ನೀವೂ INSURANCE POLICY ಹೊಂದಿದ್ದೀರಾ? ಈ ಲೇಖನ ತಪ್ಪದೆ ಓದಿ

ಒಂದು ವೇಳೆ ನಿಮ್ಮ ಬಳಿಯೂ ಕೂಡ INSURANCE POLICY ಇದ್ದರೆ, ನೀವು ಅದರ ಪ್ರೀಮಿಯಂ ಪಾವತಿಸುವುದು ಸಾಮಾನ್ಯ ಪ್ರಕ್ರಿಯೆ.

Last Updated : Mar 15, 2020, 01:18 PM IST
ನೀವೂ INSURANCE POLICY ಹೊಂದಿದ್ದೀರಾ? ಈ ಲೇಖನ ತಪ್ಪದೆ ಓದಿ title=

ಒಂದು ವೇಳೆ ನಿಮ್ಮ ಬಳಿಯೂ ಕೂಡ INSURANCE POLICY ಇದ್ದರೆ, ನೀವು ಅದರ ಪ್ರೀಮಿಯಂ ಪಾವತಿಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಈ ಪ್ರೀಮಿಯಂ ಪಾವತಿಯನ್ನು ನೀವು ಸರಿಯಾದ ಸಮಯಕ್ಕೆ ಪಾವತಿಸುತ್ತೀರಾ? ಆದರೆ, ಕೆಲ ಸಮಯದಲ್ಲಿ ಹಲವು ಕಾರಣಗಳಿಂದ ನಿಮಗೆ ನಿಮ್ಮ ಪಾಲಸಿಯ ಪ್ರೀಮಿಯಂ ಸರಿಯಾದ ಸಮಯಕ್ಕೆ ಪಾವತಿಸದೇ ಇರಲು ಆಗಬಹುದು. ಆಗ ನಿಮ್ಮ ಪಾಲಸಿ ಲ್ಯಾಪ್ಸ್ ಆಗುವ ಸಾಧ್ಯತೆ ಇರುತ್ತದೆ. ಆಗ ಅದರ ನಷ್ಟ ಅನುಭವಿಸಲು ನೀವು ಸಿದ್ಧರಾಗಿರಬೇಕು. ಒಂದೆಡೆ ಇದಕ್ಕೆ ನೀವು ಪೆನಾಲ್ಟಿ ಪಾವತಿಸಬೇಕಾದರೆ ಇನ್ನೊಂದೆಡೆ ಪಾಲಸಿ ಕ್ಲೇಮ್ ಮಾಡುವ ಸಮಯದಲ್ಲಿ ನಿಮಗೆ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ.

ಪಾಲಸಿ ಲ್ಯಾಪ್ಸ್ ಆದರೆ ನಷ್ಟ ಏನು?
ಪಾಲಸಿ ಲ್ಯಾಪ್ಸ್ ಆದರೆ ಅದರದೇ ಆದ ಕೆಲ ನಷ್ಟಗಳಿವೆ. ಮೊದಲನೆಯದಾಗಿ ಇದಕ್ಕಾಗಿ ನೀವು ಪೆನಾಲ್ಟಿ ಪಾವತಿಸಬೇಕು. ಆದರೆ, ಕೆಲ ವಿಶೇಷ ಪಾಲಸಿಗಳಲ್ಲಿ ಈ ನಷ್ಟ ಹೆಚ್ಚಾಗಿರುತ್ತದೆ. ವಿಶೇಷವಾಗಿ ಟರ್ಮ್ ಇನ್ಸುರೆನ್ಸ್ ಪಾಲಸಿ ಲ್ಯಾಪ್ಸ್ ಆದರೆ ನಿಮಗೆ ಹೆಚ್ಚಿನ ನಷ್ಟವಾಗುವ ಸಾಧ್ಯತೆ ಇರುತ್ತದೆ.

ಕ್ಲೇಮ್ ಮಾರುವ ಮೊತ್ತದಲ್ಲಿ ತೊಂದರೆ ಉಂಟಾಗಬಹುದು
ಟರ್ಮ್ ಇನ್ಸುರೆನ್ಸ್ ಪಾಲಸಿ ಒಂದು ವೇಳೆ ಲ್ಯಾಪ್ಸ್ ಆದರೆ, ನಿಮ್ಮ ಕುಟುಂಬಸ್ಥರು ನಿಮ್ಮ ಬಳಿಕ ಪಾಲಸಿ ಕ್ಲೇಮ್ ಮಾಡುವ ವೇಳೆ ಅವರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ನಂತರ ನೀವು ಪಾಲಸಿ ಖರೀಸಿಸಿದರೆ ನಿಮಗೆ ಹೆಚ್ಚಿನ ಪ್ರೀಮಿಯಂ ಬೀಳುವ ಸಾಧ್ಯತೆ ಇದೆ.

