ನವ ದೆಹಲಿ: 2 ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದಲ್ಲಿ ಪಟಿಯಾಲಾ ಹೌಸ್ ವಿಶೇಷ ನ್ಯಾಯಾಲಯವು ಮಾಜಿ ಸಚಿವ ಎ. ರಾಜಾ ಮತ್ತು ಡಿಎಂಕೆ ನಾಯಕಿ ಕನಿಮೋಳಿ ಸೇರಿದಂತೆ 17 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ ಬಳಿಕ ಡಿಎಂಕೆ ಸಂಸದೆ ಕನಿಮೋಳಿಯವರು ಬಹಳ ಸಂತೋಷಗೊಂಡಿದ್ದಾರೆ. ಈ ತೀರ್ಮಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕನಿಮೋಳಿ ಈ ಪ್ರಕರಣದ ತನಿಖೆ ಸಂದರ್ಭದಲ್ಲಿ ಸಹಕರಿಸಿದ ಅಭಿಮಾನಿಗಳು, ಬೆಂಬಲಿರು "ಎಲ್ಲರಿಗೂ" ಧನ್ಯವಾದ ಎಂದು ತಿಳಿಸಿದರು.
ನ್ಯಾಯಾಲಯದ ತೀರ್ಪಿಗೂ ಮುನ್ನ ಬೆಳಿಗ್ಗೆ ಕನಿಮೋಳಿ ನ್ಯಾಯಾಲಯದಲ್ಲಿ ಹಾಜರಿದ್ದರು. ತೀರ್ಪಿಗೆ ಸಂಬಂಧಿಸಿದಂತೆ ದೇಶಾದ್ಯಂತ ಎಲ್ಲರಿಗೂ ಕುತೂಹಲವಿತ್ತು. ಪ್ರಕರಣದಲ್ಲಿ ತೀರ್ಪು ಬರುವ ಮುನ್ನ ಡಿಎಂಕೆ ಮತ್ತು ಬೆಂಬಲಿಗರು ನ್ಯಾಯಾಲಯದ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರು ಈ ತೀರ್ಪು ಉಚ್ಚರಿಸುವಾಗ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದರು. ಇದರ ನಂತರ ನ್ಯಾಯಾಲಯದಲ್ಲಿ ಬೆಂಬಲಿಗರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ನ್ಯಾಯಾಲಯದ ತೀರ್ಪಿನ ನಂತರ ನ್ಯಾಯಾಲಯ ಕೊಠಡಿಯಿಂದ ಹೊರಬಂದ ಕನಿಮೋಳಿ ಈ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಈ ಸಮಯದಲ್ಲಿ 'ನನ್ನೊಂದಿಗೆ ನಿಂತಿರುವ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ' ಎಂದು ತಿಳಿಸಿದರು. ಇದಾದ ನಂತರ, ನ್ಯಾಯಾಲಯದ ಆವರಣದ ಹೊರಗೆ ಸುತ್ತುವರಿದಿದ್ದ ಕನಿಮೋಳಿ ಅವರ ಬೆಂಬಲಿಗರು ಘೋಷಣೆಗಳನ್ನು ಕೂಗಿದರು.
I would love to thank everyone who stood by me: Kanimozhi, Rajya Sabha MP #2GScamVerdict pic.twitter.com/3plOl0RlLE
— ANI (@ANI) December 21, 2017
2008 ನೇ ಇಸವಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ, ಟೆಲಿಕಾಂ ಇಲಾಖೆ 2 ಜಿ ಸ್ಪೆಕ್ಟ್ರಂ ಪರವಾನಗಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿತ್ತು. 2010 ರಲ್ಲಿ ಸಿಎಜಿ ವರದಿಯ ನಂತರ ಇದು ವ್ಯಾಪಕವಾಗಿ ಬಹಿರಂಗವಾಯಿತು.