Good News: ಮತ್ತೆ ತನ್ನ ಬಡ್ಡಿದರ ಇಳಿಕೆ ಮಾಡಿದ SBI, ಕಡಿಮೆಯಾಗಲಿದೆ EMI

ಈ ಕಡಿತದ ನಂತರ, ಎಸ್‌ಬಿಐನ ಎಂಸಿಎಲ್‌ಆರ್ ದರ ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ ಮಟ್ಟದ MCLR ಆಗಿದೆ.

Last Updated : Jul 8, 2020, 11:16 AM IST
Good News: ಮತ್ತೆ ತನ್ನ ಬಡ್ಡಿದರ ಇಳಿಕೆ ಮಾಡಿದ SBI, ಕಡಿಮೆಯಾಗಲಿದೆ EMI title=

ನವದೆಹಲಿ: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ SBI ಮತ್ತೊಮ್ಮೆ ತನ್ನ ಸಾಲಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಈ ಕುರಿತು ಬುಧವಾರ ಮಾಹಿತಿ ನೀಡಿರುವ ಬ್ಯಾಂಕ್, ಮುಂದಿನ ಮೂರು ತಿಂಗಳ ಅವಧಿಗಾಗಿ MCLR ಅನ್ನದು 5-10 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿದೆ ಎಂದು ಹೇಳಿದೆ. ಅಂದರೆ ಮುಂದಿನ ಮೂರು ತಿಂಗಳ ಅವಧಿಗೆ ಈ ದರದಲ್ಲಿ ಶೇ.0.05-0.10 ಕಡಿತದೊಂದಿಗೆ ಬಡ್ಡಿ ದರ ಶೇ.6.65ಕ್ಕೆ ಬಂದು ತಲುಪಿದೆ. ತನ್ಮೂಲಕ ಬ್ಯಾಂಕ್ ನ EBLR (External Benchmark Lending Rates) ಉತ್ತಮಗೊಂಡಿದೆ. ನೂತನ ದರಗಳು ಜುಲೈ 10 ರಿಂದ ಜಾರಿಗೆ ಬರಲಿವೆ. ಸತತ 14 ನೇ ಬಾರಿಗೆ ಬ್ಯಾಂಕ್ ತನ್ನ MCLR ದರದಲ್ಲಿ ಕಡಿತಗೊಳಿಸಿದೆ. ಈ ತಿದ್ದುಪಡಿಯ ಬಳಿಕ ಬ್ಯಾಂಕ್ ನ MCLR ದರ ಮಾರುಕಟ್ಟೆಯಲ್ಲಿಯೇ ಅತ್ಯಂತ ಕಡಿಮೆ MCLR ಎನಿಸಿಕೊಂಡಿದೆ.

ಯಾರಿಗೆ ಲಾಭ?
ಯಾವ ಗ್ರಾಹಕರ ಸಾಲ MCLRಗೆ ಲಗತ್ತಿಸಳಗಿದೆಯೋ ಆ ಗ್ರಾಹಕರಿಗೆ ಇದರ ಲಾಭ ಸಿಗಲಿದೆ. ಅಂದರೆ, ಅವರ ಬ್ಯಾಂಕ್ EMI ಒತ್ತಡ ಕಡಿಮೆಯಾಗಲಿದೆ. ಆದರೆ, ಸಾಲದ ರಿಸೆಟ್ ಅವಧಿ ಬಂದ ಬಳಿಕ ಮಾತ್ರ ಇದು ಅನ್ವಯಿಸಲಿದೆ. ಸಾಮಾನ್ಯವಾಗಿ ಬ್ಯಾಂಕ್ ಗಳು 6 ತಿಂಗಳು ಅಥವಾ ಒಂದು ವರ್ಷದ ಅವಧಿಯ ರಿಸೆಟ್ ಪಿರಿಯಡ್ ಆಧರಿಸಿ ಗೃಹ ಸಾಲ ನೀಡುತ್ತವೆ. ಈ ರಿಸೆಟ್ ದಿನಾಂಕ ಬಂದ ಬಳಿಕ ಹೊಸ ದರದ ಲಾಭ ಗ್ರಾಹಕರಿಗೆ ಸಿಗಲಿದೆ. ಏಪ್ರಿಲ್ 1, 2016 ರಿಂದ ಎಲ್ಲಾ ಬ್ಯಾಂಕ್ ಗಳು MCLR (Marginal Cost Based Lending Rate) ಆಧರಿಸಿ ಸಾಲ ನೀಡಲು ಆರಂಭಿಸಿವೆ. ಆದರೆ, ಇನ್ನೂ ಕೂಡ ಬ್ಯಾಂಕ್ ಗಳು EBLR ವನ್ನು ಆಧರಿಸಿ ಕೂಡ ಸಾಲ ನೀಡುತ್ತವೆ.

ಕೆನರಾ ಬ್ಯಾಂಕ್ ಹಾಗೂ BoM ಗಳು ಕೂಡ MCLR ಕಡಿತಗೊಳಿಸಿದ್ದವು
ಇದಕ್ಕೂ ಮೊದಲು ಸಾರ್ವಜನಿಕ ವಲಯದ ಬ್ಯಾಂಕ್ ಗಳಾಗಿರುವ ಕೆನರಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ಕೂಡ ಸೋಮವಾರ ಎಂಸಿಎಲ್ಆರ್ ಆಧಾರಿತ ಸಾಲ ದರವನ್ನು ಕ್ರಮೇಣವಾಗಿ ಶೇಕಡಾ 0.10 ಮತ್ತು 0.20 ರಷ್ಟು ಕಡಿತಗೊಳಿಸಿದ್ದವು.ಈ ಕಡಿತ ಟರ್ಮ್ ಸಾಲಗಳಿಗೆ ಅನ್ವಯಿಸಲಿದೆ ಎಂದಿರುವ ಬ್ಯಾಂಕ್ ಗಳು, ಪರಿಷ್ಕೃತ ದರಗಳು ಜುಲೈ 7 ರಿಂದ ಜಾರಿಗೊಳಿಸಿವೆ.

ರೆಪೋ ರೇಟ್ ನಲ್ಲಿ ಕಡಿತಗೊಳಿಸಿದ್ದ RBI
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಸಾಲದ ಮೇಲಿನ ಬಡ್ಡಿದರಗಳು ಕಡಿಮೆಯಾಗಿವೆ. ಸೊರಗಿಹೋಗಿರುವ ಆರ್ಥಿಕತೆಗೆ ಬಲ ನೀಡುವ ಉದ್ದೇಶದಿಂದ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಒಟ್ಟಾಗಿ ಈ ದರ ಕಡಿತ ಮಾಡಿವೆ. ಆರ್‌ಬಿಐ ಕಳೆದ ತಿಂಗಳು ತನ್ನ ರೆಪೊ ದರವನ್ನು ಶೇಕಡಾ 0.40 ರಷ್ಟು ಕಡಿತಗೊಳಿಸಿತ್ತು, ನಂತರ ಅದು ಶೇಕಡಾ 4 ಕ್ಕೆ ಇಳಿದಿದೆ. ಇದಕ್ಕೂ ಮುನ್ನ ಮಾರ್ಚ್‌ನಲ್ಲಿ ರೆಪೊ ದರವನ್ನು ಶೇಕಡಾ 0.75 ರಷ್ಟು ಕಡಿತಗೊಳಿಸಲಾಗಿತ್ತು.
 

Trending News