ಇನ್ಮುಂದೆ ವಿಮಾನದಲ್ಲಿ ಪ್ರಯಾಣಿಸುವಾಗ ನಿಮಗೆ ಬೋರ್ ಆಗುತ್ತೆ ಅನ್ನೋ ಮಾತೇ ಇಲ್ಲ. ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿ ಏರ್ಟೆಲ್ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯ ಘೋಷಣೆ ಮಾಡಿದೆ. ಕಂಪನಿಯು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನಗಳಲ್ಲಿ ತನ್ನ ಬಳಕೆದಾರರಿಗೆ ಹೈಸ್ಪೀಡ್ ಇಂಟರ್ನೆಟ್ ಡೇಟಾ ಸಂಪರ್ಕವನ್ನು ನೀಡಲಿದೆ.
ಇದಕ್ಕಾಗಿ ಏರ್ಟೆಲ್ ಜಾಗತಿಕ ಸಮೂಹವಾದ 'ಸೀಮ್ಲೆಸ್ ಅಲಯನ್ಸ್' ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಏರ್ಟೆಲ್ ಗ್ರಾಹಕರಿಗೆ ವಿಮಾನದಲ್ಲಿ ಅನಿಯಮಿತ ಅತಿ ವೇಗದ ಇಂಟರ್ನೆಟ್ ಸೌಲಭ್ಯ ದೊರೆಯಲಿದೆ. ಕಂಪನಿ ಹೇಳಿಕೆ ಪ್ರಕಾರ, ಜಾಗತಿಕ ಸಮೂಹವಾದ 'ಸೀಮ್ಲೆಸ್ ಅಲಯನ್ಸ್'ನಲ್ಲಿ Vnveb, Airbus, Delta mattu Sprint ಕಂಪನಿಗಳು ಸೇರಿವೆ. ಇದರಿಂದಾಗಿ ವಿಮಾನಯಾನದಲ್ಲಿಯೂ ಅತಿವೇಗದ ನಾನ್'ಸ್ಟಾಪ್ ಇಂಟರ್ನೆಟ್ ಒದಗಿಸಲು ಉಪಗ್ರಹ ತಂತ್ರಜ್ಞಾನವನ್ನು ಬಳಸಲಿವೆ.
'ಸೀಮ್ಲೆಸ್ ಅಲಯನ್ಸ್' ಜೊತೆ ಸೇರಿದ ಏರ್ಟೆಲ್
"ಏರ್ಟೆಲ್ 'ಸೀಮ್ಲೆಸ್ ಅಲಯನ್ಸ್' ಸೇರಿರುವ ಟೆಲಿಕಾಂ ಕಂಪನಿಗಳು, ವಿಮಾನದ ಕ್ಯಾಬಿನ್ ವರೆಗೆ ಇಂಟರ್ನೆಟ್ ಒದಗಿಸಲು ಸಶಕ್ತವಾಗಿವೆ. ಇದರಿಂದಾಗಿ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಯುಗವೇ ಆರಂಭವಾಗಲಿದೆ" ಎಂದು ಏರ್ಟೆಲ್ ಹೇಳಿದೆ. ಈ ಜಾಗತಿಕ ಕಾರ್ಯಚರಣೆಯನ್ನು ಏರ್ಟೆಲ್ ಬಾರ್ಸಿಲೋನಾದಲ್ಲಿ ಘೋಷಿಸಿದೆ.
ವಿಮಾನಯಾನ ಸಂಸ್ಥೆಗಳೊಂದಿಗೆ ಹೊಸ ಪಾಲುದಾರಿಕೆ
ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2018ರ ಸಂದರ್ಭದಲ್ಲಿ ಏರ್ಟೆಲ್ ಈ ವಿಷಯವನ್ನು ಘೋಷಿಸಿದೆ. ಸೀಮ್ಲೆಸ್ ಅಲೈಯನ್ಸ್'ನ ಐದು ಸ್ಥಾಪಿತ ಸದಸ್ಯರ ಜೊತೆಗೆ, ಇನ್ನಷ್ಟು ಸದಸ್ಯ ಕಂಪನಿಗಳು ಸೇರಲಿವೆ. ಇವೆಲ್ಲವೂ ಒಂದಾಗಿ ತಡೆರಹಿತ ಡಾಟಾ ಒದಗಿಸಲು ಮೂಲಸೌಕರ್ಯ ಸುಧಾರಣೆ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕಾರ್ಯಪ್ರವೃತ್ತವಾಗಲಿವೆ.
