ಕೇಂದ್ರ ಬಜೆಟ್‌ನಲ್ಲಿ ಗಾಂಧಿಪೀಡಿಯ ಘೋಷಿಸಿದ ಸರ್ಕಾರ

2019 ರಲ್ಲಿ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಇರುವ ಹಿನ್ನಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ವಿಕಿಪೀಡಿಯ ಮಾದರಿಯಲ್ಲಿ ಗಾಂಧಿಪೀಡಿಯ ರಚನೆ ಮಾಡುವುದಾಗಿ ಘೋಷಿಸಿದ್ದಾರೆ.

Last Updated : Jul 5, 2019, 01:26 PM IST
 ಕೇಂದ್ರ ಬಜೆಟ್‌ನಲ್ಲಿ ಗಾಂಧಿಪೀಡಿಯ ಘೋಷಿಸಿದ ಸರ್ಕಾರ   title=

ನವದೆಹಲಿ: 2019 ರಲ್ಲಿ ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಇರುವ ಹಿನ್ನಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ವಿಕಿಪೀಡಿಯ ಮಾದರಿಯಲ್ಲಿ ಗಾಂಧಿಪೀಡಿಯ ರಚನೆ ಮಾಡುವುದಾಗಿ ಘೋಷಿಸಿದ್ದಾರೆ.

ವಿಕಿಪೀಡಿಯ ಉಚಿತ ಆನ್‌ಲೈನ್ ವಿಶ್ವಕೋಶವಾಗಿದ್ದು, ಇದು ಎಲ್ಲ ವಿಷಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತದೆ. ಈಗ ಇದೇ ಮಾದರಿಯಲ್ಲಿ  ಕೇಂದ್ರ ಸರ್ಕಾರ ಗಾಂಧಿ ಮೌಲ್ಯಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಗಾಂಧಿಪೀಡಿಯ ರಚನೆಗೆ ಮುಂದಾಗಿದೆ. ಈ ಆನ್ ಲೈನ್ ವಿಶ್ವಕೋಶದಲ್ಲಿ ಗಾಂಧಿ ಕುರಿತಾಗಿ ಎಲ್ಲ ಮಾಹಿತಿಗಳು ಲಭ್ಯವಾಗುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ವಿಶೇಷವೆಂದರೆ ಮುಖ್ಯ ಆರ್ಥಿಕ ಸಲಹೆಗಾರ ರಾಗಿರುವ ಕೃಷ್ಣಮೂರ್ತಿ ಸುಬ್ರಮಣ್ಯಂ ಕೂಡ ಆರ್ಥಿಕ ಸಮೀಕ್ಷೆ ಮಂಡಿಸುವ ವೇಳೆ ಮಹಾತ್ಮಾ ಗಾಂಧಿಯನ್ನು ಉಲ್ಲೇಖಿಸಿದ್ದರು. 

ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಈ ಹಿಂದೆ ರಕ್ಷಣಾ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್, ಈಗ ಹಣಕಾಸು ಸಚಿವೆಯಾಗಿ ಇದೇ ಮೊದಲ ಬಾರಿಗೆ ಬಜೆಟ್ ಮಂಡಿಸಿದರು. ಈಗ ಅವರ ಮುಂದೆ ಭಾರತದ ಆರ್ಥಿಕತೆಯನ್ನು ಮತ್ತೆ ಲಯಕ್ಕೆ ತರುವುದು ಅತಿ ದೊಡ್ಡ ಸವಾಲಾಗಿದೆ. ಭಾರತದ ಜಿಡಿಪಿ ಬೆಳವಣಿಗೆ ಮಾರ್ಚ್ ತ್ರೈಮಾಸಿಕದಲ್ಲಿ ಶೇ 5.8 ಕ್ಕೆ ಇಳಿದಿದೆ - ಇದು 20 ತ್ರೈಮಾಸಿಕಗಳಲ್ಲಿಯೇ ಕನಿಷ್ಠ ವೆನ್ನಲಾಗಿದೆ.

Trending News