Delhi Lockdown: ಮದ್ಯ ಖರೀದಿಗೆ ಮುಗಿಬಿದ್ದ ಜನ, ಔಷಧಿ ಅಲ್ಲ ಪೆಗ್ ಕೆಲಸಕ್ಕೆ ಬರುತ್ತೆ ಎಂದ ಮಹಿಳೆ

Delhi Lockdown: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ (Covid-19) ಸೋಂಕು ವಿಪರೀತಕ್ಕೆ ತಲುಪಿದ ಬಳಿಕ ದೆಹಲಿಯ ಸರ್ಕಾರ ಇಂದು ರಾತ್ರಿಯಿಂದ ಬರುವ ಸೋಮಾವಾರ ಬೆಳಗಿನವರೆಗೆ ಲಾಕ್ ಡೌನ್ ಘೋಷಿಸಿದೆ. 

Written by - Nitin Tabib | Last Updated : Apr 19, 2021, 03:05 PM IST
  • ರಾಷ್ಟ್ರ ರಾಜಧಾನಿಯಲ್ಲಿ ಕೊವಿಡ್ ಪ್ರಕರಣಗಳ ಉಲ್ಭಣ.
  • 6 ದಿನಗಳ ಲಾಕ್ ಡೌನ್ ಘೋಷಿಸಿದ ದೆಹಲಿ ಸರ್ಕಾರ.
  • ಸಾರಾಯಿ ಖರೀದಿಸಲು ಮುಗಿಬಿದ್ದ ಮದ್ಯಪ್ರಿಯರು.
Delhi Lockdown: ಮದ್ಯ ಖರೀದಿಗೆ ಮುಗಿಬಿದ್ದ ಜನ, ಔಷಧಿ ಅಲ್ಲ ಪೆಗ್ ಕೆಲಸಕ್ಕೆ ಬರುತ್ತೆ ಎಂದ ಮಹಿಳೆ

ನವದೆಹಲಿ: Delhi Lockdown- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ (Covid-19) ಸೋಂಕು ವಿಪರೀತಕ್ಕೆ ತಲುಪಿದ ಬಳಿಕ ದೆಹಲಿಯ ಸರ್ಕಾರ ಇಂದು ರಾತ್ರಿಯಿಂದ ಬರುವ ಸೋಮಾವಾರ ಬೆಳಗಿನವರೆಗೆ ಲಾಕ್ ಡೌನ್ ಘೋಷಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್, ಉಪರಾಜ್ಯಪಾಲ ಅನೀಲ್ ಬೈಜಲ್ ಅವರ ಜೊತೆ ಸಭೆ ನಡೆಸಿದ ಬಳಿಕ ಲಾಕ್ ಡೌನ್ ಘೋಷಿಸಿದ್ದಾರೆ. ಲಾಕ್ ಡೌನ್ (Lockdown) ಘೋಷಣೆ ಸುದ್ದಿ ಮದ್ಯಪ್ರಿಯರ ನೆಮ್ಮದಿಯನ್ನು ಹಾಳು ಮಾಡಿದೆ. ಅವರು ತಕ್ಷಣವೇ ಹತ್ತಿರದ ಮದ್ಯದಂಗಡಿಗಳಿಗೆ ದೌಡಾಯಿಸಿದ್ದಾರೆ. ಪರಿಣಾಮವಶಾತ್ ದೆಹಲಿಯ ಮದ್ಯದಂಗಡಿಗಳ (Liquor Shop)ಮುಂದೆ ದೊಡ್ಡ ದೊಡ್ಡ ಸರದಿ ಸಾಲುಗಳೇ ಕಂಡುಬರುತ್ತಿವೆ. ಹಲವು ಅಂಗಡಿಗಳ ಎದುರು ಸಾಮಾಜಿಕ ಅಂತರ ನಿಯಮ ಕಾಯುವಿಕೆಯನ್ನು ಗಾಳಿಗೆ ತೋರಿದಂತೆ ಕಂಡುಬರುತ್ತಿದೆ. 

ದೆಹಲಿಯ (Delhi) ಖಾನ್ ಮಾರ್ಕೆಟ್ ನಲ್ಲಿರುವ ಮಧ್ಯದ ಅಂಗಡಿಯ ಮುಂದೆ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. ಈ ಜನರಿಗೆ ಸಾಮಾಜಿಕ ಅಂತರ ಕಾಯುವಿಕೆಯ ನಿಯಮವೇ ಗೊತ್ತಿಲ್ಲ ಎಂಬಂತೆ ಕಂಡುಬರುತ್ತಿದೆ. ಮುಂದಿನ 6 ದಿನಗಳ ಕಾಲ ದೆಹಲಿ ಸರ್ಕಾರ ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿದ ಕಾರಣ ಜನರು ಮುಂದಿನ ಆರು ದಿನಗಳ ಕಾಲಕ್ಕೆ ಸ್ಟಾಕ್ ಖರೀದಿಸುತ್ತಿದ್ದಾರೆ.

