'ದರಬಾರ್' ಚಿತ್ರದ ಟ್ರೈಲರ್ ಬಿಡುಗಡೆ, 'ಐ ಎಮ್ ಎ ಬ್ಯಾಡ್ ಕಾಪ್' ಎಂದ ರಜಿನಿ

ಇದಕ್ಕೂ ಮೊದಲು 'ದರಬಾರ್' ಚಿತ್ರದ ಹಾಡು 'ಚುಮ್ಮಾ ಕಿಜೀ' ಬಿಡುಗಡೆಗೊಂಡಿತ್ತು. ಈ ಹಾಡಿನಲ್ಲಿ ಜಬರ್ದಸ್ತ್ ಎನರ್ಜಿ ಇದ್ದು, ಇದು ಬೆಳ್ಳಿಪರದೆಯ ಮೇಲೆ ರಜಿನಿಕಾಂತ್ ಅವರ ಎನರ್ಜಿಗೆ ತುಂಬಾ ಮ್ಯಾಚ್ ಮಾಡುತ್ತದೆ ಎಂದು ಹೇಳಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Last Updated : Dec 17, 2019, 02:19 PM IST
'ದರಬಾರ್' ಚಿತ್ರದ ಟ್ರೈಲರ್ ಬಿಡುಗಡೆ, 'ಐ ಎಮ್ ಎ ಬ್ಯಾಡ್ ಕಾಪ್' ಎಂದ ರಜಿನಿ title=

ನವದೆಹಲಿ: ಖ್ಯಾತ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ದರಬಾರ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ರಜಿನಿಕಾಂತ್ ಓರ್ವ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ ಭಾರಿ ಆಕ್ಷನ್ ಹಾಗೂ ಡೈಲಾಗ್ ಗಳನ್ನು ನೀವು ಇದರಲ್ಲಿ ನೋಡಬಹುದಾಗಿದೆ. ಜೊತೆಗೆ ರಜಿನಿಕಾಂತ್ ಹಾಗೂ ನಯನತಾರಾ ಅವರ ರೋಮಾನ್ಸ್ ಡೋಸ್ ಈ ಚಿತ್ರವನ್ನು ನೋಡಲು ನಿಮಗೆ ಪ್ರೇರಣೆ ನೀಡಲಿವೆ.

ಟ್ರೈಲರ್ ನಲ್ಲಿ ರಜನಿಕಾಂತ್ ಅವರು ಮುಂಬೈ ಪೊಲೀಸ್ ಕಮಿಷನರ್ ಪಾತ್ರ ನಿರ್ವಹಿಸುತ್ತಿರುವುದು ಕಂಡುಬಂದಿದೆ. ಜೊತೆಗೆ ವಿಲನ್ ಗಳು ಆತನೊಬ್ಬ ಪೊಲೀಸ ಅಧಿಕಾರಿ ಅಲ್ಲ ಕೊಲೆಗಾರ ಎಂದು ಹೇಳುತ್ತಿರುವುದನ್ನು ಹಾಗೂ ರಜನಿ ಎಲ್ಲ ವಿಲನ್ ಗಳನ್ನು ಸದೆಬಡಿಯುತ್ತಿರುವುದನ್ನು ನೀವು ಗಮನಿಸಬಹುದು.

ಚಿತ್ರದ ಮುಖ್ಯ ವಿಲನ್ ಪಾತ್ರ ಸುನೀಲ್ ಶೆಟ್ಟಿ ನಿರ್ವಹಿಸುತ್ತಿದ್ದು, ಪಾತ್ರದಲ್ಲಿ ಜೀವತುಂಬಲು ಭಾರಿ ಕಸರತ್ತು ಮಾಡಿದ್ದಾರೆ. ಟ್ರೈಲರ್ ಕೊನೆಯಲ್ಲಿ ರಜಿನಿ 'ಐ ಎಮ್ ಎ ಬ್ಯಾಡ್ ಕಾಪ್' (ನಾನೋರ್ವ ಕೆಟ್ಟ ಪೋಲಿಸ್ ಅಧಿಕಾರಿ) ಎಂದು ಹೇಳುತ್ತಿರುವುದನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿ ಪ್ರತೀಕ್ ಬಬ್ಬರ್ ಹಾಗೂ ಯೋಗಿ ಬಾಬು ಕೂಡ ಅಭಿನಯಿಸಿದ್ದಾರೆ.

ಟ್ರೈಲರ್ ಬಿಡುಗಡೆಗೂ ಮುನ್ನ 'ದರಬಾರ್' ಚಿತ್ರದ ಹಾಡು 'ಚುಮ್ಮಾ ಕಿಜೀ' ಬಿಡುಗಡೆಗೊಂಡಿತ್ತು. ಈ ಹಾಡಿನಲ್ಲಿ ಜಬರ್ದಸ್ತ್ ಎನರ್ಜಿ ಇದ್ದು, ಇದು ಬೆಳ್ಳಿಪರದೆಯ ಮೇಲೆ ರಜಿನಿಕಾಂತ್ ಅವರ ಎನರ್ಜಿಗೆ ತುಂಬಾ ಮ್ಯಾಚ್ ಮಾಡುತ್ತದೆ ಎಂದು ಹೇಳಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಚಿತ್ರ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಹೀಗೆ ಒಟ್ಟು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಎ. ಆರ್. ಮುರುಗದಾಸ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಲಾಯಿಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣಗೊಂಡಿದೆ.

Trending News