ದೇಶದಲ್ಲಿ ಕೊಳ್ಳೆ ಹೊಡೆಯಲು ಸರ್ಕಾರ ಅನುವು ಮಾಡಿಕೊಡುತ್ತಿದೆ- ಸೀತಾರಾಮ್ ಯೆಚೂರಿ

ದೇಶದಲ್ಲಿ ಕೊಳ್ಳೆ ಹೊಡೆಯಲು ಸರ್ಕಾರ ಅನುವು ಮಾಡಿಕೊಡುತ್ತಿದೆ ಎಂದು ಸೀತಾರಾಮ್ ಯೆಚೂರಿ ಟೀಕಿಸಿದ್ದಾರೆ. 

Last Updated : Sep 13, 2018, 06:45 PM IST
ದೇಶದಲ್ಲಿ ಕೊಳ್ಳೆ ಹೊಡೆಯಲು ಸರ್ಕಾರ ಅನುವು ಮಾಡಿಕೊಡುತ್ತಿದೆ- ಸೀತಾರಾಮ್ ಯೆಚೂರಿ title=

ನವದೆಹಲಿ: ದೇಶದಲ್ಲಿ ಕೊಳ್ಳೆ ಹೊಡೆಯಲು ಸರ್ಕಾರ ಅನುವು ಮಾಡಿಕೊಡುತ್ತಿದೆ ಎಂದು ಸೀತಾರಾಮ್ ಯೆಚೂರಿ ಟೀಕಿಸಿದ್ದಾರೆ. 

ಮಲ್ಯ ಇತ್ತೀಚಿಗೆ ದೇಶವನ್ನು ಬಿಡುವ ಮೊದಲು ಜೈಟ್ಲಿಯವರನ್ನು ಭೇಟಿ ಮಾಡಿರುವುದಾಗಿ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಪಿಎಂ ನಾಯಕ ಸೀತಾರಾಂ ಯೆಚೂರಿ" ದೇಶದಲ್ಲಿ ಕೊಳ್ಳೆ ಹೊಡೆಯಲು ಸರ್ಕಾರ ಅನುವು ಮಾಡಿಕೊಳ್ಳುತ್ತಿದೆ.ಆದ್ದರಿಂದ ದೇಶದಲ್ಲಿ ಹೆಚ್ಚು ಜನರು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಯೆಚೂರಿ ತಿಳಿಸಿದರು.

ಸರ್ಕಾರವನ್ನು ಇದೆಲ್ಲವನ್ನು ನಿರಾಕರಿಸಬಹುದು ಆದರೆ ಬ್ಯಾಂಕ್ ನಿಂದ ಸಾರ್ವಜನಿಕರ ಹಣವನ್ನು ಲೂಟಿ ಹೊಡೆದು ತಲೆ ಮೆರೆಸಿಕೊಂಡಿರುವವರು ಸರ್ಕಾರದ ಗಮನಕ್ಕೆ ಬರದ ಹಾಗೆ ದೇಶವನ್ನು ತೊರೆದಿರುವವರಲ್ಲಿ ಒಬ್ಬರು ಎಂದು ಯೆಚೂರಿ ವ್ಯಂಗವಾಡಿದ್ದಾರೆ.

ಇನ್ನೊಂದೆಡೆಗೆ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಜೈಟ್ಲಿಯವರು ಮಲ್ಯ ಜೊತೆಗಿನ ಭೇಟಿಯಲ್ಲಿ ಮಾತುಕತೆಯನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ.

 

Trending News