರುತ್ತದೆ. ಈ ವಿಷಯ ಪರಿಶೀಲನೆಯಲ್ಲಿದೆ, ಆದರೆ ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ರಕ್ತ ಹೆಪ್ಪುಗಟ್ಟುವಿಕೆಗೆ ಲಸಿಕೆ ಹಾಕಿರುವುದೇ ಕಾರಣ ಎಂದು ಖಚಿತಪಡಿಸುವುದಿಲ್ಲ" ಎಂದು ತಿಳಿಸಿದೆ.
ಇದನ್ನೂ ಓದಿ - Corona vaccine ಎರಡೂ ಡೋಸ್ ಪಡೆದ ನಂತರವೂ ಕರೋನಾ ಪಾಸಿಟಿವ್ ಆದ ವೈದ್ಯೆ
ಪರಿಣಾಮಕಾರಿ ಲಸಿಕೆ ಎಂದ WHO :
ಈ ಲಸಿಕೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಯುರೋಪಿಯನ್ ಒಕ್ಕೂಟದ ವೈದ್ಯಕೀಯ ನಿಯಂತ್ರಕ ತಿಳಿಸಿತ್ತು. ಕರೋನಾವೈರಸ್ ಲಸಿಕೆ ಅಸ್ಟ್ರಾಜೆನೆಕಾ ಬಳಕೆಯ ಬಗ್ಗೆ ಆತಂಕದ ವರದಿಗಳ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಪರಿಣಾಮಕಾರಿ ಎಂದು ಹೇಳಿದೆ. ಡಬ್ಲ್ಯುಎಚ್‌ಒ ವಕ್ತಾರ ಮಾರ್ಗರೇಟ್ ಹ್ಯಾರಿಸ್ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಅದರ ಬಳಕೆಯನ್ನು ನಿಲ್ಲಿಸುವ ಅಗತ್ಯವಿಲ್ಲ. ಅದರ ಪ್ರಮಾಣವನ್ನು ಮುಂದುವರಿಸಬೇಕು ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.