ಜಮ್ಮು ಬಳಿ ಮತ್ತೆ ಗೋಚರಿಸಿದ ಡ್ರೋನ್..! ಭದ್ರತಾಪಡೆಗಳಿಂದ ಕಣ್ಗಾವಲು

ಸೇನಾ ಮೂಲಗಳ ಪ್ರಕಾರ ಕಾಲು ಚಕ್  ಪ್ರದೇಶದ   ಗೋಸ್ವಾಮಿ ಎನ್ ಕ್ಲೇವ್ ಬಳಿ ಒಂದು ಶಂಖಿತ ವಸ್ತು ಆಕಾಶದಲ್ಲಿ ಹಾರುತ್ತಿರುವುದು ಗೋಚರಿಸಿದೆ.  ಇದೇ ವೇಳೆ ಕುಂಜಾವನಿ ಬಳಿ ಇನ್ನೊಂದು ಡ್ರೋನ್ ಕಾಣಸಿಕ್ಕಿದೆ.

Written by - Ranjitha R K | Last Updated : Jun 30, 2021, 11:33 AM IST
  • ಜಮ್ಮು ಗಡಿ ಭಾಗದಲ್ಲಿ ಮತ್ತೆ ಡ್ರೋನ್ ಗೋಚರಿಸಿದೆ.
  • ಬುಧವಾರ ಬೆಳ್ಳಂಬೆಳಗ್ಗೆ ಕಾಲು ಚಕ್ ಮತ್ತು ಕುಂಜಾವನಿಯಲ್ಲಿ ಡ್ರೋನ್ ಹಾರಾಟ ಕಂಡು ಬಂದಿದೆ.
  • ಬುಧವಾರ ಬೆಳಗ್ಗೆ 5 ಗಂಟೆಯ ಸುಮಾರಿಗೆ ಈ ಡ್ರೋನ್ ಹಾರಾಟ ದಾಖಲಾಗಿದೆ.
ಜಮ್ಮು ಬಳಿ ಮತ್ತೆ ಗೋಚರಿಸಿದ ಡ್ರೋನ್..! ಭದ್ರತಾಪಡೆಗಳಿಂದ ಕಣ್ಗಾವಲು title=
ಜಮ್ಮು ಗಡಿ ಭಾಗದಲ್ಲಿ ಮತ್ತೆ ಡ್ರೋನ್ ಗೋಚರಿಸಿದೆ. (file photo)

ಜಮ್ಮು: ಜಮ್ಮು ಏರ್ ಫೋರ್ಸ್ (Jammu Airforce) ಕೇಂದ್ರದ ಮೇಲಿನ ಡ್ರೋನ್ ದಾಳಿ ಬೆನ್ನಲ್ಲೇ  ಗಡಿ ಭಾಗದಲ್ಲಿ ಮತ್ತೆ ಡ್ರೋನ್ ಗೋಚರಿಸಿದೆ.  ಬುಧವಾರ ಬೆಳ್ಳಂಬೆಳಗ್ಗೆ ಕಾಲು ಚಕ್ (Kaluchakarea) ಮತ್ತು ಕುಂಜಾವನಿಯಲ್ಲಿ ಡ್ರೋನ್ (drone) ಹಾರಾಟ ಕಂಡು ಬಂದಿದೆ.  ಬುಧವಾರ ಬೆಳಗ್ಗೆ 5 ಗಂಟೆಯ ಸುಮಾರಿಗೆ ಈ ಡ್ರೋನ್ ಹಾರಾಟ ದಾಖಲಾಗಿದೆ.

ಡ್ರೋನ್ ಹಾರಾಟದ ಎರಡನೇ ಘಟನೆ :
ಸೇನಾ ಮೂಲಗಳ ಪ್ರಕಾರ ಕಾಲು ಚಕ್  ಪ್ರದೇಶದ  (Kaluchakarea) ಗೋಸ್ವಾಮಿ ಎನ್ ಕ್ಲೇವ್ ಬಳಿ ಒಂದು ಶಂಖಿತ ವಸ್ತು ಆಕಾಶದಲ್ಲಿ ಹಾರುತ್ತಿರುವುದು ಗೋಚರಿಸಿದೆ.  ಇದೇ ವೇಳೆ ಕುಂಜಾವನಿ ಬಳಿ ಇನ್ನೊಂದು ಡ್ರೋನ್ (Drone) ಕಾಣಸಿಕ್ಕಿದೆ.  ಸುಮಾರು 800 ಮೀಟರ್ ಎತ್ತರದಲ್ಲಿ ಈ ಡ್ರೋನ್ ಹಾರಾಟ ನಡೆಸುತ್ತಿತ್ತು ಎಂದು ಹೇಳಲಾಗಿದೆ. 

ಇದನ್ನೂ ಓದಿ : From Income Tax rules to LPG cylinder price : ನಾಳೆಯಿಂದ ಬದಲಾಗಲಿವೆ ಆದಾಯ ತೆರಿಗೆ ನಿಯಮ ಮತ್ತು LPG ಸಿಲಿಂಡರ್ ಬೆಲೆ!

ಭಾನುವಾರ ರಾತ್ರಿ ಕಾಲೂಚಕ್ ಸೇನಾ ಕೇಂದ್ರದ ಬಳಿಯೂ ಎರಡು ಡ್ರೋನ್ ಗಳು ಹಾರಾಟ ನಡೆಸುತ್ತಿದ್ದು ಪತ್ತೆಯಾಗಿತ್ತು. ಜಮ್ಮು ಏರ್ ಬೇಸ್ (Jammu Airbase) ದಾಳಿಯ ಬಳಿಕ ಭದ್ರತಾ ಪಡೆಗಳು ಭಾರೀ ಕಣ್ಗಾವಲು ಇಟ್ಟಿದ್ದು, ಆಕಾಶದಲ್ಲಿ ಅನುಮಾನಸ್ಪದ ವಸ್ತುಗಳ ಹಾರಾಟದ ಬಗ್ಗೆ ನಿಗಾ ವಹಿಸಿವೆ.

ಮೋದಿ ನೇತೃತ್ವದಲ್ಲಿ ಸಭೆ :
ಡ್ರೋನ್ ಹಾವಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ  ಅಜಿತ್ ದೋವಲ್ ಜೊತೆ ಹೈ ಲೇವೆಲ್ ಸಭೆ (High level meeting) ನಡೆಸಿದರು. ಭಯೋತ್ಪಾದಕರಿಂದ ಡ್ರೋನ್ ಬಳಕೆ, ಡ್ರೋನ್ ಬಳಕೆಗೆ ಕಡಿವಾಣ, ಭದ್ರತಾ ಪಡೆಗಳಿಗೆ ಅತ್ಯಾಧುನಿಕ ಸಲಕರಣೆ, ಡ್ರೋನ್ ನಿಗ್ರಹ ನೀತಿ ಇತ್ಯಾದಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. 

ಇದನ್ನೂ ಓದಿ : PM Kisan: 6000 ವಾರ್ಷಿಕ ಕಂತುಗಳೊಂದಿಗೆ 3000 ರೂ.ಗಳ ಮಾಸಿಕ ಪಿಂಚಣಿಯನ್ನು ಈ ರೀತಿ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News