ಹೈದ್ರಾಬಾದ್: ಹೈದರಾಬಾದ್ ಮೂಲಕದ ಎಲೆಕ್ಟ್ರಿಕ್ ವೆಹಿಕಲ್ ಕಂಪನಿ Atumobile ಅತ್ಯಂತ ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. Atum 1.0 ಹೆಸರಿನ ಈ ಬೈಕ್ ನ ಬೇಸ್ ಪ್ರೈಸ್ 50 ಸಾವಿರ ರೂ. ನಿಗದಿಪಡಿಸಲಾಗಿದೆ. ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೊಟಿವ್ ಟೆಕ್ನಾಲಜಿ (ICAT) ನಿಂದ ಮಾನ್ಯತೆ ಪಡೆದ ಲೋ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಇದಾಗಿದೆ. ಈ ಬೈಕ್ ಎಷ್ಟೊಂದು ಅಗ್ಗವಾಗಿದೆ ಎಂದರೆ ಇದು ಕೇವಲ 7-8 ರೂ.ಗಳಲ್ಲಿ 100 ಕಿ.ಮೀ ಚಲಿಸುತ್ತದೆ.
ಲೈಸನ್ಸ್ ಅಗತ್ಯವಿಲ್ಲ
Autom 1.0 ಬೈಕ್ ಚಲಾಯಿಸಲು ನೀವು ಯಾವುದೇ ರೀತಿಯ ಲೈಸನ್ಸ್ ಪಡೆಯುವ ಅಗತ್ಯತೆ ಇಲ್ಲ ಹಾಗೂ ರಜಿಸ್ಟ್ರೆಶನ್ ಕೂಡ ಅಗತ್ಯವಿಲ್ಲ. ಭಾರತೀಯ ಗ್ರಾಹಕರಿಗೆ ಇದನ್ನು ವಿಶೇಷ ರೂಪದಲ್ಲಿ ಡಿಸೈನ್ ಮಾಡಲಾಗಿದೆ. Atum 1.0 ಎಲೆಕ್ಟ್ರಿಕ್ ಬೈಕ್ ನಲ್ಲಿ ಪೋರ್ಟೆಬಲ್ ಲಿಥಿಯಂ ಆಯನ್ ಬ್ಯಾಟರಿ ನೀಡಲಾಗಿದ್ದು, 4 ಗಂಟೆಗೂ ಕಡಿಮೆ ಅವಧಿಯಲ್ಲಿ ಫುಲ್ ಚಾರ್ಜ್ ಆಗುತ್ತದೆ. ಸಿಂಗಲ್ ಚಾರ್ಜ್ ನಲ್ಲಿ ಈ ಬೈಕ್ 100 ಕಿ.ಮೀ ರೇಂಜ್ ನೀಡುತ್ತದೆ ಎಂದು ಹೇಳಲಾಗಿದೆ.
ಬ್ಯಾಟರಿ ಮೇಲೆ 2 ವರ್ಷಗಳ ವಾರಂಟಿ
Atumobile ಬೈಕ್ ಎರಡು ವರ್ಷಗಳ ಬ್ಯಾಟರಿ ವಾರಂಟಿಯನ್ನು ಹೊಂದಿದೆ. ಇದರಲ್ಲಿ ಹಲವು ಬಣ್ಣ ಆಯ್ಕೆಗಳಿವೆ. ಆಟಮ್ 1.0 ಎಲೆಕ್ಟ್ರಿಕ್ ಬೈಕ್ನಲ್ಲಿ ಆರು ಕಿಲೋಗ್ರಾಂ ಹಗುರವಾದ ಪೋರ್ಟಬಲ್ ಬ್ಯಾಟರಿ ಪ್ಯಾಕ್ ಸಹ ನೀಡಲಾಗಿದೆ. ಸಾಮಾನ್ಯ ಮೂರು-ಪಿನ್ ಸಾಕೆಟ್ ಬಳಸಿ ಇದನ್ನು ಎಲ್ಲಿ ಬೇಕಾದರೂ ನೀವು ಚಾರ್ಜ್ ಮಾಡಬಹುದು.
ಕೇವಲ 7 ರೂ.ಗಳಲ್ಲಿ 100 ಕಿ.ಮೀ
ಕಂಪನಿಯ ಪ್ರಕಾರ, ಈ ಬೈಕು ಒಂದೇ ಚಾರ್ಜ್ ನಂತರ ಒಂದು ಯುನಿಟ್ ವಿದ್ಯುತ್ ಬಳಕೆ ಮಾಡುತ್ತದೆ. ಈ ಬೈಕು 7-10 ರೂಪಾಯಿಗೆ 100 ಕಿ.ಮೀ ವ್ಯಾಪ್ತಿಯನ್ನು ಚಲಿಸುತ್ತದೆ. ಕಂಪನಿಯ ಪ್ರಕಾರ, ಸಾಂಪ್ರದಾಯಿಕ ಐಸಿಇ ಬೈಕ್ನಲ್ಲಿ 100 ಕಿ.ಮೀ ವೆಚ್ಚ ದಿನಕ್ಕೆ 80-100 ರೂಪಾಯಿಗಳು. ಎಲೆಕ್ಟ್ರಿಕ್ ಬೈಕ್ಗೆ 20x4 ಫ್ಯಾಟ್-ಬೈಕ್ ಟೈರ್ ಗಳನ್ನು ಅಳವಡಿಸಲಾಗಿದೆ. ಬೈಕ್ನಲ್ಲಿ ಗ್ರಾಹಕರ ಅನುಕೂಲಕ್ಕೆ ಕಡಿಮೆ ಆಸನ ಎತ್ತರ, ಎಲ್ಇಡಿ ಹೆಡ್ಲೈಟ್, ಸೂಚಕಗಳು, ಟೈಲ್ಲೈಟ್ ಮತ್ತು ಪೂರ್ಣ ಡಿಜಿಟಲ್ ಡಿಸ್ಪ್ಲೇ ನೀಡಲಾಗಿದೆ.
Royal Enfield ಕೂಡ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ
ರಾಯಲ್ ಎನ್ಫೀಲ್ಡ್ ಕಂಪನಿಯೂ ಕೂಡ ಎಲೆಕ್ಟ್ರಿಕ್ ಬೈಕ್ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಕಂಪನಿಯ ಸಿಇಒ ವಿನೋದ್ ಕೆ. ದಸಾರಿ, ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತಮ್ಮ ಕಂಪನಿಯು ಕದ ತಟ್ಟಲಿದೆ ಎಂದು ಇತ್ತೀಚೆಗಷ್ಟೇ ಹೇಳಿದ್ದಾರೆ. ಕಂಪನಿಯು ಎಲೆಕ್ಟ್ರಿಕ್ ಬೈಕ್ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ವಿನ್ಯಾಸ ಅಥವಾ ಬೆಲೆಯ ಬಗ್ಗೆ ಕಂಪನಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.