ಅಮರಾವತಿ: ಸದನದ ಕಲಾಪಕ್ಕೆ ಅಡ್ಡಿಮಾಡಿದ್ದಕಾಗಿ ನಾಲ್ವರು ತೆಲುಗು ದೇಶಂ ಪಕ್ಷದ ಶಾಸಕರನ್ನು ಆಂಧ್ರಪ್ರದೇಶ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ.
ಶಾಸಕರಾದ ಅಶೋಕ್ ಬೆಂಡಾಲಂ, ವಸುಪಲ್ಲಿ ಗಣೇಶ್ ಕುಮಾರ್, ವೇಲಗಪುಡಿ ರಾಮಕೃಷ್ಣ ಬಾಬು, ದೋಲಾ ಬಾಲ ವೀರಾಂಜನೇಯ ಸ್ವಾಮಿ ಅವರನ್ನು ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅಮಾನತುಗೊಳಿಸಿದ್ದಾರೆ.
ಶಾಸಕಾಂಗ ವ್ಯವಹಾರಗಳ ಸಚಿವ ಬಿ.ರಾಜೇಂದ್ರನಾಥ್ ಅವರು ಸದನದ ವ್ಯವಹಾರದಲ್ಲಿ ಅಡೆತಡೆಗಳನ್ನು ಸೃಷ್ಟಿಸಿದ್ದಕ್ಕಾಗಿ ಶಾಸಕರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದ ಬಳಿಕ ಸ್ಪೀಕರ್ ಈ ಕ್ರಮ ಕೈಗೊಂಡಿದ್ದಾರೆ.
ಬುಧವಾರ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಮಹಿಳೆಯರಿಗೆ ಪಿಂಚಣಿ ನೀಡುವ ಬಗ್ಗೆ ಸರ್ಕಾರದ ಪ್ರತಿಕ್ರಿಯೆಯನ್ನು ವಿರೋಧಿಸಿ ಸ್ಪೀಕರ್ ಕುರ್ಚಿಯನ್ನು ಸುತ್ತುವರೆದಿದ್ದರಿಂದ ಶಾಸಕಾಂಗ ವ್ಯವಹಾರಗಳ ಸಚಿವ ಬುಗ್ಗನಾ ರಾಜೇಂದ್ರನಾಥ್ ಅವರ ವಿರುದ್ಧ ಪ್ರಸ್ತಾಪ ಮಂಡಿಸಿದ ಬಳಿಕ ಬುಧವಾರ ಮೂವರು ಟಿಡಿಪಿ ಶಾಸಕರಾದ ಕೆ.ಅಚನ್ನೈಡು, ಗೊರಾಂಟ್ಲಾ ಬುಟ್ಚಯ್ಯ ಚೌದರಿ ಮತ್ತು ನಿಮ್ಮಲಾ ರಾಮಾನಾಯ್ಡು ಅವರನ್ನು ಅಮಾನತುಗೊಳಿಸಲಾಗಿತ್ತು.