Coronavirus ಭೀತಿ ಭಾರತೀಯ ಷೇರು ಮಾರುಕಟ್ಟೆ ಬಂದ್ ಆಗುವ ಸಾಧ್ಯತೆ!

ಸದ್ಯ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಕೊರೊನಾ ವೈರಸ್ ನ ಕಾರ್ಮೋಡ ಕವಿದಿದೆ. ಹೀಗಾಗಿ ಕೊರೊನಾ ವೈರಸ್ ನಿಂದ ಷೇರು ಮಾರುಕಟ್ಟೆಯನ್ನು ಕಾಪಾಡಲು ಮಾರುಕಟ್ಟೆಯನ್ನು ಬಂದ್ ಇಡುವ ಬೇಡಿಕೆ ಇದೀಗ ಕೇಳಿಬರಲಾರಂಭಿಸಿವೆ. ಆದ್ರೆ, ಸದ್ಯ ಇದು ಕೇವಲ ಸಲಹೆಯ ಹಂತದಲ್ಲಿದ್ದು, ಸ್ಟಾಕ್ ಎಕ್ಸಚೇಂಜ್ ಹಾಗೂ SEBI ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

Last Updated : Mar 18, 2020, 02:42 PM IST
Coronavirus ಭೀತಿ ಭಾರತೀಯ ಷೇರು ಮಾರುಕಟ್ಟೆ ಬಂದ್ ಆಗುವ ಸಾಧ್ಯತೆ! title=

ಜಾಗತಿಕ ಮಾರುಕಟ್ಟೆ ಸೇರಿದಂತೆ ದೇಶೀಯ ಮಾರುಕಟ್ಟೆಯ ಮೇಲೆ ಕರೋನಾ ವೈರಸ್ ನ ಕರಿ ನೆರಳು ಬಿದ್ದಿದೆ. ಕಳೆದ ಒಂದು ತಿಂಗಳಲ್ಲಿ ಜಾಗತಿಕ ಷೇರು ಮಾರುಕಟ್ಟೆ ಶೇ.20 ರಷ್ಟು ಕುಸಿತ ಕಂಡಿವೆ. ದೇಶೀಯ ಮಾರುಕಟ್ಟೆಯೂ ಸಹ ಶೇ.25ರಷ್ಟು ಕುಸಿತ ದಾಖಲಿಸಿದೆ. ಕೊರೊನಾ ವೈರಸ್ ನಿಂದ ಪಾರಾಗಲು ಕಾಳಜಿ ವಹಿಸುವಂತೆ ದೇಶಾದ್ಯಂತ ಎಲ್ಲರಿಗೂ ಸೂಚಿಸಲಾಗುತ್ತಿದೆ. ಸರ್ಕಾರಿ ಕಚೇರಿಗಳಿಂದ ಹಿಡಿದು ಖಾಸಗಿ ಕಂಪನಿಗಳವರೆಗೆ work from home ನೀತಿಯನ್ನು ಅನುಸರಿಸಲಾಗುತ್ತಿದೆ. ಸದ್ಯ ಷೇರು ಮಾರುಕಟ್ಟೆಯ ಮೇಲೂ ಕೂಡ ಇದರ ಪ್ರಭಾವ ಬೀರಲಾರಂಭಿಸಿದೆ. ಹೀಗಾಗಿ ಕೊರೊನಾ ವೈರಸ್ ನಿಂದ ದೇಶೀಯ ಷೇರು ಮಾರುಕಟ್ಟೆಯನ್ನು ಕಾಪಾಡಲು ಮಾರುಕಟ್ಟೆಯನ್ನು ಬಂದ್ ಇಡುವ ಬೇಡಿಕೆಗಳು ಇದೀಗ ಕೇಳಿಬರಲಾರಂಭಿಸಿವೆ. ಆದ್ರೆ, ಸದ್ಯ ಇದು ಕೇವಲ ಸಲಹೆಯ ಹಂತದಲ್ಲಿದ್ದು, ಸ್ಟಾಕ್ ಎಕ್ಸಚೇಂಜ್ ಹಾಗೂ SEBI ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

ಈ ರೀತಿಯ ಬೇಡಿಕೆ ಏಳಲು ಕಾರಣವೇನು?
ಮಾರುಕಟ್ಟೆ ತಜ್ಞ ಹಾಗೂ JM ಫೈನಾನ್ಸಿಯಲ್ ನ ಆಶು ಮದಾನ್ ಅವರ ಪ್ರಕಾರ ಮಾರುಕಟ್ಟೆಯಲ್ಲಿ ಸದ್ಯ ಕೇವಲ ಶಾರ್ಟ್ ಸೇಲಿಂಗ್ ಗೆ ಕಡಿವಾಣ ಹಾಕುವುದಷ್ಟೇ ಸಾಕಾಗುವುದಿಲ್ಲ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕೇವಲ ಶಾರ್ಟ್ ಸೇಲಿಂಗ್ ಅನ್ನು ಬ್ಯಾನ್ ಮಾಡಿದರೆ ಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಲಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದಿದ್ದಾರೆ. ಇದಕ್ಕಾಗಿ ಸಂಪೂರ್ಣ ಮಾರುಕಟ್ಟೆಯ ಬಂದ್ ಇಡುವ ಅವಶ್ಯಕತೆ ಇದೆ. ಬಂಡವಾಳ ಸೃಷ್ಟಿಗಿಂತ ಜನರನ್ನು ಸುರಕ್ಷಿತವಾಗಿರು ಇರಿಸುವುದು ಅಗತ್ಯವಾಗಿದೆ. ಏಕೆಂದರೆ ಬ್ರೋಕಿಂಗ್ ಹೌಸ್ ಅಥವಾ ಸಂಸ್ಥೆಯಲ್ಲಿ ಇಬ್ಬರಿಗೆ ಈ ವೈರಸ್ ಸೋಂಕು ತಗುಲಿದರೂ ಕೂಡ ಆತಂಕ ಇನ್ನಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

