ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ ಈ ರಾಜ್ಯಗಳಿಗೆ ಭೇಟಿ ನೀಡಲಿದೆ ಕೇಂದ್ರದ ತಂಡ

ಪ್ರತಿದಿನ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಕೇಂದ್ರದ ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವೈದ್ಯರನ್ನು ಒಳಗೊಂಡಿರುವ ತಂಡವು ಮಹಾರಾಷ್ಟ್ರ, ಪಂಜಾಬ್ ಮತ್ತು ಛತ್ತೀಸ್‌ಗ ಡಕ್ಕೆ ಕಳುಹಿಸಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

Last Updated : Apr 4, 2021, 09:39 PM IST
  • ಪ್ರತಿದಿನ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಕೇಂದ್ರದ ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವೈದ್ಯರನ್ನು ಒಳಗೊಂಡಿರುವ ತಂಡವು ಮಹಾರಾಷ್ಟ್ರ, ಪಂಜಾಬ್ ಮತ್ತು ಛತ್ತೀಸ್‌ಗ ಡಕ್ಕೆ ಕಳುಹಿಸಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
  • ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನಮಂತ್ರಿಯ ಪ್ರಧಾನ ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ ಈ ರಾಜ್ಯಗಳಿಗೆ ಭೇಟಿ ನೀಡಲಿದೆ ಕೇಂದ್ರದ ತಂಡ title=

ನವದೆಹಲಿ: ಪ್ರತಿದಿನ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಕೇಂದ್ರದ ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವೈದ್ಯರನ್ನು ಒಳಗೊಂಡಿರುವ ತಂಡವು ಮಹಾರಾಷ್ಟ್ರ, ಪಂಜಾಬ್ ಮತ್ತು ಛತ್ತೀಸ್‌ಗ ಡಕ್ಕೆ ಕಳುಹಿಸಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನಮಂತ್ರಿಯ ಪ್ರಧಾನ ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ ಡೌನ್: ಸಿಎಂ ಉದ್ಧವ್ ಠಾಕ್ರೆ ಮಹತ್ವದ ಸಭೆ

ಪ್ರಕರಣಗಳ ತೀಕ್ಷ್ಣವಾದ ಏರಿಕೆಗೆ ಮುಖ್ಯವಾಗಿ ಕೋವಿಡ್ (Coronavirus) ನ ಸೂಕ್ತವಾದ ನಡವಳಿಕೆಯನ್ನು ಕಾಪಾಡಿಕೊಳ್ಳುವಲ್ಲಿನ ತೀವ್ರ ಸಡಿಲತೆಗೆ ಕಾರಣವೆಂದು ಹೇಳಲಾಗುತ್ತಿದೆ.ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಮತ್ತು ಸರ್ಕಾರದ ಕೋವಿಡ್ ಟಾಸ್ಕ್ ಫೋರ್ಸ್‌ನ ಉನ್ನತ ಸದಸ್ಯ ಡಾ.ರಂದೀಪ್ ಗುಲೇರಿಯಾ ಅವರು ರೂಪಾಂತರಿತ ತಳಿಗಳು ಪ್ರಕರಣಗಳ ಏರಿಕೆಗೆ ಭಾಗಶಃ ಕಾರಣವೆಂದು ಹೇಳಿದ್ದಾರೆ. ಕಂಟೈನ್‌ಮೆಂಟ್ ವಲಯಗಳು, ಲಾಕ್‌ಡೌನ್ ಪ್ರದೇಶಗಳು, ಪರೀಕ್ಷೆಯನ್ನು ಹೆಚ್ಚಿಸುವುದು, ಪತ್ತೆಹಚ್ಚುವಿಕೆ ಮತ್ತು ಪ್ರತ್ಯೇಕತೆ ಸೇರಿದಂತೆ ದೊಡ್ಡ ಶ್ರೇಣಿಯ ಕ್ರಮಗಳನ್ನು ಸಹ ಅವರು ಸೂಚಿಸಿದ್ದಾರೆ.

ಇದನ್ನೂ ಓದಿ: Covid-19 New Guidelines: ಕೋವಿಡ್ -19 ಮಾರ್ಗಸೂಚಿಯಲ್ಲಿ 'ಯು ಟರ್ನ್' ಹೊಡೆದ ರಾಜ್ಯ ಸರ್ಕಾರ!

ಇಂದು, ಮಹಾರಾಷ್ಟ್ರವು ರಾತ್ರಿ ಕರ್ಫ್ಯೂ ಸೇರಿದಂತೆ ಹಲವಾರು ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಿಸಿತು. ಕಳೆದ 14 ದಿನಗಳಲ್ಲಿ ದೇಶದಲ್ಲಿ ಒಟ್ಟು ಪ್ರಕರಣಗಳಲ್ಲಿ ಶೇಕಡಾ 57 ಮತ್ತು ದೇಶದಲ್ಲಿ ಸಂಭವಿಸಿದ ಸಾವುಗಳಲ್ಲಿ ಶೇಕಡಾ 47 ರಷ್ಟು ಈ ರಾಜ್ಯವು ಕೊಡುಗೆ ನೀಡಿದೆ.ಮಹಾರಾಷ್ಟ್ರದಲ್ಲಿ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆ 47,913 ಕ್ಕೆ ತಲುಪಿದೆ.

ಕಳೆದ 14 ದಿನಗಳಲ್ಲಿ ದೇಶದಲ್ಲಿ ಶೇ 4.5 ರಷ್ಟು ಪ್ರಕರಣಗಳಿಗೆ ಪಂಜಾಬ್ ಕೊಡುಗೆ ನೀಡಿದೆ. ಇದು ಶೇಕಡಾ 16.3 ರಷ್ಟು ಸಾವುಗಳಿಗೆ ಕಾರಣವಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.ಕಳೆದ 14 ದಿನಗಳಲ್ಲಿ ಛತ್ತೀಸ್‌ಗಡದಲ್ಲಿ ದೇಶದ ಒಟ್ಟು ಪ್ರಕರಣಗಳಲ್ಲಿ 4.3% ರಷ್ಟು ಕೊಡುಗೆ ನೀಡಿದೆ, ಆದರೆ ಅದೇ ಅವಧಿಯಲ್ಲಿ ಅದರ ಸಾವುನೋವುಗಳ ಸಂಖ್ಯೆ ಶೇಕಡಾ 7 ದಾಟಿದೆ.10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು ಪ್ರಕರಣಗಳಲ್ಲಿ ಶೇಕಡಾ 91.4 ಮತ್ತು ದೇಶದಲ್ಲಿ ಒಟ್ಟು ಸಾವುಗಳಲ್ಲಿ 90.9 ರಷ್ಟು ಕೊಡುಗೆ ನೀಡುತ್ತಿವೆ.

ಇದನ್ನೂ ಓದಿ: ಬಾಲಿವುಡ್ ನಟ ಗೋವಿಂದ್ ಗೆ ಕೊರೊನಾ ಧೃಢ

ಈ ಸಭೆಯಲ್ಲಿ, ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ, ಕೋವಿಡ್-ಸೂಕ್ತವಾದ ನಡವಳಿಕೆ ಮತ್ತು ಚುಚ್ಚುಮದ್ದಿನ ಐದು ಪಟ್ಟು ಕಾರ್ಯತಂತ್ರವನ್ನು ಅತ್ಯಂತ ಗಂಭೀರತೆ ಮತ್ತು ಬದ್ಧತೆಯಿಂದ ಜಾರಿಗೊಳಿಸಿದರೆ, ಹರಡುವಿಕೆಯನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಬಹುದು " ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

 

Trending News