President of India oath : ರಾಷ್ಟ್ರಪತಿಗಳು ಜು.25 ರಂದೆ ಏಕೆ 'ಪ್ರಮಾಣ ವಚನ' ಸ್ವೀಕರಿಸುತ್ತಾರೆ? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ!

ಏಕೆಂದರೆ 1977 ರಿಂದ ಎಲ್ಲಾ ರಾಷ್ಟ್ರಪತಿಗಳು ತಮ್ಮ 5 ವರ್ಷಗಳ ಪೂರ್ಣ ಅವಧಿಯನ್ನು ಪೂರೈಸಿದ್ದಾರೆ.

Written by - Channabasava A Kashinakunti | Last Updated : Jul 25, 2022, 01:57 PM IST
  • ಇಂದು ದ್ರೌಪದಿ ಮುರ್ಮು ಅವರು ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ
  • ಅಂದಿನಿಂದ ಎಲ್ಲಾ ರಾಷ್ಟ್ರಪತಿಗಳು ಜುಲೈ 25 ರಂದು ಪ್ರಮಾಣ ವಚನ
  • ಎಲ್ಲಾ ರಾಷ್ಟ್ರಪತಿಗಳು ತಮ್ಮ 5 ವರ್ಷಗಳ ಪೂರ್ಣ ಅವಧಿಯನ್ನು ಪೂರೈಸಿದ್ದಾರೆ
President of India oath : ರಾಷ್ಟ್ರಪತಿಗಳು ಜು.25 ರಂದೆ ಏಕೆ 'ಪ್ರಮಾಣ ವಚನ' ಸ್ವೀಕರಿಸುತ್ತಾರೆ? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ! title=

ನವದೆಹಲಿ : ಇಂದು ದ್ರೌಪದಿ ಮುರ್ಮು ಅವರು ಭಾರತದ ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ ಸಮಾರಂಭ ಏರ್ಪಡಿಸಲಾಗಿತ್ತು. ಇಂದು ದಿನಾಂಕ ಜುಲೈ 25 , ಈ ಹಿಂದೆ ಮಾಜಿ ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್, ಪ್ರಣಬ್ ಮುಖರ್ಜಿ, ಪ್ರತಿಭಾ ಪಾಟೀಲ್, ಎಪಿಜೆ ಅಬ್ದುಲ್ ಕಲಾಂ ಇವರೆಲ್ಲರೂ ಕೂಡ ಇದೆ ಜುಲೈ 25 ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೆ ದಿನ ಯಾಕೆ ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕರಿಸುತ್ತಾರೆ? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಮಾಹಿತಿ.

1977 ರ ಜುಲೈ 25 ರಂದು ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಪ್ರಾರಂಭವಾಗಿದೆ. ಅಂದು ಭಾರತದ ಆರನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಂದಿನಿಂದ ಎಲ್ಲಾ ರಾಷ್ಟ್ರಪತಿಗಳು ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಿದರು. ಏಕೆಂದರೆ 1977 ರಿಂದ ಎಲ್ಲಾ ರಾಷ್ಟ್ರಪತಿಗಳು ತಮ್ಮ 5 ವರ್ಷಗಳ ಪೂರ್ಣ ಅವಧಿಯನ್ನು ಪೂರೈಸಿದ್ದಾರೆ. ಅದರಂತೆ ಜುಲೈ 24ಕ್ಕೆ ಎಲ್ಲ ರಾಷ್ಟ್ರಪತಿಗಳ ಅವಧಿ ಮುಕ್ತಾಯವಾಗುತ್ತದೆ, ಈ ವಾತಾವರಣದಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ನೂತನ ರಾಷ್ಟ್ರಪತಿಗಳಾಗಿ ಆಯ್ಕೆಯಾದವರು ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸುವ ರೂಡಿಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ : ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು

ದೇಶದ ಮೊದಲ ರಾಷ್ಟ್ರಪತಿಯಾಗಿ ಡಾ. ರಾಜೇಂದ್ರ ಪ್ರಸಾದ್ ಕಾರ್ಯನಿರ್ವಹಿಸಿದ್ದಾರೆ. ಅವರು 26 ಜನವರಿ 1950 ರಂದು ಪ್ರಮಾಣವಚನ ಸ್ವೀಕರಿಸಿ, ಮೇ 13, 1962 ರವರೆಗೆ ಅಧಿಕಾರದಲ್ಲಿದ್ದರು. ನಂತರ ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರು ತಮ್ಮ ಪೂರ್ಣಾವಧಿಯವರೆಗೆ ಅಧಿಕಾರದಲ್ಲಿದ್ದರು. ಆದರೆ ನಂತರ ಫಕ್ರುದ್ದೀನ್ ಅಲಿ ಅಹ್ಮದ್ ಮತ್ತು ಜಾಕಿರ್ ಹುಸೇನ್ ರಾಷ್ಟ್ರಪತಿಗಳಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ವಿವಿ ಗಿರಿ ಅವಧಿ ಮುಗಿದಿತ್ತು. ಬಿ.ಡಿ ಜತ್ತಿ ನಂತರ ಜುಲೈ 25, 1977 ರವರೆಗೆ ಹಂಗಾಮಿ ರಾಷ್ಟ್ರಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಎಲ್ಲಾ ರಾಷ್ಟ್ರಪತಿಗಳು ತಮ್ಮ ಐದು ವರ್ಷಗಳ ಅಂದರೆ ಜುಲೈ 24 ವರೆಗೆ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಹೀಗಾಗಿ, ಮುಂದೆ ಆಯ್ಕೆಯಾಗುವ ನೂತನ ರಾಷ್ಟ್ರಪತಿಗಳು ಜುಲೈ 25 ರಂದೆ ಪ್ರಮಾಣ ವಚನ ಸ್ವೀಕರಿಸಬೇಕು ಎಂಬ ನಿಯಮ ಜಾರಿಯಲ್ಲಿದೆ. ಹೀಗಾಗಿ ಈ ಸಂಪ್ರದಾಯವು ಕಳೆದ ನಾಲ್ಕು ದಶಕಗಳಿಂದ ರೂಡಿಸಿಕೊಂಡು ಬರಲಾಗಿದೆ. 

ಇದನ್ನೂ ಓದಿ : Farewell Speech : ರಾಜಕೀಯ ಪಕ್ಷಗಳು ಪಕ್ಷ ಮೀರಿ 'ರಾಷ್ಟ್ರ ಮೊದಲು' ಎನ್ನಬೇಕು : ನಿರ್ಗಮಿತ ರಾಷ್ಟ್ರಪತಿ 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News