ಪ್ರೀತಿಸಿ ಕೈಕೊಡಲು ಯತ್ನಿಸಿದವನ ಮೇಲೆ ಯುವತಿಯಿಂದಲೇ ಆಸಿಡ್ ದಾಳಿ! ಮುಂದೆ...

ಪ್ರೀತಿಸಿ ಕೈಕೊಡಲು ಯತ್ನಿಸಿದ ಯುವಕನ ಮುಖಕ್ಕೆ ಯುವತಿಯೇ ಆಸಿಡ್ ದಾಳಿ ನಡೆಸಿದ ಘಟನೆ ನವದೆಹಲಿಯ ವಿಕಾಸಪುರಿಯಲ್ಲಿ ನಡೆದಿದೆ.  

Last Updated : Jun 17, 2019, 03:19 PM IST
ಪ್ರೀತಿಸಿ ಕೈಕೊಡಲು ಯತ್ನಿಸಿದವನ ಮೇಲೆ ಯುವತಿಯಿಂದಲೇ ಆಸಿಡ್ ದಾಳಿ! ಮುಂದೆ... title=

ನವದೆಹಲಿ: ಪ್ರೀತಿಸಿ ಕೈಕೊಡಲು ಯತ್ನಿಸಿದ ಯುವಕನ ಮುಖಕ್ಕೆ ಯುವತಿಯೇ ಆಸಿಡ್ ದಾಳಿ ನಡೆಸಿದ ಘಟನೆ ನವದೆಹಲಿಯ ವಿಕಾಸಪುರಿಯಲ್ಲಿ ನಡೆದಿದೆ.

"ಕಳೆದ ಮೂರು ವರ್ಷಗಳಿಂದ ಪ್ರೀತಿಸಿ ದೈಹಿಕ ಸಂಬಂಧ ಹೊಂದಿದ್ದರು. ಆದರೆ ಆ ಯುವಕ ತಾನು ಮಾಡುವೆ ಆಗುವುದಿಲ್ಲ. ನನ್ನನ್ನು ಬಿಟ್ಟು ಬಿಡು ಎಂದು ಹೇಳಿದ್ದಾನೆ. ಆದರೆ ಇದರಿಂದ ರೊಚ್ಚಿಗೆದ್ದ ಯುವತಿ ಆತನ ಮುಖಕ್ಕೆ ಆಸಿಡ್ ದಾಳಿ ನಡೆಸಿದ್ದಾಳೆ" ಎಂದು ಉಪ ಪೊಲೀಸ್ ಆಯುಕ್ತರಾದ ಮೋನಿಕಾ ಭಾರದ್ವಾಜ್ ಹೇಳಿದ್ದಾರೆ.

"ಜೂನ್ 11ರಂದು ಇಬ್ಬರೂ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಯಾರೋ ಆಸಿಡ್ ದಾಳಿ ನಡೆಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಾಳಿಯಲ್ಲಿ ಸ್ಕೂಟಿ ಓಡಿಸುತ್ತಿದ್ದ ಯುವನ ಮುಖ ಸಂಪೂರ್ಣವಾಗಿ ಸುಟ್ಟಿದ್ದು, ಯುವತಿಯ ಕೈ ಮೇಲೆ ಸ್ವಲ್ಪ ಗಾಯಗಳಾಗಿದ್ದವು. ಇದರಿಂದ ಅನುಮಾನಗೊಂಡು ತನಿಖೆ ನಡೆಸಿದಾಗ, ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಯಾರೂ ಈ ಜೋಡಿ ಮೇಲೆ ಆಸಿಡ್ ಎಸೆದು ಹೋಗಿರುವ ದೃಶ್ಯ ಇರಲಿಲ್ಲ. ಬಳಿಕ ಯುವಕನನ್ನು ವಿಚಾರಣೆ ನಡೆಸಿದಾಗ ಯುವತಿಯೇ ಆತನ ಮೇಲೆ ಆಸಿಡ್ ಎರಚಿದ್ದಾಗಿ ಬಾಯ್ಬಿಟ್ಟಿದ್ದಾನೆ" ಎಂದು ಪೊಲೀಸರು ತಿಳಿಸಿದ್ದಾರೆ.

"ನಾವಿಬ್ಬರೂ ಲಾಂಗ್ ಡ್ರೈವ್ ಹೋಗಲು ನಿರ್ಧರಿಸಿದೇವೆ. ಕೆಲ ದೂರ ಹೋದ ಬಳಿಕ ಆಕೆ ನನ್ನ ಹೆಲ್ಮೆಟ್ ತೆಗೆಯಲು ಹೇಳಿದಳು. ತೆಗೆದ ಕೂಡಲೇ ಯಾವುದೋ ರಾಸಾಯನಿಕವನ್ನು ಮುಖಕ್ಕೆ ಎರಚಿದಳು. ಇದನ್ನು ನೋಡಿದ ದಾರಿಹೋಕರು ಪೊಲೀಸರಿಗೆ ಕರೆ ಮಾಡಿದರು. ಆಗ ಪೋಲೀಸರ ದಾರಿ ತಪ್ಪಿಸಲು ನಾವೇ ಸುಳ್ಳು ದೂರು ನೀಡಿದೆವು ಎಂಬುದಾಗಿ ಯುವಕ ಒಪ್ಪಿಕೊಂಡಿದ್ದಾನೆ" ಎಂದು ಭಾರದ್ವಾಜ್ ತಿಳಿಸಿದ್ದಾರೆ.

Trending News