ಇದರಿಂದ ಯಾರಿಗೆ ಹೆಚ್ಚು ಪ್ರಯೋಜನ?
Airtel ದೇಶದಲ್ಲೇ ಅತಿದೊಡ್ಡ ಮತ್ತು ವಿಶ್ವದ ಮೂರನೇ ಅತಿದೊಡ್ಡ ಮೊಬೈಲ್ ಆಪರೇಟರ್ ಕಂಪನಿಯಾಗಿದೆ. ಹಾಗಾಗಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ಅನೇಕ ದೇಶಗಳಲ್ಲಿ ಏರ್ಟೆಲ್ ಈ ಸೌಲಭ್ಯ ನೀಡಲಿದೆ. ಈ ಸೌಲಭ್ಯದ ಅನುಷ್ಠಾನದ ನಂತರ, ಸುಮಾರು 37 ಲಕ್ಷ ಏರ್ಟೆಲ್ ಬಳಕೆದಾರರು ವಿಮಾನದಲ್ಲಿ ತಡೆರಹಿತ ಇಂಟರ್ನೆಟ್ ಸೌಲಭ್ಯವನ್ನು ಪಡೆಯಲಿದ್ದಾರೆ.
TRAIನಿಂದ ಈಗಾಗಲೇ ದೊರೆತಿದೆ ಅನುಮೋದನೆ
ಟೆಲಿಕಾಂ ನಿಯಂತ್ರಕ TRAI(Telecom Regulatory Authority of India) ಕಳೆದ ಕೆಲವು ದಿನಗಳ ಹಿಂದೆ ದೇಶೀಯ ವಿಮಾನಯಾನದಲ್ಲಿ ಈ ಸೌಲಭ್ಯ ಒದಗಿಸಲು ಅನುಮೋದಿಸಿದೆ. ಶೀಘ್ರದಲ್ಲೇ ಇದರ ಪ್ರಾಯೋಗಿಕ ಯೋಜನೆ ಪ್ರಾರಂಭವಾಗಲಿದೆ. ಸುರಕ್ಷತೆಯ ಆಧಾರದ ಮೇಲೆ ವಿಮಾನದಲ್ಲಿ ಇಂಟರ್ನೆಟ್ ಬಳಕೆಯನ್ನು ಈ ಮೊದಲು ಭಾರತ ವಿರೋಧಿಸಿತ್ತು. ಆದಾಗ್ಯೂ, ಕಳೆದ ತಿಂಗಳು ಭಾರತೀಯ ವಾಯುಪಡೆಯಲ್ಲಿ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲು TRAI ಘೋಷಿಸಿದೆ. ಆದರೆ, ಮೊಬೈಲ್ ಫೋನ್ ಫ್ಲೈಟ್ ಮೋಡ್ನಲ್ಲಿದ್ದಾಗ ಮಾತ್ರ ಈ ಸೌಲಭ್ಯ ಬಳಕೆಗೆ ದೊರೆಯಲಿದೆ ಮತ್ತು ವಿಮಾನವು 3000 ಮೀಟರ್ ಎತ್ತರದಲ್ಲಿದ್ದಾಗ ಮಾತ್ರ ಇಂಟರ್ನೆಟ್ ಆನ್ ಮಾಡಬೇಕು ಎಂಬ ಷರತ್ತನ್ನು Telecom Regulatory Authority of India ವಿಧಿಸಿದೆ.