ನವದೆಹಲಿ: ದೆಹಲಿ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ಹರಿಯಾಣದ ಭಾಗಗಳನ್ನು ಒಳಗೊಂಡ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕರೋನವೈರಸ್ ನಿರ್ವಹಣೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಸರ್ವಪಕ್ಷ ಸಭೆ ನಡೆಸಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ನಾರ್ತ್ ಬ್ಲಾಕ್‌ನಲ್ಲಿ ಸಭೆ ನಡೆಯಲಿದೆ ಎಂದು ಅಧಿಕೃತ ಟಿಪ್ಪಣಿ ತಿಳಿಸಿದೆ.ಆಹ್ವಾನಿತ ಪಕ್ಷಗಳಲ್ಲಿ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್, ಬಿಜೆಪಿ, ಮಾಯಾವತಿಯ ಬಹುಜನ ಸಮಾಜ ಪಕ್ಷ ಮತ್ತು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರಿವೆ.
ಮಹಾರಾಷ್ಟ್ರ್ರ,ದೆಹಲಿ,ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ನಿಜಕ್ಕೂ ಆಘಾತಕಾರಿ ಬೆಳವಣಿಗೆಯಾಗಿದೆ.ಇನ್ನೂ ದೆಹಲಿಯಲ್ಲಿ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈಗ ನೆರೆ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣ ದೆಹಲಿಯ ಗಡಿಯನ್ನು ಮೊಹರು ಮಾಡಿದ್ದು, ಹೆಚ್ಚಿನ ಸೋಂಕುಗಳು ತಮ್ಮ ರಾಜ್ಯಗಳಿಗೆ ಹರಡುತ್ತಿವೆ ಎಂದು ಅವು ವಾದಿಸಿವೆ.
ನೋಯ್ಡಾ ಮತ್ತು ಗಾಜಿಯಾಬಾದ್‌ಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿಯಲ್ಲಿ 40 ಪಟ್ಟು ಹೆಚ್ಚು ಕೊರೊನಾ19 ಪ್ರಕರಣಗಳು ಇರುವುದರಿಂದ ಪ್ರಯಾಣ ನಿರ್ಬಂಧವನ್ನು ಮುಂದುವರಿಸುವುದಾಗಿ ಉತ್ತರ ಪ್ರದೇಶ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ಇನ್ನೊಂದೆಡೆಗೆ ಎಲ್ಲರಿಗೂ ನಿರ್ಬಂಧವಿಲ್ಲದೆ ದೆಹಲಿಗೆ ಮತ್ತು ಅಲ್ಲಿಂದ ಪ್ರಯಾಣಿಸಲು ಅವಕಾಶ ನೀಡುವುದಾಗಿ ಹರಿಯಾಣ ಹೇಳಿದೆ.