ಇಂಟರ್‌ಸಿಟಿ ಮತ್ತು ಶತಾಬ್ದಿ ರೈಲ್ವೆ ಪ್ರಯಾಣಿಕರಿಗೊಂದು ಸಿಹಿ ಸುದ್ದಿ...!

ನೀವು ಒಂದು ವೇಳೆ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ಖಂಡಿತಾ ನಿಮ್ಮ ಉಪಯೋಗಕ್ಕೆ ಬರುತ್ತದೆ. ಭಾರತೀಯ ರೈಲ್ವೆಯಿಂದ ತಾಂತ್ರಿಕ ಸುಧಾರಣೆಗಳನ್ನು ಮಾಡಿದ ನಂತರ ಅರೆ-ಹೈ ವೇಗದ ರೈಲುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದೆ.

Written by - Manjunath N | Last Updated : Jul 21, 2022, 06:11 PM IST
  • ಮೊದಲ ಹಂತದಲ್ಲಿ ದೆಹಲಿ-ಲಖನೌ, ದೆಹಲಿ-ಅಮೃತಸರ ಮತ್ತು ಪುರಿ-ಹೌರಾ ಸೇರಿದಂತೆ 27 ರೈಲ್ವೆ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲಾಗುವುದು.
  • ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ರೈಲು ಕೋಚ್‌ಗಳ ನಿರ್ಮಾಣವು ವೇಗವಾಗಿ ನಡೆಯುತ್ತಿದೆ.
ಇಂಟರ್‌ಸಿಟಿ ಮತ್ತು ಶತಾಬ್ದಿ ರೈಲ್ವೆ ಪ್ರಯಾಣಿಕರಿಗೊಂದು ಸಿಹಿ ಸುದ್ದಿ...! title=
file photo

ನವದೆಹಲಿ: ನೀವು ಒಂದು ವೇಳೆ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ಖಂಡಿತಾ ನಿಮ್ಮ ಉಪಯೋಗಕ್ಕೆ ಬರುತ್ತದೆ. ಭಾರತೀಯ ರೈಲ್ವೆಯಿಂದ ತಾಂತ್ರಿಕ ಸುಧಾರಣೆಗಳನ್ನು ಮಾಡಿದ ನಂತರ ಅರೆ-ಹೈ ವೇಗದ ರೈಲುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದೆ.ಅದರ ಭಾಗವಾಗಿ ಈಗ ರೈಲ್ವೆ ಇಲಾಖೆ ಕೆಲವು ಮಹತ್ವದ ಬದಲಾವಣೆಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಿದೆ.

ಇದನ್ನೂ ಓದಿ: ಅಶ್ಲೀಲ ವರ್ತನೆಯ ವೀಡಿಯೋ ವೈರಲ್‌, ಪೋಲಿಸರಿಂದ ತನಿಖೆ

ಲಕ್ಷಗಟ್ಟಲೆ ಪ್ರಯಾಣಿಕರು ಶತಾಬ್ದಿ, ಜನ ಶತಾಬ್ದಿ ಮತ್ತು ಇಂಟರ್‌ಸಿಟಿ ರೈಲುಗಳ ಮೂಲಕ ಪ್ರಯಾಣಿಸುತ್ತಾರೆ. ಈ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರೈಲ್ವೇಯು ಎಲ್ಲಾ ಮೂರು ರೈಲುಗಳನ್ನು ವಂದೇ ಭಾರತ್ ಎಕ್ಸ್‌ಪ್ರೆಸ್‌ನೊಂದಿಗೆ ಬದಲಾಯಿಸಲು ಸಿದ್ಧತೆ ನಡೆಸಿದೆ. ಈ ರೈಲುಗಳನ್ನು ವಂದೇ ಭಾರತ್‌ನಿಂದ ಬದಲಾಯಿಸಿದರೆ, ಪ್ರಯಾಣಿಕರು ಇನ್ನೂ ಕಡಿಮೆ ಸಮಯದಲ್ಲಿ ತಮ್ಮ ನಿಗದಿತ ಸ್ಥಳವನ್ನು ತಲುಪಬಹುದಾಗಿದೆ.ಈಗ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಇದೇ ಆಗಸ್ಟ್ 15 ರಂದು ಪ್ರಾರಂಭವಾಗಲಿದೆ ರೈಲ್ವೆ ಇಲಾಖೆ ಹೇಳಿದೆ.

