Goat Dance Video: ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ ಆಡುಗಳ ವಿಡಿಯೋ ಆಯ್ತು ವೈರಲ್

ಆಡುಗಳು ಸಹ ಅದ್ಭುತವಾಗಿ ನೃತ್ಯ ಮಾಡಬಲ್ಲವು ಎಂದು ನಿಮಗೆ ತಿಳಿದಿದೆಯೇ? ಈ ವಿಡಿಯೋ ನೋಡಿ ಜನರು ಆಘಾತಕ್ಕೊಳಗಾಗಿದ್ದಾರೆ. 

Written by - Yashaswini V | Last Updated : Mar 4, 2021, 07:10 PM IST
  • ಆಡುಗಳು ನಮ್ಮಂತೆಯೇ ಸಂಗೀತವನ್ನೂ ಆನಂದಿಸುತ್ತವೆ
  • ಅಷ್ಟೇ ಅಲ್ಲ ಅವು ಡಾನ್ಸ್ ಕೂಡ ಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ?
  • ಈ ಮಾತನ್ನು ನಂಬಲು ಸಾಧ್ಯವಾಗದಿದ್ದರೆ ಈ ವೈರಲ್ ವೀಡಿಯೊವನ್ನು ಒಮ್ಮೆ ನೋಡಿ
Goat Dance Video: ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ ಆಡುಗಳ ವಿಡಿಯೋ ಆಯ್ತು ವೈರಲ್ title=
Goat Dance Video

Bakri Dance Video: ಆಡುಗಳು ನಮ್ಮಂತೆಯೇ ಸಂಗೀತವನ್ನೂ ಆನಂದಿಸುತ್ತವೆ. ಅಷ್ಟೇ ಅಲ್ಲ ಅವು ಡಾನ್ಸ್ ಕೂಡ ಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ? ಈ ಮಾತನ್ನು ನಂಬಲು ಸಾಧ್ಯವಾಗದಿದ್ದರೆ ಈ ವೈರಲ್ ವೀಡಿಯೊವನ್ನು ಒಮ್ಮೆ ನೋಡಿ, ಖಂಡಿತವಾಗಿಯೂ ನೀವು ಆನಂದಿಸುವಿರಿ.

ವಾಸ್ತವವಾಗಿ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋವೊಂದು ವೈರಲ್ (Viral Video) ಆಗಿದ್ದು ಆಡುಗಳು (Goats) ಸಹ ಅದ್ಭುತವಾಗಿ ನೃತ್ಯ ಮಾಡಬಲ್ಲವು ಎಂಬುದಕ್ಕೆ ನಿದರ್ಶನವಾಗಿದೆ. ಈ ವಿಡಿಯೋ ನೋಡಿ ಹಲವರು  ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.  ಹೌದು, ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಆಡುಗಳ ಹಿಂಡು ಮಾಲೀಕರನ್ನು ಹಿಂಬಾಲಿಸುತ್ತಿದೆ. ಜೊತೆಗೆ ಇಂಗ್ಲಿಷ್ ಹಾಡು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದು ಆಡುಗಳು ನೃತ್ಯ ಮಾಡುತ್ತಾ ಮುಂದೆ ಸಾಗುತ್ತಿವೆ.

ತಮಾಷೆಯ ಸಂಗತಿಯೆಂದರೆ,  ಈ ವಿಡಿಯೋದಲ್ಲಿ ಆಡುಗಳು ಹಾಡನ್ನು ಕೇಳುತ್ತಾ ಅದಕ್ಕೆ ತಕ್ಕಂತೆ ತಲೆ ಮತ್ತು ದೇಹವನ್ನು ಬಳುಕಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ - Moving House : ಇದಕ್ಕಿದ್ದಂತೆ ಚಲಿಸಲಾರಂಭಿಸಿತು ಎರಡು ಅಂತಸ್ತಿನ ಹಳೆಯ ಬಂಗಲೆ.! ಏನದರ ರಹಸ್ಯ.!?

ವೀಡಿಯೊವನ್ನು(Viral Video) ಡಿ ಅನಿಮಲ್ಸ್ ಖಾತೆಯೊಂದಿಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಬಳಿಕ ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಇದರ ನಂತರ, ಇದನ್ನು ಅನೇಕರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ - Viral Video: ವಕೀಲರ ಜಾಗದಲ್ಲಿ ಖಟ್ಲೆ ವಾದ ಮಂಡಿಸಲು ಬಂತು ಮಾರ್ಜಾಲ!

ಜನರು ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದು ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News