ಬಜೆಟ್ 2019: ಎಲ್ಲಾ ರಾಜ್ಯಗಳಿಗೂ ಸಮಾನ ವಿದ್ಯುತ್ ಪೂರೈಕೆಗಾಗಿ 'ಒನ್ ನೇಷನ್ ಒನ್ ಗ್ರಿಡ್' ಯೋಜನೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ಹಲವಾರು ಹೊಸ ಯೋಜನೆಗಳನ್ನು ಘೋಷಿಸಿದರು. 'ಒಂದು ರಾಷ್ಟ್ರ, ಒಂದು ಗ್ರಿಡ್' ಎಂಬ ಯೋಜನೆ ಕೂಡ ಒಂದು ಪ್ರಮುಖ ಘೋಷಣೆಯಾಗಿದೆ.

Last Updated : Jul 5, 2019, 01:22 PM IST
ಬಜೆಟ್ 2019: ಎಲ್ಲಾ ರಾಜ್ಯಗಳಿಗೂ ಸಮಾನ ವಿದ್ಯುತ್ ಪೂರೈಕೆಗಾಗಿ 'ಒನ್ ನೇಷನ್ ಒನ್ ಗ್ರಿಡ್' ಯೋಜನೆ  title=

ನವದೆಹಲಿ: ದೇಶದ ಎಲ್ಲಾ ರಾಜ್ಯಗಳಿಗೂ ಸಮಾನ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ 'ಒನ್ ನೇಷನ್ ಒನ್ ಗ್ರಿಡ್'(ಒಂದು ದೇಶ, ಒಂದು ಸ್ಥಾವರ) ಎಂಬ ನೂತನ ಯೋಜನೆಯನ್ನು ಪ್ರಸಕ್ತ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಈ ಯೋಜನೆಯಡಿ ದೇಶದ ಪ್ರತಿ ಮನೆಗೂ 24 ಗಂಟೆಗಳ ಸಮಾನ ದರದಲ್ಲಿ ವಿದ್ಯುತ್ ಒದಗಿಸಲಾಗುವುದು. ಇದಕ್ಕಾಗಿ ಯೋಜನೆಯ ಬ್ಲೂ ಪ್ರಿಂಟ್ ಸಿದ್ಧಪಡಿಸಲಾಗುತ್ತಿದೆ. ಅದೇ ಸಮಯದಲ್ಲಿ, ವಿದ್ಯುತ್ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. 

ಈವರೆಗೆ ವಿದ್ಯುತ್ ಪೂರೈಕೆ ಎಲ್ಲ ರಾಜ್ಯಗಳು ಸಮನಾಗಿ ಸಿಗುತ್ತಿರಲಿಲ್ಲ ಎಂಬ ಅಸಮಾಧಾನವಿತ್ತು. ಇದನ್ನು ಸರಿದೂಗಿಸುವ ಉದ್ದೇಶದಿಂದ ನೂತನ 'ಒನ್ ನೇಷನ್ ಒನ್ ಗ್ರಿಡ್'(ಒಂದು ದೇಶ, ಒಂದು ಸ್ಥಾವರ) ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯಡಿ ಆಯಾ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡಲಾತ್ತದೆ ಎಂದು ವಿತ್ತ ಸಚಿವರು ಘೋಷಿಸಿದರು.

ಇದಲ್ಲದೆ ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ. ನೀರು, ಗ್ಯಾಸ್ ರಸ್ತೆ ಸೇರಿದಂತೆ ಪ್ರಮುಖ ಮೂಲ ಸೌಕರ್ಯ ಎಲ್ಲರಿಗೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

Trending News