ನಿಮ್ಮ ಕ್ಷಮತೆಗೆ ಅನುಗುಣವಾಗಿ ಪ್ರೀಮಿಯಂ ಅವಧಿಯನ್ನು ಆಯ್ಕೆ ಮಾಡಿ
ಪ್ರೀಮಿಯಂ ಪಾವತಿಸಲು ಹಲವು ಆಪ್ಶನ್ ಗಳಿವೆ. ವಿಮಾ ಕಂಪನಿಗಳು ಪ್ರೀಮಿಯಂ ಪಾವತಿಸಲು 3 ತಿಂಗಳು, ಆರು ತಿಂಗಳು ಹಾಗೂ 1 ವರ್ಷದ ಆಪ್ಶನ್ ಗಳನ್ನು ನೀಡುತ್ತವೆ. ಇಂತಹುದರಲ್ಲಿ ನೀವು ನಿಮ್ಮ ಕ್ಷಮತೆಗೆ ಅನುಗುಣವಾಗಿ ಪ್ರೀಮಿಯಂ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ. ಆದರೆ, ಇಲ್ಲಿ ವಿವಿಧ ಕಂಪನಿಗಳ ಪಾಲಸಿ ವಿಭಿನ್ನವಾಗಿರುತ್ತವೆ. ಸಮಯಕ್ಕೆ ಸರಿಯಾಗಿ ವಿಮಾ ಪಾಲಸಿಗಳ ಪ್ರೀಮಿಯಂ ಪಾವತಿಸುವುದು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಯಾವಾಗ ಪಾಲಸಿ ಲ್ಯಾಪ್ಸ್ ಆಗುತ್ತದೆ
ಪ್ರೀಮಿಯಂ ಪಾವತಿಸಲು ಕಂಪನಿಗಳು 30 ದಿನಗಳ ಹೆಚ್ಚುವರಿ ಸಮಯಾವಕಾಶ ನೀಡುತ್ತವೆ. ಒಂದು ವೇಳೆ ನೀವು ಈ ಸಮಯಾವಕಾಶವನ್ನು ಮೀರಿದರೆ ನಿಮ್ಮ ಪಾಲಸಿ ಲ್ಯಾಪ್ಸ್ ಆಗುತ್ತದೆ. ಯುಲಿಪ್ ಪಾಲಸಿಗಳಲ್ಲಿ ಒಂದು ವೇಳೆ ನೀವು ಮೊದಲನೇ ಐದು ವರ್ಷಗಳಲ್ಲಿ ಅಥವಾ ಲಾಕ್ ಇನ್ ಪಿರಿಯಡ್ ವೇಳೆ ಪ್ರೀಮಿಯಂ ಪಾವತಿಸದೇ ಹೋದಲ್ಲಿ ನಿಮ್ಮ ಪಾಲಸಿ ಲ್ಯಾಪ್ಸ್ ಆಗುತ್ತದೆ. ಇದರಿಂದ ನೀವು ನಿಮ್ಮ ಇನ್ಸುರೆನ್ಸ್ ಬೆನಿಫಿಟ್ ನಿಂದ ಕೈತೊಳೆದುಕೊಳ್ಳಬೇಕಾಗಲಿದೆ.

ರಿವಾಯಿವ್ ಆಪ್ಶನ್ ಗೆ ಅವಕಾಶ ಇದೆ
ಹಲವು ಕಂಪನಿತಳು ನಿಮ್ಮ ಪಾಲಸಿಯನ್ನು ರಿವಾಯಿವ್ ಮಾಡುವ ಅವಕಾಶ ಕೂಡ ಕಲ್ಪಿಸುತ್ತವೆ. ಆದರೆ, ಹೊಸ ಹಾಗೂ ರಿವಾಯಿವ್ ಪಾಲಸಿಗಳಲ್ಲಿ ವ್ಯತ್ಯಾಸ ಇರುತ್ತದೆ. ಆದರೆ ಪಾಲಸಿ ಲ್ಯಾಪ್ಸ್ ಆದ ಕಾರಣ ಪ್ರೀಮಿಯಂನ ಹೊರೆ ಅಧಿಕವಾಗಿರಲಿದೆ.

Trending News