Viral Video:ಬಸ್ ಮೇಲ್ಛಾವಣಿ ಮೇಲೆ ಪ್ರಯಾಣಿಕರು, ಬ್ರೇಕ್ ಹಾಕಿದ ಡ್ರೈವರ್, ಮುಂದೇನಾಯ್ತು ನೀವೇ ನೋಡಿ

Viral Video: ಸಾಮಾಜಿಕ ಮಾಧ್ಯಮಗಳಲ್ಲಿ (Social Media) ದಿನನಿತ್ಯ ಹಲವು ವಿಡಿಯೋಗಳು ಮತ್ತು ಸಂಗತಿಗಳು ವೈರಲ್ ಆಗುತ್ತವೆ. ಆದರೆ ಪ್ರಸ್ತುತ ವೈರಲ್ (Viral Video) ಆಗುತ್ತಿರುವ ವಿಡಿಯೋವೊಂದು  ನೋಡಿ ನೀವೂ ಬೆಚ್ಚಿಬೀಳಬಹುದು.

Written by - Nitin Tabib | Last Updated : Jul 27, 2021, 10:26 AM IST
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ವೀಡಿಯೊ.
  • ಬಸ್ ಮೇಲ್ಛಾವಣಿಯ ಮೇಲೆ ಸವಾರಿ ಮಾಡುತ್ತಿರುವ ಪ್ರಯಾಣಿಕರು.
  • ಬ್ರೇಕ್ ಹಾಕಿದ ಡ್ರೈವರ್, ಮುಂದೇನಾಯ್ತು ತಿಳಿದುಕೊಳ್ಳಲು ವಿಡಿಯೋ ನೋಡಿ.
Viral Video:ಬಸ್ ಮೇಲ್ಛಾವಣಿ ಮೇಲೆ ಪ್ರಯಾಣಿಕರು, ಬ್ರೇಕ್ ಹಾಕಿದ ಡ್ರೈವರ್, ಮುಂದೇನಾಯ್ತು ನೀವೇ ನೋಡಿ title=
Funny Viral Video (Video Grab)

Viral Video: ಸಾಮಾಜಿಕ ಮಾಧ್ಯಮಗಳಲ್ಲಿ (Social Media) ದಿನನಿತ್ಯ ಹಲವು ವಿಡಿಯೋಗಳು ಮತ್ತು ಸಂಗತಿಗಳು ವೈರಲ್ ಆಗುತ್ತವೆ. ಆದರೆ ಪ್ರಸ್ತುತ ವೈರಲ್ (Viral Video) ಆಗುತ್ತಿರುವ ವಿಡಿಯೋವೊಂದು  ನೋಡಿ ನೀವೂ ಬೆಚ್ಚಿಬೀಳಬಹುದು. ಈ ವಿಡಿಯೋ ನೋಡಿ ನಿಮಗೆ ನಗು ಬಂದ್ರೆ (Funny Viral Video) ಇನ್ನೊಂದೆಡೆ ಪಾಠ ಕೂಡ ಕಲಿಯಲು ಸಿಗಲಿದೆ. ಈ ವಿಡಿಯೋದಲ್ಲಿ ಜನರ ಗುಂಪೊಂದು ಬಸ್ ಮೇಲ್ಛಾವಣಿಯ ಮೇಲೆ ಸವಾರಿ (Passengers Travelling On Rooptop Of Bus, ಮಾಡುತ್ತಿದ್ದಾರೆ. ಸವಾರಿ ಮಾಡುತ್ತಿರುವ ಜನರು ತುಂಬಾ ಖುಷಿಯಿಂದ ಕೇಕೆ ಕೂಡ ಹಾಕುತ್ತಿದ್ದಾರೆ. ಅಷ್ಟರಲ್ಲಿ ಬಸ್ ಡ್ರೈವರ್ ಬ್ರೇಕ್ ಹಾಕುತ್ತಾನೆ. ತಕ್ಷಣ ಬಸ್ ಮೇಲ್ಛಾವಣಿಯ ಮೇಲೆ ಕುಳಿತ ಜನರು ಕೆಳಗೆ ಉದುರಿ ಬೀಳುತ್ತಾರೆ.

ಇದನ್ನೂ ಓದಿ-Viral Video: ಮೊಹಮ್ಮದ್ ಶಮಿಗೆ ಬಕ್ರೀದ್ ಶುಭಾಶಯ ತಿಳಿಸಿದ ಇಶಾಂತ್ ಶರ್ಮಾ

ಈ ರೀತಿ ಸವಾರಿ ಮಾಡುವುದು ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ನೀವು ವಿಡಿಯೋ ಮೇಲೆ ಸ್ಪಷ್ಟವಾಗಿ ನೋಡಬಹುದು. ವಿಡಿಯೋದಲ್ಲಿ (Viral Funny Video) ರಸ್ತೆ ಮಧ್ಯದಿಂದ ಬಸ್ ವೊಂದು ವೇಗವಾಗಿ ಸಂಚರಿಸುತ್ತಿದ್ದು, ಅದರ ಮೇಲ್ಛಾವಣಿಯ ಮೇಲೆ ಬಸ್ ಮುಂಭಾಗದಲ್ಲಿ ಜನರ ಗುಂಪೊಂದು ಕುಳಿತು ಕೇಕೆ ಹಾಕುತ್ತಿದೆ. ಏತನ್ಮಧ್ಯೆ ಬಸ್ ಡ್ರೈವರ್ ಆಕಸ್ಮಿಕವಾಗಿ ಬಸ್ ಗೆ ಬ್ರೇಕ್ ಹಾಕುತ್ತಾನೆ. ಬ್ರೇಕ್ ಹಾಕುತ್ತಿದ್ದಂತೆ ಬಸ್ ಮೇಲೆ ಕುಳಿತ ಜನರು ಬಿರಿ ಬಿರಿ ಉದುರಿ ಕೆಳಕ್ಕೆ ಬೀಳುತ್ತಾರೆ. ಇದರಲ್ಲಿ ಹಲವು ಜನರಿಗೆ ಗಾಯಗಳಾಗುತ್ತವೆ. ಅಷ್ಟೇ ಅಲ್ಲ ಬಸ್ ಮುಂದೆ ಹೋರಟ ಬೈಕ್ ಸವಾರರಿಗೂ ಕೂಡ ಹಾನಿಯುಂಟಾಗುತ್ತದೆ. 

ಇದನ್ನೂ ಓದಿ-Viral Video:ವಧು ನೋಡಿದ ಕೂಡಲೇ ಮದುವೆ ಮನೆಯಿಂದಲೇ ಓಡಿಹೋದ ವರ..!

IPS ರುಪಿನ್ ಶರ್ಮಾ (IPS Rupin Sharma) ಎಂಬುವರ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಅನ್ನು ಅಪ್ಲೋಡ್ ಮಾಡಿದ ಅವರು "ಎಚ್ಚರಿಕೆ, ಬಸ್ ಮೇಲ್ಛಾವಣಿ ಮೇಲೆ ಕುಳಿತು ಪ್ರಯಾಣ ಮಾಡಬೇಡಿ' ಎಂಬ ಕ್ಯಾಪ್ಶನ್ ಬರೆದಿದ್ದಾರೆ.

ಇದನ್ನೂ ಓದಿ-National Animal vs National Bird: ಗರಿಬಿಚ್ಚಿದ ನವಿಲಿನ ಮೇಲೆ ಹುಲಿರಾಯನ ದಾಳಿ, ವಿಡಿಯೋ ವೈರಲ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News