Gold Rates Today: ಚಿನ್ನ ಪ್ರಿಯರಿಗೆ ನೆಮ್ಮದಿಯ ಸುದ್ದಿ, ಇಳಿಕೆಯತ್ತ ಮುಖ ಮಾಡಿದ ಚಿನ್ನ-ಬೆಳ್ಳಿ ದರ

ಜುಲೈ 6 ರಿಂದ ಸರ್ಕಾರ ಸಾವೆರೆನ್ ಚಿನ್ನದ ಬಾಂಡ್ ಅಡಿಯಲ್ಲಿ ಮಾರಾಟವನ್ನು ಆರಂಭಿಸಿದೆ. ಈ ವರ್ಷ ಬಾಂಡ್ ಯೋಜನೆಯ ಮಾರಾಟದ ನಾಲ್ಕನೇ ಸರಣಿಯಾಗಿದೆ. ಅಗ್ಗದ ದರದಲ್ಲಿ ಈ ಬಾಂಡ್ ನಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಕೂಡ ಸಿಗಲಿದೆ.

Last Updated : Jul 8, 2020, 03:05 PM IST
Gold Rates Today: ಚಿನ್ನ ಪ್ರಿಯರಿಗೆ ನೆಮ್ಮದಿಯ ಸುದ್ದಿ, ಇಳಿಕೆಯತ್ತ ಮುಖ ಮಾಡಿದ ಚಿನ್ನ-ಬೆಳ್ಳಿ ದರ title=

ನವದೆಹಲಿ: ಕಳೆದ ದೀರ್ಘ ಕಾಲದಿಂದ ಚಿನ್ನ-ಬೆಳ್ಳಿ ಬೆಳೆಗಳು ಗಗನಮುಖಿಯಾಗಿವೆ. ಆದರೆ, ಬುಧವಾರ ಆಕಸ್ಮಿಕವಾಗಿ ಚಿನ್ನ-ಬೆಳ್ಳಿ ಬೆಳೆಗಳು ಇಳಿಕೆಯತ್ತ ಮುಖಮಾಡಿವೆ. ಬೆಳಗ್ಗೆ ಸುಮಾರು 9.30 ರ ಸುಮಾರಿಗೆ ಚಿನ್ನದ ಬೆಲೆ ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ (MCX)ನಲ್ಲಿ ಪ್ರತಿ 10 ಗ್ರಾಂಗೆ 148 ರೂ. ಕುಸಿತ ದಾಖಲಿಸುವ ಮೂಲಕ ರೂ.48652ಕ್ಕೆ ತನ್ನ ವಹಿವಾಟು ನಡೆಸುತ್ತಿದೆ.

ಇದಕ್ಕೂ ಮೊದಲು ರೂ.50 ಸಾವಿರ ಮಟ್ಟಕ್ಕೆ ತಲುಪಿದ್ದ ಚಿನ್ನದ ಬೆಲೆ ಇಂದು ಇಳಿಕೆಯತ್ತ ಮುಖಮಾಡಿದೆ. ಇಂದು ಬೆಳಗ್ಗೆ 9.30ರ ಬಳಿಕ ವಹಿವಾಟು ಆರಂಭವಾಗುತ್ತಿದ್ದಂತೆ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 48,704 ರಷ್ಟಿತ್ತು. ಇದೆ ವೇಳೆ ನಮ್ಮ ಅಂಗ ಸಂಸ್ಥೆಯಾಗಿರುವ ಝೀ ಬಿಸಿನೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಚಿನ್ನದ ಬೆಲೆ ಕೂಡ ಪ್ರತಿ ಕೆ.ಜಿ ಗೆ 172 ರೂ. ಗಳಷ್ಟು ಕುಸಿತ ಕಂಡು 50030.00ರೂ.ನಲ್ಲಿ ತನ್ನ ವಹಿವಾಟು ಮುಂದುವರೆಸಿದೆ.

ಡಿಸ್ಕೌಂಟ್ ಪಡೆದು ಚಿನ್ನದಲ್ಲಿ ಹೂಡಿಕೆ ಮಾಡಿ 
ಚಿನ್ನದಲ್ಲಿ ಹೂಡಿಕೆ ಮಾಡುವವರಿಗೆ, 2020 ರ ಜುಲೈ 10 ರವರೆಗೆ ಅಗ್ಗದ ದರದಲ್ಲಿ ಶಾಪಿಂಗ್ ಮಾಡಲು ಅವಕಾಶವಿದೆ. ಚಿನ್ನದಲ್ಲಿ ಹೂಡಿಕೆ ಮಾಡುವವರಿಗೆ, 2020 ರ ಜುಲೈ 10 ರವರೆಗೆ ಅಗ್ಗದ ದರದಲ್ಲಿ ಶಾಪಿಂಗ್ ಮಾಡಲು ಅವಕಾಶವಿದೆ. ಜುಲೈ 6 ರಿಂದ ಸರ್ಕಾರ ಸಾರ್ವಭೌಮ ಚಿನ್ನದ ಬಾಂಡ್ ಅಡಿಯಲ್ಲಿ ಮಾರಾಟವನ್ನು ತೆರೆಯಿತು. ಈ ವರ್ಷ ಬಾಂಡ್ ಯೋಜನೆಯ ಮಾರಾಟದ ನಾಲ್ಕನೇ ಸರಣಿಯಾಗಿದೆ. ಅಗ್ಗವಾಗಿ ಅದರಲ್ಲಿ ಹೂಡಿಕೆ ಮಾಡುವುದರಿಂದ, ನಿಮಗೆ ಆದಾಯವೂ ಪಡೆಯಬಹುದಾಗಿದೆ.

