ನವದೆಹಲಿ : ಡಿಜಿಟಲ್ ಪಾವತಿಗಾಗಿ ಹೆಚ್ಚು ಜನಪ್ರಿಯವಾಗಿರುವ ಗೂಗಲ್ ಪೇ (Google Pay) ವಿಶ್ವದ ದೈತ್ಯ ಗೂಗಲ್‌ನ ಡಿಜಿಟಲ್ ಪಾವತಿ ಅಪ್ಲಿಕೇಶನ್ ಆಗಿದೆ. ಈಗ ಕಂಪನಿಯು ಮತ್ತೊಂದು ದೊಡ್ಡ ಬ್ಯಾಂಗ್ ಉತ್ಪನ್ನವನ್ನು ತರಲು ಹೊರಟಿದ್ದು ಗೂಗಲ್ (Google) ಸ್ಮಾರ್ಟ್ ಡೆಬಿಟ್ ಕಾರ್ಡ್ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಚಿಲ್ಲರೆ ಅಂಗಡಿಗಳಲ್ಲಿ ಶಾಪಿಂಗ್ ಮಾಡುವಾಗ ಈ ಕಾರ್ಡ್ ಅನ್ನು ಬಳಕೆದಾರರು ಬಳಸಬಹುದು ಎನ್ನಲಾಗಿದೆ. ಈ ಬಗ್ಗೆ ಕಂಪನಿ ಯಾವುದೇ ಘೋಷಣೆ ಮಾಡದ ಕಂಪನಿ ಗೂಗಲ್ ಸ್ಮಾರ್ಟ್ ಡೆಬಿಟ್ ಕಾರ್ಡ್ನ ಚಿತ್ರವನ್ನು ಮಾತ್ರ ಹಂಚಿಕೊಂಡಿದೆ ಎಂದು ವರದಿಯಾಗಿದೆ.
Chrome ಬಳಕೆದಾರರಿಗೆ Google ನೀಡಿದೆ ಈ ಎಚ್ಚರಿಕೆ
TechCrunch ವರದಿಯನ್ವಯ ಗೂಗಲ್ ಸ್ಮಾರ್ಟ್ ಡೆಬಿಟ್ ಕಾರ್ಡ್ ಅನ್ನು ಗೂಗಲ್ ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾಗುವುದು. ಅದು ಬಳಕೆದಾರರಿಗೆ ಖರೀದಿಗಳನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಲು, ಅವರ ಬ್ಯಾಲೆನ್ಸ್ ಪರಿಶೀಲಿಸಲು ಅಥವಾ ಅವರ ಖಾತೆಯನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಆಪಲ್ ಕಾರ್ಡಿನಂತೆ ಗೂಗಲ್ ಸ್ಮಾರ್ಟ್ ಡೆಬಿಟ್ ಕಾರ್ಡ್ ಅನ್ನು ಸ್ಮಾರ್ಟ್ ಕಾರ್ಡ್ ಜೊತೆಗೆ ಸ್ಮಾರ್ಟ್ ಕಾರ್ಡ್ ಆಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಬಳಸಬಹುದು.
ಕರೋನಾ ವೈರಸ್ ನಿಯಂತ್ರಣಕ್ಕೆ GOOGLE ಕೈಗೊಂಡಿದೆ ಈ ನಿರ್ಧಾರ
ವರದಿಯ ಪ್ರಕಾರ ಗೂಗಲ್ ಸ್ಮಾರ್ಟ್ ಡೆಬಿಟ್ ಕಾರ್ಡ್ ಅನ್ನು ಗೂಗಲ್ ಕಾರ್ಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಕಂಪನಿಯು ಸಿಟಿಬ್ಯಾಂಕ್ ಮತ್ತು ಸ್ಟ್ಯಾನ್‌ಫೋರ್ಡ್ ಫೆಡರಲ್ ಕ್ರೆಡಿಟ್ ಯೂನಿಯನ್ ಜೊತೆ ಪಾಲುದಾರಿಕೆ ಮಾಡಿಕೊಳ್ಳುವ ಬಗ್ಗೆ ಕಂಪನಿ ಮಾತುಕತೆ ನಡೆಸುತ್ತಿದೆ. ಗೂಗಲ್ ಕಾರ್ಡ್ ಅನ್ನು ಗೂಗಲ್ ಅಪ್ಲಿಕೇಶನ್‌ಗಳು ಮತ್ತು ಬ್ಲೂಟೂತ್‌ಗೆ ಸಂಪರ್ಕಿಸಬಹುದು. ಅಂದರೆ ಬಳಕೆದಾರರು ಬ್ಲೂಟೂತ್ ಮೂಲಕ ಪಾವತಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಈಗ 42 ಭಾಷೆಗಳಲ್ಲಿ ನಿಮಗೆ ಸಹಾಯ ಮಾಡಲಿದೆ Google Assistant
ಭಾರತದಲ್ಲಿ ಜನಪ್ರಿಯವಾಗಿದೆ ಗೂಗಲ್ ಪೇ (Google Pay):
ಗೂಗಲ್ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಪ್ರಸ್ತುತ ಈ ಅಪ್ಲಿಕೇಶನ್ ಖಾತೆದಾರರಿಗೆ ತಮ್ಮ ಭೌತಿಕ ಡೆಬಿಟ್ ಕಾರ್ಡ್ ಸೇರಿಸಲು ಸಹ ಅನುಮತಿಸುತ್ತದೆ, ಇದನ್ನು ಡಿಜಿಟಲ್ ಪಾವತಿಗಾಗಿ ಬಳಸಬಹುದು. ಗೂಗಲ್ ಪೇ ಕಾರ್ಡ್ ಸಹಾಯದಿಂದ ಕಂಪನಿಯು ಫಿನ್ಟೆಕ್ ಆಗಲು ಸಹಾಯ ಮಾಡುತ್ತದೆ. ಈ ಕಾರ್ಡ್ ಖರೀದಿಸಲು ಅಥವಾ ಖಾತೆಯ ಮಾಹಿತಿಗಾಗಿ ಗೂಗಲ್ ಇಂಟರ್ಚೇಂಜ್ ಶುಲ್ಕವನ್ನು ವಿಧಿಸಬಹುದು.