ನವದೆಹಲಿ: ರಾಜಸ್ತಾನದಲ್ಲಿ ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಅಮಿತ್ ಶಾ ತಿಳಿಸಿದರು.
ಜೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ "ರಾಜಸ್ತಾನದಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಇದನ್ನು ನಾನು ಬಹಳ ಭರವಸೆಯಿಂದ ಹೇಳುತ್ತಿದ್ದೇನೆ,ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡು ಸೇರಿ ಉತ್ತಮ ಕಾರ್ಯ ನಿರ್ವಹಿಸಿವೆ ಎಂದು ಅವರು ತಿಳಿಸಿದರು.
ಇದೇ ವೇಳೆ ಜಮ್ಮು ಕಾಶ್ಮೀರದ ವಿಚಾರದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಅಮಿತ್ ಷಾ" ರಾಜ್ಯಪಾಲರು ಮಾಡಿದ್ದು ಸರಿ ಇದೇ ಎಂದು ತಿಳಿಸಿದರು.ಅಲ್ಲದೆ ಮುಂದಿನ ಚುನಾವಣೆಯಲ್ಲಿಯೂ ಸಹಿತ ಮಹಾ ಘಟಮಬಂಧನ್ ನ್ನು ಸೋಲಿಸುತ್ತೇವೆ.1+1+1 ಯಾವಾಗಲೂ 11 ಆಗುವುದಿಲ್ಲ ಎಂದು ಅವರು ಮಹಾಘಟಬಂದನ್ ಬಗ್ಗೆ ವ್ಯಂಗವಾಡಿದರು.
ರಾಮಮಂದಿರ ವಿವಾದವು ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ, ನಮಗೆ ಜನರ ಮನಸ್ಥಿತಿ ತಿಳಿದಿದೆ ನಾವು ಅವರಿಗೆ ಉತ್ತರಿಸುತ್ತೇವೆ ಎಂದು ಅಮಿತ್ ಷಾ ತಿಳಿಸಿದರು. ರಫೇಲ್ ಒಪ್ಪಂದದ ಬಗ್ಗೆ ಮಾತನಾಡಿದ ಅವರು ಇದರಲ್ಲಿ ಯಾವುದೇ ಸತ್ಯವಿಲ್ಲ ಒಂದು ವೇಳೆ ಇದ್ದಿದ್ದೆ ಆದಲ್ಲಿ ಕಾಂಗ್ರೆಸ್ ಈ ಮೊದಲು ಸುಪ್ರಿಂಕೋರ್ಟ್ ಬಳಿ ಏಕೆ ಮೊರೆ ಹೋಗಲಿಲ್ಲ ಎಂದು ಅವರು ಕುಟುಕಿದರು. ಅಚ್ಚೆದೀನ್ ಬಗ್ಗೆ ಮಾತನಾಡಿದ ಅವರು ನಾವು ವಿಪಕ್ಷಗಳಿಗೆ ಅಚ್ಚೆ ದೀನ್ ಎಂದು ಹೇಳಿಲ್ಲ ನಾವು ಹೇಳಿದ್ದು ಈ ದೇಶದ ಜನರಿಗೆ ಎಂದು ಅಮಿತ್ ಷಾ ತಿಳಿಸಿದರು. ಇದುವರೆಗೂ ಆಯುಷ್ಮಾನ್ ಭಾರತ ಯೋಜನೆಯಿಂದ 3 ಲಕ್ಷ ಜನರು ಸದುಪಯೋಗಪಡಿಸಿಕೊಂಡಿದ್ದಾರೆ ಎನ್ನುತ್ತಾ ಅಚ್ಚೆ ದೀನ್ ಬಗೆಗಿನ ವಾಖ್ಯಾನವನ್ನು ಸಮರ್ಥಿಸಿಕೊಂಡರು.
ನಾವು ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಗೆಲ್ಲುತ್ತೇವೆ
ಅಮಿತ್ ಶಾ ಮಾತನಾಡುತ್ತಾ ""ತಾವು ಇದುವರೆಗೆ ಅಭಿವೃದ್ದಿ ಆಧಾರದ ಮೇಲೆ ಚುನಾವಣೆಯನ್ನು ಗೆದ್ದಿದ್ದೇವೆ. ಇದಕ್ಕೆ ಗುಜರಾತ್,ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ್ ಇದಕ್ಕೆ ಉದಾಹರಣೆ.ಆದ್ದರಿಂದ,ಅಭಿವೃದ್ಧಿಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳುವುದು ತಪ್ಪು" ಎಂದು ಶಾ ತಿಳಿಸಿದರು.
