ಸೋಶಿಯಲ್ ಮಿಡಿಯಾ ನಿಯಂತ್ರಣ ಪ್ರಸ್ತಾವ, 'ಸುಪ್ರೀಂ' ಮುಂದೆ ಯುಟರ್ನ್ ಹೊಡೆದ ಕೇಂದ್ರ ಸರ್ಕಾರ

ಈ ಅರ್ಜಿಯನ್ನು ಟಿಎಂಸಿ ಶಾಸಕ ಮಹಿವಾ ಮೊಹಿತ್ರ ಅವರು ಸಲ್ಲಿಸಿದ್ದರು.ಸರ್ಕಾರದ ಈ ಅಧಿಸೂಚನೆಯು ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವುದಲ್ಲದೆ ವಾಟ್ಸ್ ಅಪ್ ನಂತಹ ಮೆಸಜ್ ಗಳ ಮೇಲೆ ಹದ್ದಿನ ಕಣ್ಣು ಇಡುವ ಮೂಲಕ ಕಣ್ಗಾವಲು ರಾಜ್ಯಕ್ಕೆ  ಕಾರಣವಾಗಲಿದೆ ಎಂದು ಅವರು ಆರೋಪಿಸಿದ್ದರು

Last Updated : Aug 3, 2018, 02:15 PM IST
ಸೋಶಿಯಲ್ ಮಿಡಿಯಾ ನಿಯಂತ್ರಣ ಪ್ರಸ್ತಾವ, 'ಸುಪ್ರೀಂ' ಮುಂದೆ ಯುಟರ್ನ್ ಹೊಡೆದ ಕೇಂದ್ರ ಸರ್ಕಾರ  title=

ನವದೆಹಲಿ:ಸೋಶಿಯಲ್ ಮೀಡಿಯಾ ನಿಯಂತ್ರಣಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ ತನ್ನ ಈ ಪ್ರಸ್ತಾವದ ಅಧಿಸೂಚನೆಯನ್ನು ಹಿಂತೆಗೆದುಕೊಂಡಿದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. 

ಈ ವಿಚಾರವಾಗಿ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿದಾರರು ಇದು ನಾಗರಿಕರ ಚಟುವಟಿಕೆಗಳ ನಿಯಂತ್ರಿಸುತ್ತದೆ ಎಂದು ಅವರು ಆರೋಪಿಸಿದ್ದರು. ಈ ವಿಚಾರವಾಗಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠದ ಮುಂದೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲರನ್ನು ಕೇಂದ್ರ ಸರ್ಕಾರದ ಈ ಅಧಿಸೂಚನೆಯ ಪ್ರಸ್ತಾವನೆಯನ್ನು  ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.  

ನ್ಯಾಯಮೂರ್ತಿ ಎ.ಎಮ್ ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ರನ್ನು ಒಳಗೊಂಡ ಪೀಠಕ್ಕೆ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಸೋಶಿಯಲ್ ಮೀಡಿಯಾ ನೀತಿಯ ವಿಚಾರವನ್ನು ಸರ್ಕಾರವು ಸಂಪೂರ್ಣವಾಗಿ ಮರು ಪರಿಶೀಲಿಸುತ್ತದೆ ಎಂದು ತಿಳಿಸಿದರು.

ಈ ಅರ್ಜಿಯನ್ನು ಟಿಎಂಸಿ ಶಾಸಕ ಮಹಿವಾ ಮೊಹಿತ್ರ ಅವರು ಸಲ್ಲಿಸಿದ್ದರು.ಸರ್ಕಾರದ ಈ ಅಧಿಸೂಚನೆಯು ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವುದಲ್ಲದೆ ವಾಟ್ಸ್ ಅಪ್ ನಂತಹ ಮೆಸಜ್ ಗಳ ಮೇಲೆ ಹದ್ದಿನ ಕಣ್ಣು ಇಡುವ ಮೂಲಕ ಕಣ್ಗಾವಲು ರಾಜ್ಯಕ್ಕೆ  ಕಾರಣವಾಗಲಿದೆ ಎಂದು ಅವರು ಆರೋಪಿಸಿದ್ದರು. ಇದೆ ಜುಲೈ 13 ರಂದು ಸುಪ್ರಿಂಕೋರ್ಟ್ ಈ ಕುರಿತ ಅರ್ಜಿಯನ್ನು ವಿಚಾರಣೆ ನಡೆಸಲು ಒಪ್ಪಿಗೆ ನೀಡಿತ್ತು.

 

Trending News