ನೌಕರಿ ಹೋದರು ಕೂಡ ಸರ್ಕಾರ ನೀಡುತ್ತೆ ಹಣ... ವೇತನದ ಲೆಕ್ಕಾಚಾರ ಹೀಗಿರಲಿದೆ

ನೌಕರರ ರಾಜ್ಯ ವಿಮಾ ನಿಗಮ ಅಂದರೆ ESICಯ ಅಟಲ್ ಮಿಬಿತ್ ಕಲ್ಯಾಣ್ ಯೋಜನೆಯ ಅಡಿ ನೌಕರಿ ಹೋದರು ಕೂಡ ಸರ್ಕಾರದ ವತಿಯಿಂದ ಭತ್ತೆ ನೀಡಲಾಗುತ್ತದೆ.

Last Updated : Jun 17, 2020, 06:57 PM IST
ನೌಕರಿ ಹೋದರು ಕೂಡ ಸರ್ಕಾರ ನೀಡುತ್ತೆ ಹಣ... ವೇತನದ ಲೆಕ್ಕಾಚಾರ ಹೀಗಿರಲಿದೆ title=

ನವದೆಹಲಿ: ನೌಕರರ ರಾಜ್ಯ ವಿಮಾ ನಿಗಮ ಅಂದರೆ ESICಯ ಅಟಲ್ ಮಿಬಿತ್ ಕಲ್ಯಾಣ್ ಯೋಜನೆಯ ಅಡಿ ನೌಕರಿ ಹೋದರು ಕೂಡ ಸರ್ಕಾರದ ವತಿಯಿಂದ ಭತ್ತೆ ನೀಡಲಾಗುತ್ತದೆ. ಹೌದು, ಒಂದು ವೇಳೆ ನೀವು ಖಾಸಗಿ ರಂಗದಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು ನಿಮ್ಮ ವೇತನದಿಂದ ನೀವು ಪಿಎಫ್/ಇಎಸ್ಐಗೆ ಕೊಡುಗೆ ನೀಡುತ್ತಿದ್ದಾರೆ ನೀವು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಆದರೆ ಲಾಭ ಪಡೆಯಲು ಈ ಯೋಜನೆಯಲ್ಲಿ ನೀವು ನಿಮ್ಮ ಹೆಸರನ್ನು ನಮೂದಿಸುವುದು ಅವಶ್ಯಕವಾಗಿದೆ. ಇದಕ್ಕಾಗಿ ನೀವು ESIC ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ  ಪಡೆಯಬಹುದಾಗಿದೆ. 

ಹೆಚ್ಚುವರಿ ಎಷ್ಟು ಸಹಾಯ ಪಡೆಯಬಹುದು 
ಈ ಯೋಜನೆಯ ಅಡಿ ವಿಮಾ ಹೊಂದಿರುವ ವ್ಯಕ್ತಿ ತನ್ನ ಇಡೀ ಜೀವನ ಕಾಲದಲ್ಲಿ ಗರಿಷ್ಠಒಟ್ಟು 90 ದಿನಗಳ ಲಾಭ ಪಡೆಯಬಹುದು. ಇದಕ್ಕಾಗಿ ಎರಡು ವರ್ಷಗಳ ನೌಕರಿ ಹಾಗೂ 78 ದಿನಗಳ ಕೊಡುಗೆ ನೀಡುವುದು ಅನಿವಾರ್ಯವಾಗಿದೆ.  ಅಂದರೆ ನೌಕರಿ ಕಳೆದುಕೊಳ್ಳುವುದಕ್ಕೂ ಮೊದಲು ಕೊಡುಗೆಯ ಅವಧಿಯಲ್ಲಿ ಕನಿಷ್ಠ 78 ದಿನಗಳ ಕೊಡುಗೆ ನೀಡುವುದು ಅವಶ್ಯಕವಾಗಿದೆ. ಈ ಯೋಜನೆಯ ಲಾಭ ಪಡೆಯಲು ವ್ಯಕ್ತಿ ನೌಕರಿ ಕಳೆದುಕೊಂಡು ಮೂರು ತಿಂಗಳು ಗತಿಸಿರಬೇಕು.

ಹೇಗಿರಲಿದೆ ಲೆಕ್ಕಾಚಾರ?
ಉದಹಾರಣೆ 1: ಓರ್ವ ವ್ಯಕ್ತಿ ಏಪ್ರಿಲ್ 1, 2020ಕ್ಕೆ ತನ್ನ ನೌಕರಿ ಕಳೆದುಕೊಂಡಿದ್ದಾನೆ ಅಂದುಕೊಳ್ಳೋಣ. ಆತ ಸೆಪ್ಟೆಂಬರ್ 2018 ರಿಂದ ಮಾರ್ಚ್ 2020ರವರೆಗೆ ಕೊಡುಗೆ ನೀಡಿದ್ದಾನೆ.

