ನವದೆಹಲಿ:
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್, ತನ್ನ ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಐದು ವರ್ಷಗಳ ಒಳಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆಯಿಂದ ಅಮಾನತಾದ ವ್ಯಕ್ತಿ, ಚುನಾವಣಾ ಆಯೋಗದಿಂದ ನಂಬಿಕೆದ್ರೋಹ ಅಥವಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಪ್ರಮಾಣ ಪತ್ರವನ್ನು ಪಡೆಯಬೇಕು. ಆದರೆ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಮೇ 1ರಂದು ತೇಜ್ ಬಹದ್ದೂರ್ ಯಾದವ್ ಪ್ರಮಾಣಪತ್ರ ತಿರಸ್ಕೃತವಾಗಿತ್ತು.
ಆದರೆ, "ನನ್ನ ನಾಮಪತ್ರವನ್ನು ವಿನಾಕಾರಣ ತಿರಸ್ಕರಿಸಲಾಗಿದೆ. ನಿನ್ನೆ 6.16ಕ್ಕೆ ದಾಖಲೆಗಳನ್ನು ಸಲ್ಲಿಸಲು ಹೇಳಲಾಗಿತ್ತು. ಅದರಂತೆ ದಾಖಲೆಗಳನ್ನು ಸಲ್ಲಿಸಿದರೂ ನಾಮಪತ್ರ ತಿರಸ್ಕರಿಸಲಾಗಿದೆ" ಎಂದು ಯಾದವ್ ಆರೋಪಿಸಿದ್ದರು.
Dismissed BSF jawan Tej Bahadur Yadav approaches Supreme Court challenging rejection of his nomination as Samajwadi Party candidate from Varanasi Lok Sabha Constituency. Advocate Prashant Bhushan is appearing for Yadav (file pic) pic.twitter.com/Wr5x1zqZh7
— ANI (@ANI) May 6, 2019
ಸೈನಿಕರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವೀಡಿಯೋ ಸಾಕ್ಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಕಾರಣದ ಮೇಲೆ ತೇಜ್ ಬಹದ್ದೂರ್ ಸೇನೆಯಿಂದ ವಜಾಗೊಂಡಿದ್ದು, ವಾರಣಾಸಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.