ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಈಗ ಡಾಕ್ಟರ್!

ಲಂಡನ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ತೆಗೆದ ಭಾವಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 

Last Updated : Sep 7, 2018, 05:10 PM IST
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಈಗ ಡಾಕ್ಟರ್! title=
Twitter/@sachin_rt

ನವದೆಹಲಿ: ಕ್ರಿಕೆಟ್ ಮಾಂತ್ರಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ವೈದ್ಯಕೀಯ ಪದವಿ ಪಡೆಯುವ ಮೂಲಕ ಡಾಕ್ಟರ್ ಆಗಿದ್ದಾರೆ. 

ಈ ಸಂತಸದ ವಿಚಾರವನ್ನು ಸಚಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಲಂಡನ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ತೆಗೆದ ಭಾವಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ತಮ್ಮ ಪುತ್ರಿ ಡಾಕ್ಟರ್ ಆಗಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.

"ವೈದ್ಯಕೀಯ ಅಧ್ಯಯನಕ್ಕೆಂದು ನೀನು ನಿನ್ನೆ ಮೊನ್ನೆಯಷ್ಟೇ ಲಂಡನ್'ಗೆ ತೆರಳಿದಂತಿದೆ. ಆದರೀಗ ನೀನು ಪದವೀಧರೆಯಾಗಿದ್ದೀಯ. ಇದರಿಂದ ಅಂಜಲಿ ಮತ್ತು ನನಗೆ ಬಹಳ ಹೆಮ್ಮೆಯಾಗಿದೆ" ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ. 

Trending News