ಪ್ರಣಾಳಿಕೆ ಬಿಡುಗಡೆಗೆ ಸಮಯ ನಿಗದಿಪಡಿಸಿದ ಚುನಾವಣಾ ಆಯೋಗ

ಶನಿವಾರದಂದು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ವಿಚಾರವಾಗಿ ಟೈಮ್ ಲೈನ್ ನಿಗದಿಪಡಿಸಿದೆ.

Last Updated : Mar 17, 2019, 10:59 AM IST
ಪ್ರಣಾಳಿಕೆ ಬಿಡುಗಡೆಗೆ ಸಮಯ ನಿಗದಿಪಡಿಸಿದ ಚುನಾವಣಾ ಆಯೋಗ  title=

ನವದೆಹಲಿ: ಶನಿವಾರದಂದು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ವಿಚಾರವಾಗಿ ಟೈಮ್ ಲೈನ್ ನಿಗದಿಪಡಿಸಿದೆ.

ಜನ ಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 126 ರ ಅನುಗುಣವಾಗಿ ನೀತಿ ಕೊನೆಯ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ರಾಜಕೀಯ ಪಕ್ಷಗಳು ಬಿಡುಗಡೆಗೊಳಿಸುವ ಹಾಗಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದೆ.ಆ ಮೂಲಕ ಈಗ ಪ್ರಣಾಳಿಕೆ ಬಿಡುಗಡೆಯನ್ನು ಸಹಿತ ಈ ಕಾಯ್ದೆಯ ಭಾಗವಾಗಿ ಒಳಗೊಳ್ಳುವಂತೆ ಮಾಡಿದೆ.

ಸೆಕ್ಷನ್ 126 ಜನಪ್ರತಿನಿಧಿ ಕಾಯ್ದೆ 1951 ರ ಪ್ರಕಾರ ಮತದಾನ ಪ್ರಾರಂಭವಾಗುವ ಮುಂಚೆ 48 ಗಂಟೆಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಈ  ಹಿನ್ನಲೆಯಲ್ಲಿ ಪ್ರಣಾಳಿಕೆ ಬಿಡುಗಡೆಯನ್ನು ಈ ನಿಯಮದಡಿಯಲ್ಲಿ ತಂದಿದೆ.

ಇದೇ ವೇಳೆ ಈ ನಿಯಮ ಕೇವಲ ಲೋಕಸಭಾ ಚುನಾವಣೆಗೆ ಮಾತ್ರವಲ್ಲದೆ ಮುಂಬರುವ ಎಲ್ಲ ಚುನಾವಣೆಗೂ ಇದು ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Trending News