ಗುನಾದಲ್ಲಿ ಪಟಾಕಿ ತಯಾರಿಸುವಾಗ ಸ್ಫೋಟ; ಇಬ್ಬರು ಮೃತ, 3 ಮಂದಿಗೆ ಗಾಯ

ಸ್ಫೋಟವು ತುಂಬಾ ತೀವ್ರವಾಗಿದ್ದು, ಸ್ಫೋಟಕ್ಕೆ ಮನೆಯ ಶೆಡ್ ಹಾರಿ ಹೋಗಿದೆ ಎಂದು ಹೇಳಲಾಗಿದೆ. 

Updated: Oct 19, 2019 , 07:10 AM IST
ಗುನಾದಲ್ಲಿ ಪಟಾಕಿ ತಯಾರಿಸುವಾಗ ಸ್ಫೋಟ; ಇಬ್ಬರು ಮೃತ, 3 ಮಂದಿಗೆ ಗಾಯ
Photo Courtesy: Twitter/@ANI

ಗುನಾ(ಮಧ್ಯಪ್ರದೇಶ): ಇಲ್ಲಿನ ಕಂಟೋನ್ಮೆಂಟ್ ಪ್ರದೇಶದಲ್ಲಿ ಪಟಾಕಿ ತಯಾರಿಸುತ್ತಿದ್ದ ವೇಳೆ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಸಮೀರ್ (18) ಮತ್ತು ರುಖ್ಸಾರ್ (26) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸುವಾಗ ಇವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಫೋಟವು ತುಂಬಾ ತೀವ್ರವಾಗಿದ್ದು, ಸ್ಫೋಟಕ್ಕೆ ಮನೆಯ ಶೆಡ್ ಹಾರಿ ಹೋಗಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.