Assembly Elections: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಪತ್ರ ಬರೆದು ಮಹತ್ವದ ಸೂಚನೆ ನೀಡಿದ ಚುನಾವಣಾ ಆಯೋಗ

Assembly Elections: ದೇಶದಲ್ಲಿ ಒಂದೆಡೆ ಕರೋನಾವೈರಸ್ ಹೊಸ ರೂಪಾಂತರದ ಹಾವಳಿಯಾದರೆ, ಇನ್ನೊಂದೆಡೆ ದೇಶದ ಐದು ರಾಜ್ಯಗಳಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆಗಳು ನಡೆಯಬೇಕಿದೆ. ಈ ಹಿನ್ನಲೆಯಲ್ಲಿ ಚುನಾವಣಾ ರಾಜ್ಯಗಳಿಗೆ ಪತ್ರ ಬರೆಯುವ ಮೂಲಕ ಚುನಾವಣಾ ಆಯೋಗ (ಇಸಿ) ಮಹತ್ವದ ಸೂಚನೆಗಳನ್ನು ನೀಡಿದೆ.

Written by - Yashaswini V | Last Updated : Jan 3, 2022, 02:43 PM IST
  • ಮುಂಬರುವ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಆಯೋಗದ ಪತ್ರ
  • ಚುನಾವಣೆ ನಡೆಯಬೇಕಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ
  • ಮಣಿಪುರದಲ್ಲಿ ಮೊದಲ ಡೋಸ್ ಚುಚ್ಚುಮದ್ದಿನ ಶೇಕಡಾವಾರು ಕಡಿಮೆ ಇರುವ ಬಗ್ಗೆ ಚುನಾವಣಾ ಆಯೋಗ ಕಳವಳ ವ್ಯಕ್ತಪಡಿಸಿದೆ
Assembly Elections: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಪತ್ರ ಬರೆದು ಮಹತ್ವದ ಸೂಚನೆ ನೀಡಿದ ಚುನಾವಣಾ ಆಯೋಗ   title=
EC Letter to 5 Election states

ನವದೆಹಲಿ:  ದೇಶದಲ್ಲಿ ಒಂದೆಡೆ ಕರೋನಾವೈರಸ್ (Coronavairus) ಹೊಸ ರೂಪಾಂತರದ ಹಾವಳಿಯಾದರೆ, ಇನ್ನೊಂದೆಡೆ ದೇಶದ ಐದು ರಾಜ್ಯಗಳಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆಗಳು ನಡೆಯಬೇಕಿದೆ. ಈ ಹಿನ್ನಲೆಯಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಬೇಕಿರುವ ರಾಜ್ಯಗಳಿಗೆ ಪತ್ರ ಬರೆಯುವ ಮೂಲಕ ಚುನಾವಣಾ ಆಯೋಗ (ಇಸಿ) ಮಹತ್ವದ ಸೂಚನೆಗಳನ್ನು ನೀಡಿದೆ.  ಕರೋನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಕಳವಳದ ನಡುವೆ  ಚುನಾವಣಾ ಆಯೋಗದ (ಇಸಿ) ಈ ಪತ್ರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. 

ಲಸಿಕೆಯನ್ನು ವೇಗಗೊಳಿಸಲು ಪಂಚರಾಜ್ಯಗಳಿಗೆ ಇಸಿ ಸೂಚನೆ:
ಮುಂಬರುವ ಅಸೆಂಬ್ಲಿ ಚುನಾವಣೆಗೆ (Assembly elections) ಮುಂಚಿತವಾಗಿ, ಚುನಾವಣಾ ಆಯೋಗವು (Election Commission of India) ತಮ್ಮ ಕೋವಿಡ್ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ವಿಧಾನಸಭಾ ಚುನಾವಣೆ ನಡೆಯಬೇಕಿರುವ ಐದು ರಾಜ್ಯಗಳಿಗೆ (ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ) ಸೋಮವಾರ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ-  Maharashtra: ಜನವರಿ ಮೂರನೇ ವಾರದಲ್ಲಿ ಎರಡು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲು...!

ಕರೋನಾ ಲಸಿಕೆಯ (Corona Vaccine) ಮೊದಲ ಡೋಸ್ ಮತ್ತು ಎರಡನೇ ಡೋಸ್ ವೇಗವನ್ನು ಹೆಚ್ಚಿಸುವಂತೆ ಸೂಚನೆ ನೀಡಿರುವ ಚುನಾವಣಾ ಆಯೋಗವು,  ಅದೇ ಸಮಯದಲ್ಲಿ, ಕರೋನಾ ವ್ಯಾಕ್ಸಿನೇಷನ್‌ನ ಮೊದಲ ಡೋಸ್‌ನ ಶೇಕಡಾವಾರು ಪ್ರಮಾಣವು ಅಧಿಕವಾಗಿರಬೇಕು ಮತ್ತು ಸಮಯದಲ್ಲಿ ಎರಡನೇ ಡೋಸ್‌ನ ಶೇಕಡಾವಾರು ಪ್ರಮಾಣವನ್ನು ತ್ವರಿತವಾಗಿ ಹೆಚ್ಚಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ.

ಇದನ್ನೂ ಓದಿ- 1 ರಿಂದ 5 ನೇ ತರಗತಿಗಳಿಗೆ ಶಾಲೆಗಳನ್ನು ಪುನಃ ತೆರೆಯುವ ನಿರ್ಧಾರಕ್ಕೆ ತಡೆ ನೀಡಿದ ಒಡಿಶಾ

ವಿಶೇಷವಾಗಿ, ಕರೋನಾ ವ್ಯಾಕ್ಸಿನೇಷನ್‌ನ (Covid 19 Vaccination) ಮೊದಲ ಡೋಸ್‌ನ್ನು ಕಡಿಮೆ ಪ್ರಮಾಣದಲ್ಲಿ ನೀಡಿರುವ  ಮಣಿಪುರದ  (Manipur)  ಬಗ್ಗೆ ಚುನಾವಣಾ ಆಯೋಗವು ತುಂಬಾ ಕಾಳಜಿ ವಹಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News