ನಕಲಿ ಹಿಂದುತ್ವವಾದಿ ಪಕ್ಷವು ದೇಶದ ದಾರಿ ತಪ್ಪಿಸುತ್ತಿದೆ: ಉದ್ಧವ್ ಠಾಕ್ರೆ

ನಿಮ್ಮ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಎಂದಿಗೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿಲ್ಲವೆಂದು ಉದ್ಧವ್ ಠಾಕ್ರೆ ಬಿಜೆಪಿಯನ್ನು ಟೀಕಿಸಿದ್ದಾರೆ.

Written by - Zee Kannada News Desk | Last Updated : May 14, 2022, 10:46 PM IST
  • ನಕಲಿ ಹಿಂದುತ್ವವಾದಿ ಪಕ್ಷವೊಂದು ದೇಶದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ
  • ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದಿಗೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿಲ್ಲ
  • ಬಿಜೆಪಿ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ವಾಗ್ದಾಳಿ
ನಕಲಿ ಹಿಂದುತ್ವವಾದಿ ಪಕ್ಷವು ದೇಶದ ದಾರಿ ತಪ್ಪಿಸುತ್ತಿದೆ: ಉದ್ಧವ್ ಠಾಕ್ರೆ title=
ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ

ನವದೆಹಲಿ: ‘ನಕಲಿ ಹಿಂದುತ್ವವಾದಿ ಪಕ್ಷ’ವೊಂದು ರಾಷ್ಟ್ರದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಮಾತನಾಡಿರುವ ಅವರು, ಬಿಜೆಪಿಯ ಹಿಂದುತ್ವದ ನಡೆಯನ್ನು ಪ್ರಶ್ನಿಸಿ ಕಿಡಿಕಾರಿದ್ದಾರೆ.  

‘ದೇಶವನ್ನು ದಾರಿ ತಪ್ಪಿಸುವ ನಕಲಿ ಹಿಂದುತ್ವವಾದಿ ಪಕ್ಷವೊಂದಿದೆ. ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ತಮ್ಮ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರು. ನಾವು ನಿಮ್ಮನ್ನು ಅಧಿಕಾರದಿಂದ ಕಿತ್ತು ಹೊರಹಾಕಿದ್ದೇವೆ. ಕೇವಲ ಅವರು ಮಾತ್ರವೇ ಹಿಂದುತ್ವದ ರಕ್ಷಕರು ಎಂದು ಭಾವಿಸಿದ್ದಾರೆ. ಹಾಗಾದ್ರೆ ಇಲ್ಲಿನ ಜನರು ಯಾರು..? ಅವರು ಯಾರು..? ಎಂದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಠಾಕ್ರೆ ಪ್ರಶ್ನಿಸಿದ್ದಾರೆ.  

ಇದನ್ನೂ ಓದಿ: Gyanvapi mosque :ಬಿಗಿ ಭದ್ರತೆಯೊಂದಿಗೆ ನಡೆದ ವಿವಾದಿತ ಜ್ಞಾನವಾಪಿ ಮಸೀದಿ ಸಮೀಕ್ಷೆ

‘ನಿಮ್ಮ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಎಂದಿಗೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿಲ್ಲ. ಸಂಯುಕ್ತ ಮಹಾರಾಷ್ಟ್ರ ಚಳವಳಿಯನ್ನು ನನ್ನ ತಾತನವರು ರೂಪಿಸಿದ್ದರು. ನನ್ನ ತಂದೆ ಬಾಳ್ ಠಾಕ್ರೆ ಮತ್ತು ಅವರ ಸಹೋದರ ಶ್ರೀಕಾಂತ್‌ ತಾತನವರ ಹೋರಾಟಕ್ಕೆ ಸಹಾಯ ಮಾಡಿದ್ದರು. ಆದರೆ, ಯಾರು ಕೈಕೊಟ್ಟರು ಎಂದು ನಿಮಗೆ ತಿಳಿದಿದೆಯೇ? ಭಾರತೀಯ ಜನಸಂಘ’ವೆಂದು ಹೇಳಿದರು.

‘ಆರ್‌ಎಸ್‌ಎಸ್ ಬಿಜೆಪಿಯ ಸೈದ್ಧಾಂತಿಕ ಚಿಲುಮೆಯಾಗಿದೆ. ರಾಹುಲ್ ಭಟ್ (ಕಾಶ್ಮೀರಿ ಪಂಡಿತ್) ಅವರನ್ನು ಸರ್ಕಾರಿ ಕಚೇರಿಯಲ್ಲಿ ಕೊಲ್ಲಲಾಯಿತು. ಉಗ್ರಗಾಮಿಗಳು ಬಂದು ಅವರನ್ನು ಕೊಂದರು. ನೀವು ಅಲ್ಲಿ ಹನುಮಾನ್ ಚಾಲೀಸಾವನ್ನು ಓದುತ್ತೀರಾ?’ ಎಂದು ಉದ್ಧವ್ ಠಾಕ್ರೆ ಆಕ್ರೋಶ ಹೊರಹಾಕಿದ್ದಾರೆ.   

ಇದನ್ನೂ ಓದಿ: ವಿವಾಹ ದಿನ ವರ ಮಾಡಿದ ಈ ಒಂದು ತಪ್ಪಿನಿಂದ ಮುರಿದು ಬಿತ್ತು ಮದುವೆ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News