ಇದನ್ನೂ ಓದಿ- ಒಂದು ವಾರಗಳ ಸಂಪೂರ್ಣ ಲಾಕ್ ಡೌನ್ ಫೋಷಿಸಿದ ದೆಹಲಿ ಸರ್ಕಾರ

ಇದೆ ವೇಳೆ ಶಿವಪುರಿ, ಗೀತಾ ಕಾಲೋನಿಯಲ್ಲಿ ಮದ್ಯ ಖರೀದಿಸಲು ಬಂದ ಓರ್ವ ಮಹಿಳೆ ಇಂಜೆಕ್ಷನ್ ನಿಂದ ಯಾವುದೇ ಲಾಭವಾಗುವುದಿಲ್ಲ, ಮದ್ಯ ಲಾಭಕಾರಿಯಾಗಿದೆ. ನನ್ನ ಮೇಲೆ ಔಷಧಿಯಿಂದ ಪರಿಹಾರ ಸಿಗುವುದಿಲ್ಲ. ಆದರೆ, ಮದ್ಯ ಸೇವನೆಯಿಂದ ಪರಿಹಾರ ಸಿಗುತ್ತದೆ ಎಂಬುದಾಗಿ ಹೇಳುತ್ತಿದ್ದಾಳೆ.

ಇದನ್ನೂ ಓದಿ- West Bengal Election 2021: ಕೊರೊನಾ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ಮೋದಿ ಎಲೆಕ್ಷನ್ ಪ್ರಚಾರ: ಒಂದೇ ದಿನ 4 ರ‍್ಯಾಲಿ!

ಇಂದು ರಾತ್ರಿ 10ಗಂಟೆಯಿಂದ ವಿಧಿಸಲಾಗುವ ಲಾಕ್ ಡೌನ್ ಮುಂದಿನ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೆ ಇರಲಿದೆ. ಈ ಅವಧಿಯಲ್ಲಿ ಎಲ್ಲಾ ರೀತಿಯ ಆವಶ್ಯಕ ಸೇವೆಗಳನ್ನು ಲಾಕ್ ಡೌನ್ ನಿಂದ ಹೊರಗಿಡಲಾಗಿದೆ. ಆಹಾರ ಸಾಮಗ್ರಿ, ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಮದುವೆ ಸಮಾರಂಭಗಳಲ್ಲಿ 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರ ಜಮಾವಣೆಗೆ ನಿಷೇಧ ವಿಧಿಸಲಾಗಿದೆ. ಅಷ್ಟೇ ಅಲ್ಲ ಅದಕ್ಕೂ ಕೂಡ ಪಾಸ್ ವ್ಯವಸ್ಥೆ ಮಾಡಲಾಗುತ್ತಿದೆ. ದೆಹಲಿಯಲ್ಲಿ ಕೊರೊನಾ (Coronavirus) ಪರಿಸ್ಥಿತಿಯ ಕುರಿತು ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಕಳೆದ 2-3 ದಿನಗಳಲ್ಲಿ ನಿತ್ಯ 25 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಆರೋಗ್ಯ ವ್ಯವಸ್ಥೆ ಅಸ್ತವ್ಯಸ್ತಗೊಂಡು, ಒತ್ತಡ ಎದುರಿಸುವ ಸ್ಥಿತಿ ಬಂದೊದಗಿದೆ. ಪ್ರಸ್ತುತ ಇರುವ ಪರಿಸ್ಥಿತಿ ತೀರಾ ಗಂಭೀರವಾಗಿರುವ ಕಾರಣ ಜನರ ಸಹಕಾರದಿಂದ ಮಾತ್ರ ಕೊರೊನಾ ಕೊಂಡಿಯನ್ನು ಮುರಿಯುವುದು ಸಾಧ್ಯ ಎಂದಿದ್ದಾರೆ.

ಇದನ್ನೂ ಓದಿ-Coronavirus: ಎಚ್ಚರ! ಇಂತಹ ಜನರಲ್ಲಿ ಕರೋನಾ ಅಪಾಯ ಹೆಚ್ಚು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News