ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 4,000 ಹೊಸ ಕೊರೊನಾ ಪ್ರಕರಣ ದಾಖಲು..!

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಸುಮಾರು 4,000 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಅತ್ಯಧಿಕ ಏಕದಿನ ದಾಖಲೆ ಏರಿಕೆಯನ್ನು ಕಂಡಿದೆ.

Last Updated : Jun 23, 2020, 10:07 PM IST
ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 4,000 ಹೊಸ ಕೊರೊನಾ ಪ್ರಕರಣ ದಾಖಲು..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಸುಮಾರು 4,000 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಅತ್ಯಧಿಕ ಏಕದಿನ ದಾಖಲೆ ಏರಿಕೆಯನ್ನು ಕಂಡಿದೆ.

ದೆಹಲಿಯಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 66,602 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ. ಇದೇ ಅವಧಿಯಲ್ಲಿ 68 ಹೊಸ ಸಾವುಗಳು ವರದಿಯಾಗಿವೆ, ಇದುವರಗೆ ಒಟ್ಟು ಸಾವಿನ ಸಂಖ್ಯೆ 2,301 ಕ್ಕೆ ತಲುಪಿದೆ. ನಗರ-ರಾಜ್ಯವು ಪ್ರಸ್ತುತ 24,988 ಸಕ್ರಿಯ ಕೊರೊನಾವೈರಸ್ ಪ್ರಕರಣಗಳನ್ನು ಹೊಂದಿದೆ.

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ದೆಹಲಿಯು ತನ್ನ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಪ್ರಮುಖ ಸವಾಲನ್ನು ಹೊಂದಿದ್ದು, ಜುಲೈ ಅಂತ್ಯದ ವೇಳೆಗೆ 5.5 ಲಕ್ಷ ದಾಟುವ ನಿರೀಕ್ಷೆಯಿದೆ, ಒಂದು ಅಂದಾಜಿನ ಪ್ರಕಾರ 90,000 ಹಾಸಿಗೆಗಳು ಬೇಕಾಗುತ್ತವೆ. ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗಾಗಿ ಅಧಿಕಾರಿಗಳ ವಿಲೇವಾರಿಯಲ್ಲಿ ಪ್ರಸ್ತುತ ಲಭ್ಯವಿರುವ ಹಾಸಿಗೆಗಳ ಬಗ್ಗೆ ಆರೋಗ್ಯ ಬುಲೆಟಿನ್ ಮಂಗಳವಾರ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇದನ್ನೂ ಓದಿ: ಕರೋನಾ: ಕಳೆದ 24 ಗಂಟೆಗಳಲ್ಲಿ 14933 ಹೊಸ ಪ್ರಕರಣಗಳು, 4.4 ಲಕ್ಷ ದಾಟಿದೆ ಪೀಡಿತರ ಸಂಖ್ಯೆ

10,000 ಹಾಸಿಗೆಗಳಿರುವ ಸೌಲಭ್ಯವನ್ನು ಪರೀಕ್ಷಿಸಲು ಮತ್ತು ಐಟಿಬಿಪಿ ಮತ್ತು ಸೈನ್ಯದಿಂದ ವೈದ್ಯರು ಮತ್ತು ದಾದಿಯರನ್ನು ಸೌಲಭ್ಯಕ್ಕೆ ನಿಯೋಜಿಸುವಂತೆ ಕೇಜ್ರಿವಾಲ್ ಅಮಿತ್ ಷಾಗೆ ವಿನಂತಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿರುವ ಷಾ ಅವರು ದಕ್ಷಿಣ ದೆಹಲಿಯ ರಾಧಾ ಸ್ವಾಮಿ ಬಿಯಾಸ್ ಸೌಲಭ್ಯದಲ್ಲಿ ನಿರ್ಮಿಸಲಾಗಿರುವ ಕೇಂದ್ರವನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ನಡೆಸಲಿದೆ ಎಂದು ಅವರು ದೆಹಲಿ ಸಿಎಂಗೆ ನೆನಪಿಸಿದರು.

“ಪ್ರಿಯ ಕೇಜ್ರಿವಾಲ್ ಜಿ, ಇದನ್ನು ಮೂರು ದಿನಗಳ ಹಿಂದೆಯೇ ನಮ್ಮ ಸಭೆಯಲ್ಲಿ ನಿರ್ಧರಿಸಲಾಗಿದೆ ಮತ್ತು ದೆಹಲಿಯ ರಾಧಾ ಸ್ವಾಮಿ ಬಿಯಾಸ್‌ನಲ್ಲಿ 10,000 ಬೆಡ್ ಕೋವಿಡ್ ಕೇರ್ ಸೆಂಟರ್ ಅನ್ನು ಐಟಿಬಿಪಿಗೆ ನಿರ್ವಹಿಸುವ ಕೆಲಸವನ್ನು ಎಂಹೆಚ್‌ಎ ನಿಯೋಜಿಸಿದೆ. ಕಾಮಗಾರಿ ಭರದಿಂದ ಸಾಗಿದೆ ಮತ್ತು ಜೂನ್ 26 ರೊಳಗೆ ಈ ಸೌಲಭ್ಯದ ಹೆಚ್ಚಿನ ಭಾಗವು ಕಾರ್ಯರೂಪಕ್ಕೆ ಬರಲಿದೆ ”ಎಂದು ಷಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Trending News