CTET Result 2021: CTET ಫಲಿತಾಂಶ ಪ್ರಕಟಿಸಿದ CBSE, ಫಲಿತಾಂಶ ಪರಿಶೀಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್

CTET Result 2021: ಸಿಬಿಎಸ್ಇ ಸಿಟಿಇಟಿ ಫಲಿತಾಂಶವನ್ನು ctet.nic.in ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಕೆಳಗೆ ನೀಡಿರುವ ನೇರ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು.

Written by - Nitin Tabib | Last Updated : Feb 26, 2021, 02:23 PM IST
  • CTET 2021 ಫಲಿತಾಂಶ ಪ್ರಕಟ.
  • ctet.nic.in ಈ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಫಲಿತಾಂಶ ಪರಿಶೀಲಿಸಬಹುದು.
  • ಡಿಜಿಲಾಕರ್ ಗೆ ಶೀಘ್ರದಲ್ಲಿಯೇ ಸರ್ಟಿಫಿಕೆಟ್ ಹಾಗೂ ಅಂಕಪಟ್ಟಿ ಅಪ್ಲೋಡ್ ಮಾಡಲಾಗುವುದು.
CTET Result 2021: CTET ಫಲಿತಾಂಶ ಪ್ರಕಟಿಸಿದ CBSE, ಫಲಿತಾಂಶ ಪರಿಶೀಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್  title=
CTET Result 2021 (File Photo)

CTET Result 2021: ಸಿಬಿಎಸ್ಇ ಸಿಟಿಇಟಿ ಫಲಿತಾಂಶವನ್ನು ctet.nic.in ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಕೆಳಗೆ ನೀಡಿರುವ ನೇರ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. ಸಿಟಿಇಟಿ ಪೇಪರ್ -1 ಗೆ 1611423 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 1247217 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಪೈಕಿ 414798 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದೆ ವೇಳೆ, 1447551 ಅಭ್ಯರ್ಥಿಗಳು ಸಿಟಿಇಟಿ ಪೇಪರ್ -2 ಗೆ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 1104454 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇವರಲ್ಲಿ  239501 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

DIRECT LINK

DigiLocker ನಿಂದ ಸರ್ಟಿಫಿಕೆಟ್ ಹಾಗೂ ಮಾರ್ಕ್ಸ್ ಶೀಟ್ ಡೌನ್ಲೋಡ್ ಮಾಡಬೇಕು
ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅಭ್ಯರ್ಥಿಗಳು DigiLockerನಲ್ಲಿ ಸಿಟಿಇಟಿ ಪ್ರಮಾಣಪತ್ರ ಮತ್ತು ಮಾರ್ಕ್‌ಶೀಟ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಶೀಘ್ರದಲ್ಲೇ ಇವುಗಳನ್ನು ಸಿಬಿಎಸ್‌ಇಯಿಂದ ಡಿಜಿಲಾಕರ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. CTET ಪಾಸ್ ಅಭ್ಯರ್ಥಿಗಳಿಗೆ ಅವರ ಮೊಬೈಲ್ ಸಂಖ್ಯೆಯಲ್ಲಿ ಲಾಗಿನ್ ವಿವರಗಳನ್ನು ಕಳುಹಿಸಲಾಗುವುದು, ಅದರ ಸಹಾಯದಿಂದ ಅವರು ತಮ್ಮ ಪ್ರಮಾಣಪತ್ರಗಳು ಮತ್ತು ಮಾರ್ಕ್‌ಶೀಟ್‌ಗಳನ್ನು ಡಿಜಿಲಾಕರ್‌ನಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ.

ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಿಟಿಇಟಿ ಮಾರ್ಕ್‌ಶೀಟ್ ಮತ್ತು ಪ್ರಮಾಣಪತ್ರದಲ್ಲಿ ಎನ್‌ಕ್ರಿಪ್ಟ್ ಮಾಡಲಾದ ಕ್ಯೂಆರ್ ದಾಖಲೆಯನ್ನು ನೀಡಲಾಗುವುದು ಎಂದು ಸಿಬಿಎಸ್‌ಇ (CBSE) ತಿಳಿಸಿದೆ. ಕ್ಯೂಆರ್ (QR Code) ಅನ್ನು ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ ಸ್ಕ್ಯಾನ್ ಮಾಡಬಹುದು ಮತ್ತು ಪರಿಶೀಲಿಸಬಹುದು.

ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ ಶೇ.60 ಅಂಕಗಳನ್ನು ಗಳಿಸುವುದು ಆವಶ್ಯಕ. ಅಂದರೆ 150 ರಲ್ಲಿ 90   ಅಂಕಗಳನ್ನು ಗಳಿಸಬೇಕು. ಅದೇ ಸಮಯದಲ್ಲಿ, ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ವಿಭಾಗದ ಅಭ್ಯರ್ಥಿಗಳು ಶೇ 55 ರಷ್ಟು ಅಂದರೆ 150 ರಲ್ಲಿ 82 ಅಂಕಗಳನ್ನು ಪಡೆಯಬೇಕು.

ಈ ಮೊದಲು ಸಿಟಿಇಟಿ ಪರೀಕ್ಷೆಯನ್ನು ಜುಲೈ 2020 ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಿದ್ದರಿಂದ,  ಪರೀಕ್ಷೆಯನ್ನು 31 ಜನವರಿ 2021 ರಂದು ನಡೆಸಲಾಗಿದೆ. ಸಿಬಿಎಸ್‌ಇ ಪ್ರಕಾರ 135 ನಗರಗಳಲ್ಲಿ ಸಿಟಿಇಟಿ ಪರೀಕ್ಷೆಯನ್ನು ನಡೆಸಲಾಗಿದೆ.

ಇದನ್ನೂ ಓದಿ- RSS On United India - ಅಖಂಡ ಭಾರತ ಬಲದಿಂದಲ್ಲ , ಧರ್ಮದಿಂದ ಮಾತ್ರ ಸಂಭವ: RSS

ಸಿಬಿಎಸ್‌ಇ ಪ್ರತಿವರ್ಷ ಎರಡು ಬಾರಿ ಸಿಟಿಇಟಿ ಪರೀಕ್ಷೆಯನ್ನು ನಡೆಸುತ್ತದೆ. ಮೊದಲ ಪರೀಕ್ಷೆಯನ್ನು ಜುಲೈ ತಿಂಗಳಲ್ಲಿ ಮತ್ತು ಎರಡನೇ  ಪರೀಕ್ಷೆಯನ್ನು ಡಿಸೆಂಬರ್‌ನಲ್ಲಿ ನಡೆಸಲಾಗುತ್ತದೆ. ಸಿಟಿಇಟಿ ಪೇಪರ್ -1 ರಲ್ಲಿ ಭಾಗವಹಿಸುವ ಯಶಸ್ವಿ ಅಭ್ಯರ್ಥಿಗಳನ್ನು 1 ರಿಂದ 5 ನೇ ತರಗತಿಗಳಿಗೆ ಶಿಕ್ಷಕರ ನೇಮಕಾತಿಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ. ಆದರೆ ಪೇಪರ್ -2 ರಲ್ಲಿ ಕುಳಿತ ಯಶಸ್ವಿ ಅಭ್ಯರ್ಥಿಗಳನ್ನು 6 ರಿಂದ 8 ನೇ ತರಗತಿಗಳಿಗೆ ಶಿಕ್ಷಕರ ನೇಮಕಾತಿಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ- NEET PG : ಎನ್ ಇಇಟಿ ಪಿಜಿ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭ

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ದೇಶಾದ್ಯಂತ ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಮತ್ತು ಸೈನಿಕ್ ಸ್ಕೂಲ್  ಶಿಕ್ಷಕರ ಹುದ್ದೆಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ-ರಾಷ್ಟ್ರ ರಾಜಧಾನಿಯಲ್ಲಿ 8ನೇ ತರಗತಿವರೆಗಿನ Students Exam ಬರೆಯಬೇಕಿಲ್ಲ, ಆದರೂ ಪಾಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News