ಸಿಬಿಐ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪವೆಲ್ಲವು ಸುಳ್ಳು
ಸಿಬಿಐ ಬಗ್ಗೆ ಯಾವುದೇ ಭಯವಿಲ್ಲ, ಇಬ್ಬರು ಅಧಿಕಾರಿಗಳು ಪರಸ್ಪರ ಆರೋಪ ಮಾಡಿದ್ದಾರೆ ಆದ್ದರಿಂದ ಅವರನ್ನು ತನಿಖೆ ಮುಗಿಯುವ ತನಕ ಅವರನ್ನು ರಜೆಗೆ ಕಳುಹಿಸಬೇಕಾಯಿತು ಎಂದು ಅವರು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷವು ಕೂಡ ಆರ್ ಬಿ ಐ ಗವರ್ನರ್ ಗಳನ್ನು ಕಿತ್ತು ಹಾಕಿದೆ. ಈಗ ಮೋದಿ ಸರ್ಕಾರ ಮತ್ತು ಆರ್ಬಿಐ ಮಧ್ಯ ಯಾವುದೇ ರೀತಿಯ ಸಂಘರ್ಷವಿಲ್ಲ ಎಂದರು.ಇನ್ನು ನೋಟು ನಿಷೇಧ ಕಾಯ್ದೆ ಮತ್ತು ಜಿಎಸ್ಟಿ ಮೋದಿ ಸರ್ಕಾರದ ಎರಡು ಉತ್ತಮ ನಿರ್ಧಾರಗಳು, ಜಿಎಸ್ಟಿ ಎರಡು ವರ್ಷದ ನಂತರ ಬದಲಾವನೆಯನ್ನುಂಟು ಮಾಡಲಿದೆ ಎಂದು ಷಾ ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ
ಇಡೀ ಬಿಜೆಪಿ ಪಕ್ಷವು ಈಗ ಪ್ರಧಾನಿ ಮೋದಿಯವರಿಗೆ ಈಗ ಬಂಡೆಗಲ್ಲಿನಂತೆ ಬೆಂಬಲವಾಗಿ ನಿಂತಿದೆ. ಚುನಾವಣೆಗಾಗಿ ಪ್ರಧಾನಿ ಮೋದಿ ಮತ್ತು ಸರ್ಕಾರದ ವಿರುದ್ದ ಮಾತುಗಳು ಕೇಳಿಬರುತ್ತಿವೆ ಆದರೆ ಅವು ಯಾವು ಕೂಡ ಬಿಜೆಪಿ ಗೆಲುವಿಗೆ ಅಡ್ಡಿಯಾಗುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶ,ಕೇರಳಾ ಒಡಿಷಾ, ಪ.ಬಂಗಾಲ, ಮತ್ತು ಈಶಾನ್ಯ ರಾಜ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಷಾ ತಿಳಿಸಿದರು.
ನರೇಂದ್ರ ಮೋದಿ ಜನಪ್ರಿಯ ನಾಯಕ ಆದರೆ ಬ್ರಾಂಡ್ ಅಲ್ಲ, ಬ್ರಾಂಡ್ ಇರುತ್ತೆ ಹೋಗುತ್ತೆ, ಆದರೆ ಜನಪ್ರೀಯ ನಾಯಕ ಎಂದು ಅಳಿಸಿಹೊಗುವುದಿಲ್ಲ ಎಂದು ಮೋದಿ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಅಕ್ರಮ ವಲಸೆಗಾರರ ನಿಯಂತ್ರಣಕ್ಕೆ ಕ್ರಮ ಕಾಂಗ್ರೆಸ್ ಕ್ರಮ ತಗೆದುಕೊಳ್ಳದಿರುವುದಕ್ಕೆ ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಇದುವರೆಗೂ ವಲಸೆಗಾರರನ್ನು ತಡೆಗಟ್ಟಲು ಯಾವುದೇ ಕ್ರಮವನ್ನು ತಗೆದುಕೊಂಡಿಲ್ಲ, ಕಾಂಗ್ರೆಸ್ ಎಂದಾದರು ಈ ದೇಶದ ಅಭಿವೃದ್ದಿ ಮತ್ತು ಸಂಪನ್ಮೂಲಗಳ ಬಗ್ಗೆ ಚಿಂತಿಸಿದ್ದಾರೆಯೇ? ಎಂದು ಅಮಿತ್ ಶಾ ಪ್ರಶ್ನಿಸಿದರು.