ಈ ಕೆಲಸ ಮಾಡಿ, 5 ಲಕ್ಷ ರೂ. ಮೌಲ್ಯದ ಪೆಟ್ರೋಲ್-ಡೀಸಲ್ ಉಚಿತವಾಗಿ ಗೆಲ್ಲಿರಿ!

ಇಂಡಿಯನ್ ಆಯಿಲ್ ಏರ್ಪಡಿಸಿರುವ 'I Love Indian Oil' ಸ್ಪರ್ಧೆಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಫೇಸ್ ಬುಕ್ ಅಥವಾ ವಾಟ್ಸಪ್ ಮೂಲಕ ಜನವರಿ 3 ರಿಂದ ಜನವರಿ 9ರ ವರೆಗೆ ಭಾಗವಹಿಸಬಹುದು.   

Last Updated : Jan 6, 2019, 01:22 PM IST
ಈ ಕೆಲಸ ಮಾಡಿ, 5 ಲಕ್ಷ ರೂ. ಮೌಲ್ಯದ ಪೆಟ್ರೋಲ್-ಡೀಸಲ್ ಉಚಿತವಾಗಿ ಗೆಲ್ಲಿರಿ! title=

ನವದೆಹಲಿ: ದೇಶದ ಪ್ರತಿಷ್ಠಿತ ತೈಲ ಕಂಪನಿ ಇಂಡಿಯನ್ ಆಯಿಲ್ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದು, ಈ ಮೂಲಕ ನೀವು 5 ಲಕ್ಷ ರೂ. ಮೌಲ್ಯದ ಪೆಟ್ರೋಲ್ ಮತ್ತು ಡೀಸೆಲ್ ಕೂಪನ್'ಗಳನ್ನೂ ಉಚಿತವಾಗಿ ಪಡೆಯಬಹುದು.

ಇಂಡಿಯನ್ ಆಯಿಲ್ ಏರ್ಪಡಿಸಿರುವ 'I Love Indian Oil' ಸ್ಪರ್ಧೆಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಫೇಸ್ ಬುಕ್ ಅಥವಾ ವಾಟ್ಸಪ್ ಮೂಲಕ ಜನವರಿ 3 ರಿಂದ ಜನವರಿ 9ರ ವರೆಗೆ ಭಾಗವಹಿಸಬಹುದು. ಜನವರಿ 9ರಂದು ಆಚರಿಸಲಾಗುವ ಗ್ರಾಹಕರ ದಿನದ ಅಂಗವಾಗಿ ಇಂಡಿಯನ್ ಆಯಿಲ್ ಈ ಸ್ಪರ್ಧೆ ಏರ್ಪಡಿಸಿದೆ. 

ಸ್ಪರ್ಧಿಸುವುದು ಹೇಗೆ?
ಇಂಡಿಯನ್ ಆಯಿಲ್ ನಿಮ್ಮ ದೈನಂದಿನ ಜೀವನದಲ್ಲಿ ಎಷ್ಟು ಮಹತ್ವ ಪಡೆದುಕೊಂಡಿದೆ ಹಾಗೂ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ವೀಡಿಯೋ ಅಥವಾ ಚಿತ್ರಬರಹ ಅಥವಾ ಅಭಿಪ್ರಾಯದ ಮೂಲಕ ತಿಳಿಸಿ 5 ಲಕ್ಷ ರೂ. ಮೌಲ್ಯದ ಪೆಟ್ರೋಲ್-ಡೀಸೆಲ್ ವೋಚರ್ ಗೆಲ್ಲಬಹುದು. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ 5 ಜನರಿಗೆ ಇಂಡಿಯನ್ ಆಯಿಲ್ 25 ಸಾವಿರ ರೂ.ಗಳ ಪೆಟ್ರೋಲ್ ವೋಚರ್ ನೀಡಲಿದೆ. 

ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಇಂಡಿಯನ್ ಆಯಿಲ್ ಫೇಸ್ ಬುಕ್ ಪುಟವನ್ನು ಫಾಲೋ ಮಾಡಬೇಕು. ನಂತರ ಪ್ರತಿ ಪರ್ಷೆಗೆ ಉತ್ತರಿಸುವಾಗ #ILoveIndianOil ಹ್ಯಾಶ್ ಟ್ಯಾಗ್ ಅನ್ನು ಮರೆಯದೇ ಹಾಕಬೇಕು. ನೀವು ನೀಡಿದ ಉತ್ತರದ ಆಧಾರದ ಮೇಲೆ ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗುವುದು. ಈ ಸ್ಪರ್ಧೆಯ ವಿಜೇತರನ್ನು ಇಂಡಿಯನ್ ಆಯಿಲ್ ಫೇಸ್ಬುಕ್ ಪೇಜ್ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಘೋಶಿಸಲಾಗುವುದು. 

ಯಾರಿಗೆ ಎಷ್ಟು ಬಹುಮಾನ ದೊರೆಯಲಿದೆ?
'I Love Indian Oil' ಸ್ಪರ್ಧೆ ವಿಜೇತರಿಗೆ ಮೊದಲ ಬಹುಮಾನ- ಐವರು ವಿಜೇತರಿಗೆ 25,000 ರೂ.ಗಳ ಪೆಟ್ರೋಲ್ ಅಥವಾ ಡೀಸೆಲ್ ವೋಚರ್, ಎರಡನೇ ಬಹುಮಾನ- 10 ವಿಜೇತರಿಗೆ ತಲಾ 10,000 ರೂ. ಮೌಲ್ಯದ ಪೆಟ್ರೋಲ್ ಅಥವಾ ಡೀಸೆಲ್ ವೋಚರ್, ಮೂರನೇ ಬಹುಮಾನ- 30 ವಿಜೇತರಿಗೆ ತಲಾ 5,000ರೂ ಮೌಲ್ಯದ ಪೆಟ್ರೋಲ್ ಅಥವಾ ಡೀಸೆಲ್ ವೋಚರ್, ಸಮಾಧಾನಕರ ಬಹುಮಾನ - 60 ವಿಜೇತರಿಗೆ ತಲಾ 2,000 ರೂ. ಮೌಲ್ಯದ ಪೆಟ್ರೋಲ್ ಅಥವಾ ಡೀಸೆಲ್ ವೋಚರ್ ದೊರೆಯಲಿದೆ. 
 

Trending News