ಆತನ ಕೊಡುಗೆಯ ಅವಧಿ                   ಒಟ್ಟು ದಿನಗಳ ಸಂಖ್ಯೆ     ವೇಜೆಸ್
ಅಕ್ಟೋಬರ್ 2019 - ಮಾರ್ಚ್ 2020    182                          60,000 ರೂ.
ಏಪ್ರಿಲ್ 2019 - ಸೆಪ್ಟೆಂಬರ್ 2019       183                          60,000 ರೂ.
ಅಕ್ಟೋಬರ್ 2018 - ಮಾರ್ಚ್ 2019     182                          60,000 ರೂ.
ಏಪ್ರಿಲ್ 2018 - ಸೆಪ್ಟೆಂಬರ್ 2018        183                          60,000 ರೂ.
ಒಟ್ಟು                                              730                      2,40,000 
90 ದಿನಗಳ ಲೆಕ್ಕಾಚಾರದಲ್ಲಿ ಒಟ್ಟು ಲಾಭ: (24000೦/730)*25/100*90=7397 ರೂ.

ಉದಾಹರಣೆ 2: ನೀವು ಒಟ್ಟು 419 ದಿನಗಳ ಅವಧಿಯಲ್ಲಿ ಒಟ್ಟು 138667 ರೂ. ಕೊಡುಗೆ ನೀಡಿದ್ದಿರಿ ಅಂದುಕೊಳ್ಳೋಣ
90 ದಿನಗಳ ಲೆಕ್ಕಾಚಾರದಲ್ಲಿ ಒಟ್ಟು ಲಾಭ:(138667/419)*25/100* 90= 4274 ರೂ. ಆಗಲಿದೆ.

ಹೇಗೆ ಹೆಸರು ನೋಂದಾಯಿಸಬೇಕು?
ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆಯ ಲಾಭ ಪಡೆಯಲು ಮೊದಲು ನೀವು ನಿಮ್ಮ ಹೆಸರನ್ನು ನೊಂದಾಯಿಸುವುದು ಅವಶ್ಯಕವಾಗಿದೆ. ESIC ವೆಬ್ ಸೈಟ್ ಗೆ ಭೇಟಿ ನೀಡಿ ನೀವು ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ  ಯೋಜನೆಯ ಫಾರ್ಮ್ ಡೌನ್ ಲೋಡ್ ಮಾಡಬಹುದು. ಫಾರ್ಮ್ ಅನ್ನು ಡೌನ್ ಲೋಡ್ ಮಾಡಲು ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿ.
https://www.esic.nic.in/attachments/circularfile/93e904d2e3084d65fdf7793...
ಈ ಫಾರ್ಮ್ ನಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಅದನ್ನು ನಿಮ್ಮ ಹತ್ತಿರದಲ್ಲಿರುವ ESIC ಬ್ರಾಂಚ್ ನಲ್ಲಿ ಸಲ್ಲಿಸಿ. ಈ ಫಾರ್ಮ್ ಜೊತೆಗೆ 20 ರೂ. ಮುಖಬೆಲೆಯ ನಾನ್-ಜುಡಿಷಿಯಲ್ ಸ್ಟಾಂಪ್ ಪೇಪರ್ ಮೇಲೆ ನೋಟರಿ ಮೂಲಕ ಅಫಿಡವಿಟ್ ಕೂಡ ಸಲ್ಲಿಸಬೇಕು. ಇದರಲ್ಲಿ AB-1 ನಿಂದ ಹಿಡಿದು AB-4 ವರೆಗಿನ ಫಾರ್ಮ್ ಸಲ್ಲಿಸಬೇಕು. ಸದ್ಯ ಇದರ ಆನ್ಲೈನ್ ಸೌಕರ್ಯ ಇಲ್ಲ. ಆದರೆ, ಶೀಘ್ರದಲ್ಲಿಯೇ ಇದರ ಆನ್ಲೈನ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿತ್ತು. ಈ ಯೋಜನೆಯ ಲಾಭವನ್ನು ನೀವು ಕೇವಲ ಒಂದು ಬಾರಿಗೆ ಪಡೆಯಬಹುದು.

ಯಾರು ಇದರ ಲಾಭ ಪಡೆಯಲು ಸಾಧ್ಯವಿಲ್ಲ 
ಒಂದು ವೇಳೆ ಯಾವುದೇ ನೌಕರ ESIC ವಿಮಾ ಹೊಂದಿದ್ದರು ಕೂಡ, ಆತ ಅವ್ಯವಹಾರದಲ್ಲಿ ತೊಡಗಿ ಕಂಪನಿಯಿಂದ ತೆಗೆದುಹಾಕಲಾಗಿದ್ದರೆ ಅಥವಾ ಆತನ ಮೇಲೆ ಯಾವುದೇ ರೀತಿಯ ಕೇಸ್ ನಮೂದಾಗಿದ್ದರೆ ಮತ್ತು ಸ್ವಇಚ್ಛೆಯಿಂದ ರಿಟೈರ್ ಮೆಂಟ್ ಪಡೆದುಕೊಂಡಿದ್ದರೆ, ಅಂತವರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ .

Trending News