ಆನ್ಲೈನ್ ನಲ್ಲಿ ಚಿನ್ನ ಖರೀದಿಸಿದರೆ ಸಿಗುತ್ತದೆ ವಿನಾಯ್ತಿ 
ಈ ಸ್ಕೀಮ್ ಅಡಿಯಲ್ಲಿ ನೀವು ಆನ್ಲೈನ್ ನಲ್ಲಿ ಚಿನ್ನವನ್ನು ಖರೀದಿಸಿದರೆ, ನಿಮಗೆ ಚಿನ್ನದ ಬೆಲೆಯಲ್ಲಿ ವಿನಾಯ್ತಿ ಕೂಡ ಸಿಗುತ್ತದೆ. ಆನ್ಲೈನ್ ನಲ್ಲಿ ಚಿನ್ನ ಖರೀದಿ ಮಾಡಲು ಬಯಸುವ ಮತ್ತು ಆನ್ಲೈನ್ ನಲ್ಲಿ ಪೇಮೆಂಟ್ ಮಾಡಲು ಬಯಸುವ ಗ್ರಾಹಕರಿಗೆ ಪ್ರತಿ ಗ್ರಾಂ ರೂ.50 ವಿನಾಯ್ತಿ ಸಿಗುತ್ತದೆ. ಸಾವೆರಿನ್ ಗೋಲ್ಡ್ ಬಾಂಡ್ ಖರೀದಿಯನ್ನು ನೀವು ಯಾವುದೇ ಕಮರ್ಷಿಯಲ್ ಬ್ಯಾಂಕ್, ಭಾರತೀಯ ಸ್ಟಾಕ್ ಹೋಲ್ಡಿಂಗ್ ನಿಗಮ (SHCIL) ಹಾಗೂ ಕೆಲ ಆಯ್ದ ಪೋಸ್ಟ್ ಆಫೀಸ್ ಹಾಗೂ ಮಾನ್ಯತೆ ಪಡೆದ ಷೇರು ಮಾರುಕಟ್ಟೆಗಳಾಗಿರುವ NSC ಹಾಗೂ BSE ನಲ್ಲಿ ಖರೀದಿಸಬಹುದು.

ಮುಂಬರುವ ದಿನಗಳಲ್ಲಿ ಚಿನ್ನ ವ್ಯಾಪಾರ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ
ಈ ಕುರಿತು ಹೇಳಿಕೆ ನೀಡಿರುವ India Bullion and Jewellers Association (IBJA)ನ ರಾಷ್ಟ್ರೀಯ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ, ಕೊರೊನಾ ಮಹಾಮಾರಿಯ ಕಾರಣ ಷೇರು ಮಾರುಕಟ್ಟೆಯಲ್ಲಿ ನಿರಂತರ ಕುಸಿತ ಕಂಡು ಬರುತ್ತಿರುವ ಕಾರಣ ಹೂಡಿಕೆದಾರರು ಗೋಲ್ಡ್ ಬಾಂಡ್ ಗಳಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಲು ಮುಂದಾಗಿರುವ ಕಾರಣ ಚಿನ್ನದ ಬೆಲೆ ನಿರಂತರ ಏರಿಕೆಯಾಗುತ್ತಿದೆ ಮತ್ತು ದೊಡ್ಡ ಹೂಡಿಕೆದಾರರು ಚಿನ್ನದಲ್ಲಿ ತಮ್ಮ ಹಣ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಕೊರೊನಾ ವೈರಸ್ ಮಹಾಮಾರಿಯ ಕಾರಣ ಇಡೀ ವಿಶ್ವಾದ್ಯಂತ ಆರ್ಥಿಕತೆ ಮಂದಗತಿಯಲ್ಲಿ ಸಾಗಿದೆ ಆಏಈಆಆ ಸೇರಿದಂತೆ ವಿಶ್ವದ ಹಲವಾರು ದೇಶಗಳು ಮಾರುಕಟ್ಟೆಯಲ್ಲಿ ಹಣದ ಕೊರತೆ ಎದುರಾಗಬಾರದು ಎಂಬ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಕರೆನ್ಸಿ ಮುದ್ರಿಸುತ್ತಿವೆ. ಇದರ ಪ್ರಭಾವ ಕೂಡ ಚಿನ್ನದ ಬೆಲೆಯ ಮೇಲೆ ಕಂಡುಬರುತ್ತಿದೆ.
 

Trending News