ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ಹಲ್ಲೆ

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಸುಮಾರು ನೂರು ಜನರನ್ನು ಒಳಗೊಂಡ ಗುಂಪೊಂದು ಶುಕ್ರವಾರದಂದು ಮಧ್ಯಾಹ್ನ ದಾಳಿ ನಡೆಸಿದೆ ಎನ್ನುವ ಸಂಗತಿಯನ್ನು ಮುಖ್ಯಮಂತ್ರಿ ಕಚೇರಿ ಖಚಿತಪಡಿಸಿದೆ.

Last Updated : Feb 8, 2019, 06:18 PM IST
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ಹಲ್ಲೆ title=

ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಸುಮಾರು ನೂರು ಜನರನ್ನು ಒಳಗೊಂಡ ಗುಂಪೊಂದು ಶುಕ್ರವಾರದಂದು ಮಧ್ಯಾಹ್ನ ದಾಳಿ ನಡೆಸಿದೆ ಎನ್ನುವ ಸಂಗತಿಯನ್ನು ಮುಖ್ಯಮಂತ್ರಿ ಕಚೇರಿ ಖಚಿತಪಡಿಸಿದೆ.

ಈ ಘಟನೆ ಉತ್ತರ ದೆಹಲಿಯ ನರೇಲಾದಲ್ಲಿ ನಡೆದಿದ್ದು, ಅಲ್ಲಿ ಹಲವು ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆಗೆಂದು ಸಿಎಂ ತೆರಳಿದ್ದ ವೇಳೆ ಅಪರಿಚಿತ ಗುಂಪೊಂದು ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಕಾರ್ ಮೇಲೆ ಏಕಾಏಕಿ ದಾಳಿ ನಡೆಸಿ ಕಾರಿನ ಕಿಡಿಕಿ ಒಡೆದು ಹಾಕುವ ಪ್ರಯತ್ನಕ್ಕೆ ಯತ್ನಿಸಿತು ಎಂದು ತಿಳಿದುಬಂದಿದೆ.

ಅಷ್ಟಕ್ಕೂ ಕೇಜ್ರಿವಾಲ್ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವುದು ಇದೇ ಮೊದಲೆನಲ್ಲ, 2018 ರ ನವಂಬರ್ ನಲ್ಲಿ 50 ವರ್ಷದ ವ್ಯಕ್ತಿಯೊಬ್ಬ ಕಾರದ ಪುಡಿಯನ್ನು ಎರಚಿ ನಂತರ ಬಂಧನಕ್ಕೆ ಒಳಗಾಗಿದ್ದನು. ಕೇಂದ್ರ ಸರ್ಕಾರದ ವಿರುದ್ದ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿರುವ ದೆಹಲಿ ಸಿಎಂ ಕೇಜ್ರಿವಾಲ್ ಅಣ್ಣಾ ಹಜಾರೆಯವರ ಭ್ರಷ್ಟಾಚಾರಿ ವಿರೋಧಿ ಆಂದೋಲನ ವಿರುದ್ದ ಹೋರಾಟದ ಮೂಲಕ ಬೆಳಕಿಗೆ ಬಂದಿದ್ದರು.ತದನಂತರ ಆಮ್ ಆದ್ಮಿ ಪಕ್ಷವನ್ನು ಹುಟ್ಟುಹಾಕುವ ಮೂಲಕ ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿದ್ದಲ್ಲದೆ ದೆಹಲಿ ಅಧಿಕಾರದ ಗದ್ದುಗೆಯನ್ನು ಕೂಡ ಹಿಡಿದರು.

Trending News