ಮಾರುಕಟ್ಟೆ ಬಂದ್ ಇಡುವುದು ಏಕೆ ಅಗತ್ಯ
ಈ ಕುರಿತು ಹೇಳಿಕೆ ನೀಡಿರುವ ಆಶು ಮದಾನ್ ಮಾರುಕಟ್ಟೆಯಲ್ಲಿ ಹಣ ಗಳಿಕೆಗೆ ಇನ್ನಷ್ಟು ಅವಕಾಶಗಳು ಸಿಗಲಿವೆ. ದೇಶಾದ್ಯಂತ work from home ಸಾಧ್ಯವಿದೆ. ಆದ್ರೆ, ಬ್ರೋಕಿಂಗ್ ನಲ್ಲಿ ಈ ರೀತಿಯ ಯಾವುದೇ ಇನ್ಫ್ರಾಸ್ಟ್ರಕ್ಚರ್ ಇಲ್ಲ. ಅಷ್ಟೇ ಅಲ್ಲ ಇಂತಹ ತಂತ್ರಜ್ಞಾನ ಕೂಡ. ಹೀಗಾಗಿ ಎಕ್ಷಚೇಂಜ್ ಅನ್ನು ಸಂಪೂರ್ಣ ಬಂದ್ ಇಡುವುದೇ ಏಕಮೇವ ಮಾರ್ಗವಾಗಿದೆ ಎಂದು ಅಶು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ನಮ್ಮ ಸಹಯೋಗಿ ವೆಬ್ಸೈಟ್ ನ ಮ್ಯಾನೇಜಿಂಗ್ ಎಡಿಟರ್ ಅನೀಲ್ ಸಿಂಘ್ವಿ, ಜನರು ಸುರಕ್ಷಿತವಾಗಿದ್ದರೆ ಮಾರುಕಟ್ಟೆಯಲ್ಲಿ ಗಳಿಕೆಯ ಅವಸರಗಳು ಮತ್ತೆ ಸೃಷ್ಟಿಯಾಗಲಿವೆ ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಸದ್ಯ ಎಂದು ಮಾಡುವ ಅವಶ್ಯಕತೆ ಇದೆ
ಆಶು ಮದಾನ್ ಪ್ರಕಾರ, ಮಾರುಕಟ್ಟೆಯಲ್ಲಿ ಸದ್ಯ ಸರ್ಪ್ರೈಸಿಂಗ್ ಟ್ರೆಂಡ್ ನೋಡಲು ಸಿಗುತ್ತಿದೆ. ಸದ್ಯ ಜನರು ಬಾಟಮ್ ಶೋಧದಲ್ಲಿ ತೊಡಗಿದ್ದಾರೆ. ಶುಕ್ರವಾರ ಮಾರುಕಟ್ಟೆಯಲ್ಲಿ ರಿಕವರಿ ಕಂಡು ಬಂದಿತ್ತು. ಆದರೆ, ಸೋಮವಾರ ಮಾರುಕಟ್ಟೆ ಮತ್ತೆ ಕುಸಿದ ಕಾರಣ ಜನರಿಗೆ ಖರೀದಿಯ ಅವಕಾಶ ಕಂಡುಬಂತು. ಆದರೆ, ಪುನಃ ಮಾರುಕಟ್ಟೆ ಸುಮಾರು 800 ಅಂಕಗಳಿಂದ ಕುಸಿಯಿತು. ಮಂಗಳವಾರ ಮತ್ತೆ ಮಾರುಕಟ್ಟೆ 100 ಅಂಕಗಳಿಂದ ಚೇತರಿಸಿಕೊಂಡ ಕಾರಣ ಮತ್ತೆ ಜನರು ಖರೀದಿಗೆ ಇಳಿದರು. ಇದು ಬಾಟಮ್ ಫಿಶಿಂಗ್ ಆಗಿದ್ದು, ಹೂಡಿಕೆದಾರರು ಬಾಟಮ್ ಫಿಶಿಂಗ್ ಗೆ ಇಳಿಯಬಾರದು. ಸದ್ಯ ಎಲ್ಲರು ಬಾಟಮ್ ಶೋಧದಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯ ಹಳೆ ಹೂಡಿಕೆದಾರರಿಗೆ ಇದು ಸರಿಯಾದ ಸಮಯವಲ್ಲ, ಇವರು ಆದಷ್ಟು ದೂರ ಇರುವುದು ಒಳ್ಳೆಯದು ಎಂದು ಮದಾನ್ ಹೇಳಿದ್ದಾರೆ.

Trending News