Corona: ದೇಶದ ಈ ಎರಡೂ ರಾಜ್ಯಗಳಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ

ಕಳೆದ ಏಳು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ದೈನಂದಿನ ಹೊಸ ಪ್ರಕರಣಗಳ ಬೆಳವಣಿಗೆಯ ದರವು 3.6 ಶೇಕಡಾ ಮತ್ತು ಪಂಜಾಬ್‌ನಲ್ಲಿ ಇದು 3.2 ಶೇಕಡಾ ಇತ್ತು. ಮಹಾರಾಷ್ಟ್ರದಲ್ಲಿ ಮಾರ್ಚ್ 31 ರ ಮೊದಲು ಎರಡು ವಾರಗಳಲ್ಲಿ 4,26,108 ಪ್ರಕರಣಗಳು ವರದಿಯಾಗಿವೆ.

Written by - Yashaswini V | Last Updated : Apr 5, 2021, 07:36 AM IST
  • ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರೋನಾ ಪ್ರಕರಣಗಳು ಅತಿ ವೇಗವಾಗಿ ಬೆಳೆಯುತ್ತಿವೆ
  • 11 ರಾಜ್ಯಗಳಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ
  • ಈ ರಾಜ್ಯಗಳಲ್ಲಿ 14 ದಿನಗಳಲ್ಲಿ 90% ಕೋವಿಡ್ -19 ಪ್ರಕರಣಗಳು ವರದಿಯಾಗಿವೆ
Corona: ದೇಶದ ಈ ಎರಡೂ ರಾಜ್ಯಗಳಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ title=
Maharashtra, Punjab have highest number of Coronavirus cases

ನವದೆಹಲಿ:  ದೇಶದಲ್ಲಿ ದಿನದಿಂದ ದಿನಕ್ಕೆ ಕರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಪಂಜಾಬ್‌ನಲ್ಲಿ ಕಳೆದ ಹದಿನೈದು ದಿನಗಳಿಂದ ಅತಿ ಹೆಚ್ಚು ಕರೋನಾವೈರಸ್ (Coronavirus) ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದು ಸರ್ಕಾರ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಕ್ಯಾಬಿನೆಟ್ ಕಾರ್ಯದರ್ಶಿಯ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಮಂಡಿಸಿದ ದಾಖಲೆಗಳಲ್ಲಿ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರೋನಾವೈರಸ್ (Coronavirus) ಪ್ರಕರಣಗಳು ಅತಿ ವೇಗವಾಗಿ ಬೆಳೆಯುತ್ತಿವೆ. ಐದು ರಾಜ್ಯಗಳಲ್ಲಿ ಮಹಾರಾಷ್ಟ್ರ, ಪಂಜಾಬ್, ಚಂಡೀಗಢ, ಛತ್ತೀಸ್‌ಗಢ ಮತ್ತು ಗುಜರಾತ್ ಕೂಡ ಸೇರಿವೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿವೆ.

ಇದನ್ನೂ ಓದಿ - ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ ಈ ರಾಜ್ಯಗಳಿಗೆ ಭೇಟಿ ನೀಡಲಿದೆ ಕೇಂದ್ರದ ತಂಡ

11 ರಾಜ್ಯಗಳಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ :
ಕಳೆದ ಏಳು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ (Maharashtra) ದೈನಂದಿನ ಹೊಸ ಪ್ರಕರಣಗಳ ಬೆಳವಣಿಗೆಯ ದರವು 3.6 ಶೇಕಡಾ ಮತ್ತು ಪಂಜಾಬ್‌ನಲ್ಲಿ ಇದು 3.2 ಶೇಕಡಾ ಇತ್ತು. ಮಹಾರಾಷ್ಟ್ರದಲ್ಲಿ ಮಾರ್ಚ್ 31 ರ ಮೊದಲು ಎರಡು ವಾರಗಳಲ್ಲಿ 4,26,108 ಪ್ರಕರಣಗಳು ವರದಿಯಾಗಿದ್ದರೆ, ಇದೇ ಅವಧಿಯಲ್ಲಿ ಪಂಜಾಬ್‌ನಲ್ಲಿ 35,754 ಪ್ರಕರಣಗಳು ವರದಿಯಾಗಿವೆ. ಅದೇ ಸಮಯದಲ್ಲಿ ಕಳೆದ ಎರಡು ವಾರಗಳಲ್ಲಿ, ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಶೇಕಡಾ 60 ರಷ್ಟು ರೋಗಿಗಳಲ್ಲಿ ಅತಿ ಹೆಚ್ಚು ಮಂದಿ ಮಹಾರಾಷ್ಟ್ರ ಮತ್ತು ಪಂಜಾಬ್‌ನವರು ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, 11 ರಾಜ್ಯಗಳು - ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಕೇರಳ, ಛತ್ತೀಸ್‌ಗಢ, ಚಂಡೀಗಢ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಕರೋನಾವೈರಸ್ ಪ್ರಕರಣಗಳು ತಾರಕಕ್ಕೇರುತ್ತಿದ್ದು ಈ ರಾಜ್ಯಗಳ ಪರಿಸ್ಥಿತಿ ಆತಂಕಕಾರಿಯಾಗಿದೆ. ಈ ರಾಜ್ಯಗಳಲ್ಲಿ 14 ದಿನಗಳಲ್ಲಿ 90% ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು 90.5% ರಷ್ಟು ಮರಣ ಪ್ರಮಾಣ  ವರದಿಯಾಗಿರುವ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ - ಮುಂಬೈನಲ್ಲಿ ಆತಂಕ ತಂದ ಕೊರೊನಾ ಭೀತಿ, ಒಂದೇ ದಿನದಲ್ಲಿ 11 ಸಾವಿರ ಪ್ರಕರಣ ದಾಖಲು

ಆರ್‌ಟಿ-ಪಿಸಿಆರ್ ಟೆಸ್ಟ್:
ನಿರ್ದಿಷ್ಟವಾಗಿ ಹೇಳುವುದಾದರೆ, ತನಿಖೆಯನ್ನು ಹೆಚ್ಚಿಸಲು ಮತ್ತು ಸೋಂಕಿನ ಪ್ರಮಾಣವು ಐದು ಪ್ರತಿಶತ ಅಥವಾ ಅದಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಲು ಈ ರಾಜ್ಯಗಳನ್ನು ಕೇಳಲಾಗಿದೆ. ಆರ್‌ಟಿ-ಪಿಸಿಆರ್ (RT-PCR) ಮೂಲಕ ಶೇಕಡಾ 70 ರಷ್ಟು ತನಿಖೆ ನಡೆಸಲು ಮತ್ತು ತನಿಖೆಯ ಫಲಿತಾಂಶಗಳನ್ನು ಆದಷ್ಟು ಬೇಗ ನೀಡಲು ರಾಜ್ಯಗಳಿಗೆ ಸೂಚಿಸಲಾಗಿದೆ. ಅದೇ ಸಮಯದಲ್ಲಿ, ರೋಗಿಗಳ ಸಾವನ್ನು ತಡೆಗಟ್ಟಲು ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಚುಚ್ಚುಮದ್ದಿಗೆ ಅರ್ಹರಾದವರಲ್ಲಿ 100% ವ್ಯಾಕ್ಸಿನೇಷನ್ ಅನ್ನು ಸಮಯಕ್ಕೆ ಸರಿಯಾಗಿ ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News