ಈ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಆಗಸ್ಟ್ 15 ರ ಸಂದರ್ಭದಲ್ಲಿ, ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಯೋಜನೆಯನ್ನು ಭಾರತೀಯ ರೈಲ್ವೆ ಹೊಂದಿದೆ. ಈಗ ಶತಾಬ್ದಿ, ಜನ ಶತಾಬ್ದಿ ಮತ್ತು ಇಂಟರ್‌ಸಿಟಿ ರೈಲುಗಳ ಪ್ರಯಾಣಿಕರು ಅರೆ-ಹೈ ಸ್ಪೀಡ್ ರೈಲು 'ವಂದೇ ಭಾರತ್' ಮೂಲಕ ಪ್ರಯಾಣಿಸಿದಾಗ, ಪ್ರಯಾಣವು ಮೊದಲಿಗಿಂತ ಹೆಚ್ಚು ಆಹ್ಲಾದಕರವಾಗಿರುತ್ತದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮುಂದಿನ ವರ್ಷದ ವೇಳೆಗೆ ದೇಶಾದ್ಯಂತ 75 ಹೊಸ ವಂದೇ ಭಾರತ್ ರೈಲುಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದ್ದರು.

27 ಮಾರ್ಗಗಳಲ್ಲಿ ಓಡಲಿದೆ ವಂದೇ ಭಾರತ್ ರೈಲು: 

ಮುಂಬರುವ ದಿನಗಳಲ್ಲಿ ಭಾರತೀಯ ರೈಲ್ವೇ ಶತಾಬ್ದಿ, ಜನಶತಾಬ್ದಿ ಮತ್ತು ಇಂಟರ್‌ಸಿಟಿ ರೈಲುಗಳನ್ನು ವಂದೇ ಭಾರತ್ ರೈಲುಗಳೊಂದಿಗೆ ಬದಲಾಯಿಸಲು ಯೋಜಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಅಲ್ಲದೇ, ಸಿದ್ಧತೆಗಳು ಭರದಿಂದ ಸಾಗಿವೆ. ಸದ್ಯ ಇದಕ್ಕಾಗಿ 27 ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾರ್ಗಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Indian Oil Recruitment 2022 : ಇಂಡಿಯನ್ ಆಯಿಲ್ ನಲ್ಲಿ 39 ಖಾಲಿ ಹುದ್ದೆಗಳಿಗೆ ಅರ್ಜಿ, ಇಲ್ಲಿ ಪರಿಶೀಲಿಸಿ!

ಈ ಮಾರ್ಗಗಳಲ್ಲಿ ಶತಾಬ್ದಿ ಬದಲು ಓಡಲಿದೆ ವಂದೇ ಭಾರತ್:

ಮೊದಲ ಹಂತದಲ್ಲಿ ದೆಹಲಿ-ಲಖನೌ, ದೆಹಲಿ-ಅಮೃತಸರ ಮತ್ತು ಪುರಿ-ಹೌರಾ ಸೇರಿದಂತೆ 27 ರೈಲ್ವೆ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲಾಗುವುದು. ಇದಲ್ಲದೇ, ದೆಹಲಿ-ಭೋಪಾಲ್ ಮತ್ತು ದೆಹಲಿ-ಚಂಡೀಗಢ ರೈಲು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಶತಾಬ್ದಿ ರೈಲುಗಳನ್ನು ಬದಲಾಯಿಸಲು ಸಹ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ವಂದೇ ಭಾರತ್ ರೈಲು ಕೋಚ್‌ಗಳ ನಿರ್ಮಾಣವು ವೇಗವಾಗಿ ನಡೆಯುತ್ತಿದೆ.ಆಗಸ್ಟ್ 2023 ರ ವೇಳೆಗೆ 75 ರೈಲುಗಳು ಸಿದ್ಧವಾಗುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News