ಲೋಕಸಭಾ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಲು ಇವರಿಗೆ ಸಿಕ್ಕಿದೆ ಅವಕಾಶ!

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ, ರಾಜ್ಯ ಚುನಾವಣಾ ಇಲಾಖೆ ಡಿಜಿಟಲ್ ತಯಾರಕ ಮತಪತ್ರಗಳನ್ನು ಆನ್ಲೈನ್ನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗೆ ಕಳುಹಿಸುತ್ತದೆ.

Updated: Apr 6, 2019 , 04:10 PM IST
ಲೋಕಸಭಾ ಚುನಾವಣೆ: ಮೊದಲ ಬಾರಿಗೆ ಮತ ಚಲಾಯಿಸಲು ಇವರಿಗೆ ಸಿಕ್ಕಿದೆ ಅವಕಾಶ!

ಜಯಪುರ್: ಗಡಿಗಳ ಭದ್ರತೆಯಲ್ಲಿ ತೊಡಗಿರುವ ಸೈನಿಕರಿಗೆ ಅವರ ಸ್ಥಳಗಳಿಗೆ ತೆರಳಿ ಮತದಾನ ಮಾಡುವುದು ಕಷ್ಟದ ಸಂಗತಿ. ಇದೀಗ ಇಂತಹ 1 ಲಕ್ಷದ 34 ಸಾವಿರಕ್ಕೂ ಹೆಚ್ಚು ಜವಾನ್ ಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಟ್ರಾನ್ರ್ಸ್‍ಮಿಟೆಡ್ ಪೋಸ್ಟಲ್ ಅಂಚೆ ಮತದಾನ (ಇಟಿಪಿಬಿಎಸ್) ವಿಧಾನದಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ, ರಾಜ್ಯ ಚುನಾವಣಾ ಇಲಾಖೆ ಡಿಜಿಟಲ್ ತಯಾರಕ ಮತಪತ್ರಗಳನ್ನು ಆನ್ಲೈನ್ನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗೆ ಕಳುಹಿಸುತ್ತದೆ. ಮತ ಎಣಿಕೆ ಆರಂಭಕ್ಕೂ ಮೊದಲು ಅವರು ತಮ್ಮ ಮತವನ್ನು ಪೋಸ್ಟ್ ಮೂಲಕ ಕಳುಹಿಸಬಹುದು. ನಾಮಪತ್ರ ವಾಪಸ್ಸಾತಿ ಬಳಿಕವಷ್ಟೇ ಮತಪತ್ರಗಳ ಡೌನ್ಲೋಡ್ ಮತ್ತು ಇತರ ಪ್ರಕ್ರಿಯೆ ಪ್ರಾರಂಭವಾಗುತ್ತದೆ. 

ಯಾವುದೇ ನಾಗರೀಕರು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಮತ್ತು ಚುನಾವಣಾ ಇಲಾಖೆ ಈ ವ್ಯಾಪಕ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಆದರೆ ಅದರ ಸಂಪೂರ್ಣ ಯಶಸ್ಸು  ಪ್ರಕ್ರಿಯೆಯು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.