Exclusive: ಭಾರತದ ಪರಮಾಣು ಮಿಸೈಲ್ ಗಳ ಗುರಿ ಅಡಿ ಚೀನಾ- ವರದಿ

ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತ ತನ್ನ ಪರಮಾಣು ಭದ್ರತಾ ಕಾರ್ಯತಂತ್ರದಲ್ಲಿ ಪ್ರಮುಖ ಪುನರ್ರಚನೆ ಮಾಡಿದೆ. ಈಗ ಚೀನಾದ ರಾಜಧಾನಿ ಬೀಜಿಂಗ್ ಭಾರತದ ಪರಮಾಣು ಕ್ಷಿಪಣಿಗಳ ಸ್ಕ್ಯಾನರ್ ಅಡಿಯಲ್ಲಿ ಬಂದಿದೆ.

Last Updated : Jul 23, 2020, 11:58 AM IST
Exclusive: ಭಾರತದ ಪರಮಾಣು ಮಿಸೈಲ್ ಗಳ ಗುರಿ ಅಡಿ ಚೀನಾ- ವರದಿ title=

ನವದೆಹಲಿ:ZEE NEWS WORLD EXCLUSIVEನಲ್ಲಿ ಇಂದು ನಿಮಗಾಗಿ ಒಂದು ದೊಡ್ಡ ಸುದ್ದಿ ಹೊತ್ತು ತಂದಿದ್ದೇವೆ. ಈ ಸುದ್ದಿ ಭಾರತ-ಚೀನಾ ಉದ್ವಿಗ್ನತೆ ಮತ್ತು 'ಪರಮಾಣು' ಕ್ಷಮತೆಯ ಸುದ್ದಿಯಾಗಿದೆ. ಭಾರತದ ಪರಮಾಣು ಕಾರ್ಯತಂತ್ರದ ಗಮನವು ಇದೀಗ ಪಾಕಿಸ್ತಾನದಿಂದ ಚೀನಾಗೆ ಶಿಫ್ಟ್ ಆಗಿದೆ. ಹೀಗಂತ ನಾವು ನಿಮಗೆ ಹೇಳುತ್ತಿಲ್ಲ. ಅಮೆರಿಕಾದಲ್ಲಿ ಪ್ರಕಟಗೊಂಡ ಒಂದು ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. 'ಬುಲೆಟಿನ್ ಆಫ್ ಆಫ್ ಅಟಾಮಿಕ್ ಸೈಂಟಿಸ್ಟ್' ನಲ್ಲಿ ಪ್ರಕಟಗೊಂಡ  ಒಂದು ಅಧ್ಯಯನವು ಡೋಕ್ಲಾಮ್ ನಂತರ ಭಾರತದ ಪರಮಾಣು ನೀತಿ ಬದಲಾಗಿದೆ ಎಂದು ಹೇಳಿದೆ.

ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ತನ್ನ ಪರಮಾಣು ಭದ್ರತಾ ಕಾರ್ಯತಂತ್ರದಲ್ಲಿ ಪ್ರಮುಖ ಪುನರ್ರಚನೆ ಮಾಡಿದೆ ಎಂದು ವರದಿ ಹೇಳಿದೆ. ಅಷ್ಟೇ ಅಲ್ಲ ಇದೀಗ ಚೀನಾ ರಾಜಧಾನಿ ಬೀಜಿಂಗ್ ಭಾರತದ ಪರಮಾಣು ಕ್ಷಿಪಣಿಗಳ ಸ್ಕ್ಯಾನರ್ ಅಡಿಯಲ್ಲಿ ಬಂದಿದೆ ಎನ್ನಲಾಗಿದೆ. ವರದಿಯ ಪ್ರಕಾರ, ಭಾರತವು ಪ್ರಸ್ತುತ ಭೂ-ಗಾಳಿ ಮತ್ತು ನೀರಿನಿಂದ ಪರಮಾಣು ದಾಳಿ ನಡೆಸಲು ಸಮರ್ಥವಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಸಮುದ್ರದಿಂದ ಪರಮಾಣು ದಾಳಿ ನಡೆಸುವ ಕ್ಷಮತೆಯೂ ಕೂಡ ಭಾರತದ ಬಳಿ ಇದೆ. ವರದಿಯ ಪ್ರಕಾರ, ಭಾರತವು ಪಾಕಿಸ್ತಾನವನ್ನು ಪಕ್ಕಕ್ಕಿಟ್ಟು ಇದೀಗ ಚೀನಾದ ಮೇಲೆ ಪರಮಾಣು ನೀತಿಯನ್ನು ಕೇಂದ್ರೀಕರಿಸಿದೆ. ವರದಿಯ ಪ್ರಕಾರ, ಭೂಮಿ-ಜಲ ಹಾಗೂ ಆಕಾಶದಿಂದ ಪರಮಾಣು ದಾಳಿ ನಡೆಸಲು ಭಾರತ ಸಮರ್ಥವಾಗಿದೆ ಎನ್ನಲಾಗಿದೆ.

ಚೀನಾ ವಿರುದ್ಧ ಭಾರತ ಪ್ರತಿ ರಂಗದಲ್ಲೂ ಸನ್ನದ್ಧವಾಗಿದೆ
ಇದಕ್ಕಾಗಿ ಭಾರತೀಯ ವಾಯುಪಡೆಯು ಲಡಾಖ್‌ನಲ್ಲಿ ಪ್ರಮುಖ ಸಿದ್ಧತೆಗಳನ್ನು ಕೈಗೊಂಡಿದೆ. ಸೈನಿಕರು ಮತ್ತು ಯುದ್ಧೋಪಕರಣಗಳನ್ನೂ ಮುಂದಕ್ಕೆ ಸಾಗಿಸಲಾಗುತ್ತಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸಂಪೂರ್ಣ ಸನ್ನದ್ಧವಾಗಿದೆ. ಚೀನಾದ ಸೈನಿಕರು ಇನ್ನೂ ಫಿಂಗರ್ 4 ಪಾಯಿಂಟ್ ನಿಂದ ಹಿಂದಕ್ಕೆ ಸರಿದಿಲ್ಲ, ಇದುವರೆಗೂ ಕೂಡ ಚೀನಾ ತನ್ನ 40 ಸಾವಿರ ಸೈನಿಕರನ್ನು ಎಲ್‌ಎಸಿಯಲ್ಲಿ ನಿಯೋಜಿಸಿದೆ.

Trending News