ಮದುವೆಯಲ್ಲಿ ಮ್ಯೂಸಿಕ್ ಗಾಗಿ ಜಗಳ, ಪತಿ ರಕ್ಷಣೆಗೆ ಬಂದ ಮಹಿಳೆಗೆ ಗುಂಡಿಕ್ಕಿ ಹತ್ಯೆ

ದೆಹಲಿಯ ಮಂಗಳಪುರಿಯಲ್ಲಿರುವ ಮದುವೆ ಕಾರ್ಯಕ್ರಮದಲ್ಲಿ ಡಿಜೆ ಹಾಡಿಗಾಗಿ ಮೂವರ ನಡುವೆ ಜಗಳ ನಡೆದಿದೆ.ಈ ಸಂದರ್ಭದಲ್ಲಿ ಅಡ್ಡ ಬಂದ ಮಹಿಳೆಗೆ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.

Last Updated : Mar 3, 2019, 04:09 PM IST
ಮದುವೆಯಲ್ಲಿ ಮ್ಯೂಸಿಕ್ ಗಾಗಿ ಜಗಳ, ಪತಿ ರಕ್ಷಣೆಗೆ ಬಂದ ಮಹಿಳೆಗೆ ಗುಂಡಿಕ್ಕಿ ಹತ್ಯೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯ ಮಂಗಳಪುರಿಯಲ್ಲಿರುವ ಮದುವೆ ಕಾರ್ಯಕ್ರಮದಲ್ಲಿ ಡಿಜೆ ಹಾಡಿಗಾಗಿ ಮೂವರ ನಡುವೆ ಜಗಳ ನಡೆದಿದೆ.ಈ ಸಂದರ್ಭದಲ್ಲಿ ಅಡ್ಡ ಬಂದ ಮಹಿಳೆಗೆ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.

ಈ ಘಟನೆ ಶುಕ್ರವಾರ ಶನಿವಾರದ ಮಧ್ಯರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈಗ ಈ ಘಟನೆ ಸಂಬಂಧಿಸಿದ ಇಬ್ಬರು ವ್ಯಕ್ತಿಗಳನ್ನು ಚಂಡೀಗಢದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮದುವೆ ಸಂದರ್ಭದಲ್ಲಿ ಆ ಮಹಿಳೆಯ ಪತಿ ಸಜ್ಜನ್ ಹಾಗೂ ಇತರ ವ್ಯಕ್ತಿಗಳಾದ ಆಕಾಶ್ ಮತ್ತು ಸಂದೀಪ್ ನಡುವೆ ಮ್ಯೂಸಿಕ್ ವಿಚಾರವಾಗಿ ಜಗಳ ನಡೆದಿದೆ.ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ ತೆಗೆದು ಸಜ್ಜನ್ ಕಡೆ ಗುಂಡು ಹಾರಿಸಿದ್ದಾನೆ.ಆದರೆ ಈ ವೇಳೆ ಅಡ್ಡ ಬಂದ ಪತ್ನಿ ಸುನೀತಾಗೆ ಗುಂಡು ಬಿದ್ದ ಪರಿಣಾಮ ಮೃತಪಟ್ಟಿದ್ದಾಳೆ, ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದ್ದಾರೆ ಎನ್ನಲಾಗಿದೆ.

ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಗುಂಡು ಹಾರಿಸಿದ ವ್ಯಕ್ತಿ ಈ ಹಿಂದೆ ಕಳ್ಳತನದಂತಹ  ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ

Trending News