ತಿರುವನಂತಪುರಂ: ಸೈಕ್ಲೋನಿಕ್ ಸ್ಟಾರ್ಮ್ ಬುರೆವಿ ಕೇರಳಕ್ಕೆ ಬಹಳ ಹತ್ತಿರದಲ್ಲಿದೆ. ಗುರುವಾರ ಬೆಳಿಗ್ಗೆ ಬಿಡುಗಡೆಯಾಗಿರುವ ಭಾರತ ಹವಾಮಾನ ಇಲಾಖೆ (IMD) ಬುಲೆಟಿನ್ ಪ್ರಕಾರ, ಮುಂದಿನ ಮೂರು ಗಂಟೆಗಳಲ್ಲಿ ಬುರೆವಿ ಚಂಡಮಾರುತ ಪಶ್ಚಿಮ-ವಾಯುವ್ಯ ದಿಕ್ಕಿಗೆ ತೆರಳಿ ಮನ್ನಾರ್ ಕೊಲ್ಲಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Cyclonic Storm "Burevi" lay centred at 0530 IST of 3rd Dec over Sri Lanka coast near lat 9.0 N & long 80.3 E about 40 km east of Mannar, 120 km east-southeast of Pumban and 320 km east-northeast of Kanniyakumari, likely to emerge into Gulf of Mannar during next 3 hrs.
— India Meteorological Department (@Indiametdept) December 3, 2020
ಈಗಾಗಲೇ ಶ್ರೀಲಂಕಾವನ್ನ ತಲುಪಿರುವ ಬುರೆವಿ ಚಂಡಮಾರುತ (Cyclone Burevi) ಇಂದು ಬಂಗಾಳಕೊಲ್ಲಿಗೆ ಬಂದು ಅಪ್ಪಳಿಸಲಿದೆ. ಹೀಗಾಗಿ ಕೇರಳದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಹಾಗೂ ಅಲಪ್ಪುರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Cyclone Warning for South Tamilnadu and South Kerala coasts. Cyclone Burevi to emerge into Gulf of Mannar during next 3 hours. To reach near Pamban around noon and to cross south Tamilnadu coast during 3rd night to 4th early morning.https://t.co/QSfsJn8fMK pic.twitter.com/om3yqGUa45
— India Meteorological Department (@Indiametdept) December 3, 2020
70-80 ವೇಗದಲ್ಲಿ 90 ಕಿ.ಮೀ ವೇಗದಲ್ಲಿ ಗಾಳಿಯ ವೇಗವನ್ನು ಹೊಂದಿರುವ ಸೈಕ್ಲೋನಿಕ್ ಬಿರುಗಾಳಿಯು ಡಿಸೆಂಬರ್ 3 ರ ಮಧ್ಯಾಹ್ನ ಪಂಬನ್‌ಗೆ ಅಪ್ಪಳಿಸಬಹುದು ಎಂದು ಐಎಂಡಿ ಹೇಳಿದೆ.
Cyclone Burevi: ಈ ಎರಡೂ ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಈ ಚಂಡಮಾರುತವು (Cyclone) ಇಂದು ರಾತ್ರಿ ಮತ್ತು ಶುಕ್ರವಾರ ಮುಂಜಾನೆ ಪಂಬನ್ ಮತ್ತು ಕನ್ಯಾಕುಮಾರಿ ನಡುವೆ ದಕ್ಷಿಣ ತಮಿಳುನಾಡು (Tamil Nadu) ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
ಚಂಡಮಾರುತ ಅಪ್ಪಳಿಸುವ ಮುಂಚಿತವಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (NDRF) ಎಂಟು ತಂಡಗಳು ಮತ್ತು ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದಾರೆ.
ಒಟ್ಟಾರೆಯಾಗಿ 26 ಪರಿಹಾರ ತಂಡಗಳನ್ನು ತಮಿಳುನಾಡು ಮತ್ತು ಕೇರಳದಲ್ಲಿ ನಿಯೋಜಿಸಲಾಗಿದೆ ಮತ್ತು ಒಂದು ತಂಡ ಪುದುಚೇರಿಯಲ್ಲಿ ಮೀಸಲು ಇದೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ.
175 ಕುಟುಂಬಗಳಿಂದ ಸುಮಾರು 700 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದ್ದು, ಇತರ 2,489 ಶಿಬಿರಗಳನ್ನು ಗುರುತಿಸಲಾಗಿದೆ.
ಬುರೆವಿ ಚಂಡಮಾರುತದ ದೃಷ್ಟಿಯಿಂದ ಐಎಂಡಿ ಡಿಸೆಂಬರ್ 3ರಂದು ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ತಮಿಳುನಾಡು ಮತ್ತು ಕೇರಳದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
Had a telephone conversation with Tamil Nadu CM Thiru @EPSTamilNadu Ji. We discussed the conditions prevailing in parts of the state due to Cyclone Burevi. Centre will provide all possible support to TN. I pray for the well-being and safety of those living in the areas affected.
— Narendra Modi (@narendramodi) December 2, 2020
ಬುರೆವಿ ಚಂಡಮಾರುತದಿಂದಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಉಂಟಾಗುವ ಪರಿಸ್ಥಿತಿಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಕೇಂದ್ರವು ಕೇರಳ, ತಮಿಳುನಾಡಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸುತ್ತದೆ. ಪೀಡಿತ ಪ್ರದೇಶಗಳಲ್ಲಿ ವಾಸಿಸುವವರ ಯೋಗಕ್ಷೇಮ ಮತ್ತು ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
ಬುರೆವಿ ಚಂಡಮಾರುತ ಕಳೆದ ವಾರ ತಮಿಳುನಾಡಿನ ಉತ್ತರ ಕರಾವಳಿಯನ್ನು ಅಪ್ಪಳಿಸಿದ ನಿವಾರ್ ಚಂಡಮಾರುತದಷ್ಟು ಬಲವಾಗಿರುವುದಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.