Delhi Government : ಆಕ್ಸಿಜನ್ ಕೊರತೆಯಿಂದ ಮೃತ ಕೊರೋನಾ ರೋಗಿಗಳ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ!

ಕೊರೋನಾ ರೋಗಿಗಳ ಕುಟುಂಬ ಸದಸ್ಯರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಗುರುವಾರ ಹೊರಡಿಸಿರುವ ಅಧಿಕೃತ ಆದೇಶದಲ್ಲಿ ತಿಳಿಸಿದೆ.

Last Updated : May 28, 2021, 02:11 PM IST
  • ₹ 5 ಲಕ್ಷ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಇಂದು ಘೋಷಿಸಿದೆ.
  • ಆರು ವೈದ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿರುವುದಾಗಿ ದೆಹಲಿ ಸರ್ಕಾರ
  • ಪರಿಹಾರ ನೀಡುವ ಬಗ್ಗೆ ಈ ಸಮಿತಿ ವಸ್ತುನಿಷ್ಠ ಮಾನದಂಡಗಳನ್ನು ತಯಾರಿಸಲಿದೆ
Delhi Government : ಆಕ್ಸಿಜನ್ ಕೊರತೆಯಿಂದ ಮೃತ ಕೊರೋನಾ ರೋಗಿಗಳ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ! title=

ನವದೆಹಲಿ : ಆಕ್ಸಿಜನ್ ಕೊರತೆಯಿಂದ ಮೃತರಾಗಿರುವ ಕೊರೋನಾ ರೋಗಿಗಳ ಕುಟುಂಬಕ್ಕೆ ₹ 5 ಲಕ್ಷ  ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಇಂದು ಘೋಷಿಸಿದೆ.

ಆಕ್ಸಿಜನ್ ಕೊರತೆ(Oxygen Shortage)ಯಿಂದ ಸಾವನ್ನಪ್ಪಿರುವ ಕೊರೋನಾ ರೋಗಿಗಳ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಆರು ವೈದ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿರುವುದಾಗಿ ದೆಹಲಿ ಸರ್ಕಾರ ತಿಳಿಸಿದೆ.

ಇದನ್ನೂ ಓದಿ : PM Kisan: ಜೂನ್ 30ರೊಳಗೆ ಈ ಸ್ಕೀಮ್ ಗೆ ಅಪ್ಪ್ಲೈ ಮಾಡಿ ಡಬಲ್ ಲಾಭ ಪಡೆಯಿರಿ

ದೆಹಲಿಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಕೊರೋನಾ ರೋಗಿಗಳ(COVID-19 Patients) ಕುಟುಂಬ ಸದಸ್ಯರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಗುರುವಾರ ಹೊರಡಿಸಿರುವ ಅಧಿಕೃತ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ : TV, Fridge, AC ಬೆಲೆಗಳು ಮತ್ತೆ ಏರಿಕೆ! ಯಾವಾಗ, ಎಷ್ಟು ಹೆಚ್ಚಾಗಲಿದೆ ಎಂದು ತಿಳಿಯಿರಿ

ಆಸ್ಪತ್ರೆಗಳಲ್ಲಿ(Hospitals) ಮಾರ್ಗಸೂಚಿ ಅನ್ವಯ ಆಕ್ಸಿಜನ್ ಅನ್ನು ಸಮರ್ಪಕವಾಗಿ ಬಳಸುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಸಮಿತಿಗೆ ಆದೇಶದಲ್ಲಿ ಸೂಚಿಸಲಾಗಿದೆ. ಪರಿಹಾರ ನೀಡುವ ಬಗ್ಗೆ ಈ ಸಮಿತಿ ವಸ್ತುನಿಷ್ಠ ಮಾನದಂಡಗಳನ್ನು ತಯಾರಿಸಲಿದೆ. ಇದು ಪ್ರತಿ ಪ್ರಕರಣಗಳಿಗೆ ಗರಿಷ್ಠ 5 ಲಕ್ಷ ರೂಪಾಯಿವರೆಗೆ ಪರಿಹಾರ ನೀಡಲು ಸೀಮಿತವಾಗಿರಲಿದೆ ಎಂದು ಆದೇಶದಲ್ಲಿ ವಿವರಿಸಿದೆ.

ಇದನ್ನೂ ಓದಿ : Cyclone Yaas ​: ಇಂದು ಪ. ಬಂಗಾಳ, ಒಡಿಶಾದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ!

ಈ ಸಮಿತಿ ವಾರಕ್ಕೊಮ್ಮೆ ವರದಿಯನ್ನು ದೆಹಲಿ(Delhi) ಆರೋಗ್ಯ ಇಲಾಖೆಯ ಮುಖ್ಯಕಾರ್ಯದರ್ಶಿಗೆ ಕಳುಹಿಸಲಿದೆ. ಮೇ ತಿಂಗಳಿನಲ್ಲಿ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಹಿರಿಯ ವೈದ್ಯ ಸೇರಿದಂತೆ 12 ಮಂದಿ ಕೋವಿಡ್ ರೋಗಿಗಳು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News