ಎಂಟನೇ ಮಹಡಿಯಿಂದ ಹಾರಿ ಪತಿ ಜೊತೆ ಪತ್ನಿಯರ ಆತ್ಮಹತ್ಯೆ!

ಇಂದಿರಾಪುರದ ವೈಭವವ್ಖಂಡ್‌ನ ಅಪಾರ್ಟ್‌ಮೆಂಟ್‌ನ ಎಂಟನೇ ಮಹಡಿಯಿಂದ ಮೂರು ಜನರು ಹಾರಿದ್ದಾರೆ.  

Updated: Dec 3, 2019 , 08:51 AM IST
ಎಂಟನೇ ಮಹಡಿಯಿಂದ ಹಾರಿ ಪತಿ ಜೊತೆ ಪತ್ನಿಯರ ಆತ್ಮಹತ್ಯೆ!

ಗಾಜಿಯಾಬಾದ್: ಗಾಜಿಯಾಬಾದ್‌ನ ಇಂದಿರಾಪುರಂ(Indirapuram) ಪ್ರದೇಶದಿಂದ ಬೆಳ್ಳಂಬೆಳಗ್ಗೆ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇಂದಿರಾಪುರದ ವೈಭವವ್ಖಂಡ್‌ನ ಅಪಾರ್ಟ್‌ಮೆಂಟ್‌ನ ಎಂಟನೇ ಮಹಡಿಯಿಂದ ಮೂವರು ಮಂಗಳವಾರ (ಡಿಸೆಂಬರ್ 3) ಜಿಗಿದಿದ್ದಾರೆ.  ಹಾಗೆ ಹಾರಿದವರಲ್ಲಿ ಗಂಡ ಮತ್ತು ಅವನ ಇಬ್ಬರು ಹೆಂಡತಿಯರು ಸೇರಿದ್ದಾರೆ. ಈ ಪೈಕಿ ಪತಿ ಮತ್ತು ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೊಬ್ಬ ಹೆಂಡತಿಯ ಸ್ಥಿತಿ ಗಂಭೀರವಾಗಿದೆ. ಮತ್ತೊಂದೆಡೆ, ಫ್ಲ್ಯಾಟ್‌ನಲ್ಲಿ ಇಬ್ಬರು ಮಕ್ಕಳ ಶವಗಳೂ ಪತ್ತೆಯಾಗಿವೆ.

ಪೊಲೀಸರ ಪ್ರಕಾರ, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣವೆಂದು ತೋರುತ್ತದೆ. ಮಾಹಿತಿಯ ಪ್ರಕಾರ, ಅವರು ಆತ್ಮಹತ್ಯೆಗೆ ಶರಣಾಗುವ ಮೊದಲು ತಮ್ಮ ಇಬ್ಬರು ಮಲಗಿದ್ದ ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದಾರೆ.

ಆಂತರಿಕ ಭಿನ್ನಾಭಿಪ್ರಾಯ ಮತ್ತು ಹಣದ ಕೊರತೆಯಿಂದಾಗಿ ಈ ಕುಟುಂಬದವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ಪ್ರಕಾರ, ಮೂರು ಜನರು ಎಂಟನೇ ಮಹಡಿಯಿಂದ ಜಿಗಿದಿದ್ದಾರೆ. ಇದರಲ್ಲಿ ಒಬ್ಬ ಪುರುಷ ಮತ್ತು ಅವನ ಇಬ್ಬರು ಹೆಂಡತಿಯರು ಸೇರಿದ್ದಾರೆ. ಮನೆಯಲ್ಲಿ ಇಬ್ಬರು ಮಕ್ಕಳ ಶವಗಳೂ ಪತ್ತೆಯಾಗಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಇಬ್ಬರೂ ಸುಮಾರು 10 ಮತ್ತು 11 ವರ್ಷದ ಮಕ್ಕಳು ಎಂದು ತಿಳಿಸಿರುವ ಪೊಲೀಸರು, ಮನೆಯ ಗೋಡೆಯ ಮೇಲೆ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ, ಇದರಲ್ಲಿ ಆರ್ಥಿಕ ಬಿಕ್ಕಟ್ಟಿನ ವಿಷಯವನ್ನು ಬರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.