ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎರಡನೇ ಬಾರಿ ಭೂಕಂಪ; 4.8 ತೀವ್ರತೆ ದಾಖಲು

ಹವಾಮಾನ ಇಲಾಖೆಯ ಪ್ರಕಾರ, ಮಧ್ಯಾಹ್ನ 12.31 ಕ್ಕೆ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ 4.8 ದಾಖಲಾಗಿದೆ. 

Updated: Sep 26, 2019 , 03:59 PM IST
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎರಡನೇ ಬಾರಿ ಭೂಕಂಪ; 4.8 ತೀವ್ರತೆ ದಾಖಲು

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಗುರುವಾರ ಮತ್ತೆ ಭೂಕಂಪನ ಸಂಭವಿಸಿದೆ. 

ಹವಾಮಾನ ಇಲಾಖೆಯ ಪ್ರಕಾರ, ಮಧ್ಯಾಹ್ನ 12.31 ಕ್ಕೆ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ 4.8 ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಪಾಕಿಸ್ತಾನ-ಭಾರತ (ಜಮ್ಮು ಮತ್ತು ಕಾಶ್ಮೀರ) ಗಡಿಯಲ್ಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ, ಈ ಭೂಕಂಪದಲ್ಲಿ ಯಾವುದೇ ಅಪಘಾತ ಸಂಭವಿಸಿಲ್ಲ.

ಸೆಪ್ಟೆಂಬರ್ 24 ರಂದು ಪಿಒಕೆ ಯಲ್ಲಿ ಸಂಭವಿಸಿದ 5.8 ತೀವ್ರತೆಯ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 37 ಕ್ಕೆ ಏರಿದ್ದು, ಗಾಯಗೊಂಡವರ ಸಂಖ್ಯೆ 500 ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ನವದೆಹಲಿ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿತ್ತು.

ಅಂದು  ಪಾಕಿಸ್ತಾನದ ಇಸ್ಲಾಮಾಬಾದ್, ರಾವಲ್ಪಿಂಡಿ, ಮುರ್ರಿ,ಝೇಲಮ್, ಚಾರ್ಸಡ್ಡ, ಸ್ವಾತ್, ಖೈಬರ್, ಅಬೋಟಾಬಾದ್, ಬಜೌರ್, ನೌಶೇರಾ, ಮನ್ಸೆಹ್ರಾ, ಬಟಾಗ್ರಾಮ್, ಟೋರ್ಘರ್ ಮತ್ತು ಕೊಹಿಟಾನ್ ನಲ್ಲಿ 8-10 ಸೆಕೆಂಡುಗಳ ಭೂಮಿ ಕಂಪಿಸಿದ ಅನುಭವವಾಗಿತ್ತು.